ನಿವೃತ್ತ ಪೋಲಿಸರಿಂದ ಕೊಲೆ ಬೆದರಿಕೆ;ರಕ್ಷಣೆಗೆ ಮನವಿ

ದಾವಣಗೆರೆ.ಜೂ.3; ಸ್ವಯಂ ನಿವೃತ್ತ ಪೋಲಿಸರೊಬ್ಬರಿಂದ ಕೊಲೆಬೆದರಿಕೆ ಇದ್ದು ನನಗೆ ರಕ್ಷಣೆ ನೀಡಬೇಕು ಹಾಗೂ ಬೆದರಿಕೆ ಹಾಕಿದವರ ಮೇಲೆ ಕ್ರಮಕೈಗೊಳ್ಳಬೇಕೆಂದು ಹರಪನಹಳ್ಳಿ ತಾಲ್ಲೂಕಿನ ಶಿರಗಾನಹಳ್ಳಿ ತಾಂಡದ ನಿವಾಸಿ ಸಂತೋಷ್ ಕೆ  ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಸ್ವಯಂ ನಿವೃತ್ತಿ ಪಡೆದ ಪೋಲಿಸ್ ವಿಶ್ವನಾಥ್ ಎಂಬುವವರು ನನ್ನ ಮೇಲೆ ವೈಯಕ್ತಿಕ ದ್ವೇಷದಿಂದ ನನ್ನನ್ನು ಕೊಲೆ ಮಾಡಲು ನನಗೆ ಪರಿಚಯವಿರುವ ಯುವಕನಿಗೆ 5 ಲಕ್ಷರೂಗೆ ಸುಪಾರಿ ನೀಡಿದ್ದಾರೆ.ಆ ಯುವಕ ಈ ವಿಚಾರವನ್ನು ನನ್ನ ಬಳಿ ಹೇಳಿದ್ದಾರೆ.ಇದರಿಂದಾಗಿ ಆ ಯುವನಿಗೂ ಜೀವ ಬೆದರಿಕೆ ಹಾಕಿದ್ದಾರೆ.ಈ ಬಗ್ಗೆ ಹಲವಾಗಲು ಪೊಲಿಸ್ ಠಾಣೆಗೆ ಯುವಕ ವಿನಯ್ ದೂರು ನೀಡಲು ಮುಂದಾದಾಗ ಬೇರೆ ಕಾರಣಕ್ಕೆ ಗಲಾಟೆ ನಡೆಸಿದ ನಿವೃತ್ತ ಪೊಲಿಸರು ವಿನಯ್ ಮೇಲೆ ದೂರು ದಾಖಲಾಗುವಂತೆ ಮಾಡಿದ್ದಲ್ಲದೇ ಜೀವ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದರು.ನನ್ನ ಸಹೊದರನ ಮನೆಗೆ ನುಗ್ಗಿ ಆತನ ಮೇಲೂ ಹಲ್ಲೆ ಮಾಡಿಸಿದ್ದಾರೆ ಈ ಬಗ್ಗೆ ದೂರು ನೀಡಲು ಹೊದರೆ ನಮ್ಮ ಪ್ರಕರಣ ದಾಖಲು ಮಾಡಿಕೊಳ್ಳುತಿಲ್ಲ.ನನಗೆ ಜೀವ ಬೆದರಿಕೆ ಇದ್ದು ನನಗೆ ಮತ್ತು ನನ್ನ ಕುಟುಂಬಕ್ಕೆ ರಕ್ಷಣೆ ನೀಡಬೇಕು ಹಾಗೂ ಮಾಜಿ ಪೊಲಿಸ್ ವಿಶ್ವನಾಥ್ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಅರುಣ್ ಕುಮಾರ್ ನಾಯ್ಕ್,ವಿನಯ್ ಕುಮಾರ್,ಹನುಮಂತ ನಾಯ್ಕ್ ಇದ್ದರು.