
ದಾವಣಗೆರೆ. ಮೇ.೨೨; ನಿವೃತ್ತ ನೌಕರರ ಸಂಘದ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯದರ್ಶಿ ಎಸ್ ಎಂ ವೀರಯ್ಯ ಅಮೆರಿಕಾಗೆ ತೆರಳಿದ್ದಾರೆ ಈ ಹಿನ್ನೆಲೆಯಲ್ಲಿ ಸಂಘದಲ್ಲಿ ಅವರಿಗೆ ಶುಭ ಹಾರೈಸಿ ಬೀಳ್ಕೊಡಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ ಆರ್ ಉಜ್ಜನಪ್ಪ ವಹಿಸಿದ್ದರು ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಡಾ ವೀರಯ್ಯ, ರಾಜ್ಯ ಉಪಾಧ್ಯಕ್ಷ ಎಸ್ ಗುರುಮೂರ್ತಿ, ಕಾರ್ಯದರ್ಶಿ ಬಿ ಕೆ ರೇಣುಕಾಮೂರ್ತಿ, ಎನ್ ಜಿ ಬಸವರಾಜ್,ಬಿ ದಿಳ್ಯಪ್ಪ, ಕೆ ನಾಗಪ್ಪ,ಸಿ ಜಿ ಕಲ್ಲಪ್ಪ ಇತರರು ಭಾಗವಹಿಸಿ ಅವರನ್ನು ಅಭಿನಂದಿಸಿದರು.