ನಿವೃತ್ತ ನೌಕರರ ಸಮಸ್ಯೆಗಳಿಗೆ ದ್ವನಿಯಾಗುವೆ ; ಶಾಸಕ ಎಸ್.ವಿ.ಆರ್   

ಜಗಳೂರು.ಜ.೨೨; ಪಟ್ಟಣದ ದೇವೆಗೌಡ ಬಡಾವಣೆಯ ಜನನ ಸಂಘದ ಕಛೇರಿ ಆವರಣದಲ್ಲಿ ನಡೆದ ರಾಜ್ಯ ಸರ್ಕಾರಿ ನಿವೃತ್ತ ನೌಕರರ ವಾರ್ಷಿಕೋತ್ಸವ ಸಮಾರಂಭ ಹಾಗೂ ಪಿಂಚಣಿದಾರರ ಸನ್ಮಾನ ಕಾರ್ಯಕ್ರಮದಲ್ಲಿ ಶಾಸಕ ಎಸ್ ವಿ ರಾಮಚಂದ್ರ ಭಾಗವಹಿಸಿ ಮಾತನಾಡಿದರು.ನಿವೃತ್ತ ನೌಕರರ ಸ್ಮಾರಕ ಭವನ ನಿರ್ಮಿಸಲು ಸಂಸದರಿಂದ 05 ಲಕ್ಷ  ರೂಗಳು   ನಮ್ಮ ಅನುದಾನ 10 ಲಕ್ಷ ಗಳು ಸೇರಿದಂತೆ ಒಟ್ಟು 20 ಲಕ್ಷ ರೂಗಳಲ್ಲಿ ಉತ್ತಮ ಭವನ ನಿರ್ಮಿಸಲು  ಶೀಘ್ರವೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು. ನೌಕರರ ಬೆಂಬಲಕ್ಕೆ ಸದಾಯಿದ್ದು  ತಾವುಗಳು ಇಳಿ ವಯಸ್ಸಿನಲ್ಲೂ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಕ್ರಿಯಾಶೀಲರಾಗಿರುವುದು  ಯುವಕರುನ್ನು ನಾಚುವಂತಿದೆ. ತಮ್ಮಗಳ ಆರೋಗ್ಯವನ್ನ ಕಾಪಾಡಿಕೊಂಡು ವ್ಯಸನಮುಕ್ತರಾಗಿ ತಮ್ಮ ಸಮಯವನ್ನು ಕಳೆಯಬೇಕೆಂದು ಸಲಹೆ ನೀಡಿದರು‌.ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಮಾತನಾಡಿ ನಿವೃತ್ತ ನೌಕರರಿಗೆ ಕಾರ್ಯಕ್ಕೆ ಸದಾ ನಮ್ಮ ಬೆಂಬಲವಿದೆ. ನಾನೊಬ್ಬ ನಿವೃತ್ತ ನೌಕರರಲ್ಲಿ ಒಬ್ಬನಾಗಿ ನಿಮ್ಮಗಳ ಅಗತ್ಯ ಸೇವೆಗೆ ಸದಾ ಬೆಂಬಲವಿದೆ ಎಂದರು.ತಹಶೀಲ್ದಾರ್ ಜಿ ಸಂತೋಷಕುಮಾರ್  ಮಾತನಾಡಿ  ಸರ್ಕಾರಿ ನಿವೃತ್ತ  ನೌಕರರ‌ ಸಮಸ್ಯೆಗಳುನ್ನು ಸಂಘಟಿತರಾಗಿ  ಒಗ್ಗಟ್ಟಿನಿಂದ ಪರಿಹಾರ ಕಂಡುಕೊಳ್ಳಲು ಸಂಘಟನೆ ಅತ್ಯಂತ ಸಹಕಾರಿಯಾಗಿದೆ. ನಂತರ ಪ್ರಾಸ್ತಾವಿಕವಾಗಿ ಎ ಪಾಲಯ್ಯ ಮಾತನಾಡಿದರುಈ ಸಂದರ್ಭದಲ್ಲಿ ಶಾಸಕರ ಪತ್ನಿ ಇಂದಿರಾ ರಾಮಚಂದ್ರ.ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶ್ವರಪ್ಪ.ಪ.ಪಂ ಮಾಜಿ ಉಪಾಧ್ಯಕ್ಷೆ ಲಲಿತಾಮ್ಮ .ನಿವೃತ್ತ ನೌಕರರ ಜಿಲ್ಲಾಧ್ಯಕ್ಷ  ಉಜ್ಜಿನಪ್ಪ. ಹಿರಿಯ ಸಾಹಿತಿಗಳಾದ ಎನ್ ಟಿ ಎರ್ರಿಸ್ವಾಮಿ ಸೇರಿದಂತೆ ಪ್ರಾಥಮಿಕ ಶಾಲಾ ಶಿಕ್ಷಕರ  ಸಂಘದ ಅಧ್ಯಕ್ಷ ಹನುಮಂತೇಶ್.ನೌಕರರ ಸಂಘದ ಅದ್ಯಕ್ಷ ಚಂದ್ರಪ್ಪ. ಸ ಕ.ನಿ.ಮಾಜಿ ಅಧ್ಯಕ್ಷ ನಾರಪ್ಪ.ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ.ನಿ ನೌ ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ. ನಿವೃತ್ತ ನೌಕರರ ಸಂಘದ ಸದಸ್ಯರಾದ ಎಂ .ಎಸ್ ಪಾಟೇಲ್.ಚಂದ್ರಣ್ಣ   ಸೇರಿದಂತೆ ಹಾಜರಿದ್ದರು.