ನಿವೃತ್ತ ನೌಕರರ ಕ್ರೀಡಾ ಕೂಟದ ಉದ್ಘಾಟನೆ

ದಾವಣಗೆರೆ ಜ 23; ನಗರದ ಬಾಪೂಜಿ ಪ್ರೌಢಶಾಲೆ ಆವರಣದಲ್ಲಿ ಜರುಗಿದ ದಾವಣಗೆರೆ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಕ್ರೀಡಾಕೂಟವನ್ನು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ ಪಾಲಾಕ್ಷ ಉದ್ಘಾಟನೆ ಮಾಡಿದರು. ನಂತರ  ಮಾತನಾಡಿದ ಅವರು ನಿವೃತ್ತ ನೌಕರರ ಮನೋವಿಕಾಸಕ್ಕ ಸ್ಪೂರ್ತಿಯಿಂದ ಭಾಗವಹಿಸಿರುವುದು ತುಂಬಾ ಸಂತೋಷವಾಯಿತು. ಇತ್ತೀಚೆಗೆ ನಡೆದ ನಮ್ಮ ಕ್ರೀಡಾ ಕೂಟವನ್ನು ಹೋಲಿಸಿದರೆ ಇಲ್ಲಿ ಹೆಚ್ಚು ಉತ್ಸಾಹ ಕಾಣುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.ಅಧ್ಯಕ್ಷತೆಯನ್ನು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎ ಆರ್ ಉಜ್ಜನಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಜ್ಯ ನಿವೃತ್ತ ನೌಕರರ ಸಂಘದ ವಿಭಾಗೀಯ ಉಪಾಧ್ಯಕ್ಷ  ಎಸ್ ಗುರುಮೂರ್ತಿ ಡಾ ಹೆಚ್ ಎಂ ವೀರಯ್ಯ ಕಾರ್ಯದರ್ಶಿ ಬಿ ಕೆ ರೇಣುಕಮೂರ್ತಿ ಸಂಘದ ಪದಾದಿಕಾರಿಗಳಾದ ಬಿ ಎಂ ಮಲ್ಲಿಕಾರ್ಜುನಯ್ಯ,ಜಿ ಸಿ ಕಲ್ಲಪ್ಪ ಹಾಗೂ ಇತರ ಆಜೀವ ಸದಸ್ಯರು ಭಾಗವಹಿಸಿದ್ದರು ಕ್ರೀಡಾ ಕೂಟವನ್ನು ಬಾಪೂಜಿ ಪ್ರೌಢಶಾಲೆ ಹಿರಿಯ ದೈಹಿಕ ಶಿಕ್ಷಕ ಬಿ ಇ ರವಿಕುಮಾರ್ ಸಂಗಡಿಗ ಸಿ ಹನುಮಂತಪ್ಪ ನಡೆಸಿಕೊಟ್ಟರು ಭಾಗವಹಿಸಿದ ಎಲ್ಲರಿಗೂ ಅಧ್ಯಕ್ಷರಾದ ಎ ಆರ್ ಉಜ್ಜನಪ್ಪ ಅಭಿನಂದಿಸಿದರು.