ನಿವೃತ್ತ ದೇಶ ಸೇವಕನಿಗೆ ಸನ್ಮಾನ

ವಿಜಯಪುರ, ಆ.5-ಶ್ರೀ ರಾಜಪ್ಪ ಎಂ. ಮಾಳಜಿ ಇವರು ಸುಮಾರು 18 ವರ್ಷಗಳ ಕಾಲ ಆರ್ಮಿಯಲ್ಲಿ ಸೇವೆ ಸಲ್ಲಿಸಿ ದಿನಾಂಕ 31-7-2022 ರಂದು ನಿವೃತ್ತಿ ಹೊಂದಿ ವಿಜಯಪುರಕ್ಕೆ ಮರಳಿದ್ದಾರೆ. ಇವರು ಶ್ರೀಲಂಕಾ, ಪಾಕಿಸ್ತಾನದ ಗಡಿಭಾಗದಲ್ಲಿ 2 ವರ್ಷಗಳ ಕಾಲ ಸೇವೆ ಸಲ್ಲಿಸಿ ಹಾಗೂ ಇನ್ನಿತರಗಡಿ ಭಾಗಗಳಲ್ಲಿ ಸುದೀರ್ಘ 18 ವರ್ಷಗಳ ಕಾಲ ದೇಶಕ್ಕಾಗಿ ಸೇವೆ ಮಾಡಿದ್ದು ಇವರಿಗೆ ವಿಜಯಪುರದ ದೋಸ್ತ ಸ್ಪೋಟ್ಸ್ ಕ್ಲಬ್ ವತಿಯಿಂದ ದೇವರಾಜ ಅರಸ ಭವನದ ಆವರಣದಲ್ಲಿ ಸನ್ಮಾನಿಸಲಾಯಿತು.

ಈ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀನಾನಾಗೌಡ ಕಳಸಗೊಂಡ ವಹಿಸಿದ್ದರು. ಹಾಗೂ ಕಾರ್ಯಕ್ರಮದ ಅತಿಥಿಗಳಾಗಿ ವೀರೇಂದ್ರ ಗುಚ್ಚಟ್ಟಿ ಅಶೋಕ ಲೈಲೆಂಡ ಮಾಲಿಕರು ಹಾಗೂ ಡಾ. ಮಲ್ಲನಗೌಡ ಬಿರಾದಾರ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳು ಇವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ ಹಾಗೂ ಸ್ವಾಗತವನ್ನು ಡಾ. ವಿಜಯಮಹಾಂತೇಶ ದೇಸಾಯಿ ವೈದ್ಯಾಧಿಕಾರಿಗಳು ಇವರು ಮಾಡಿದರು.

ಕಾರ್ಯಕ್ರಮದಲ್ಲಿ ಲಕ್ಷ್ಮಣ ಹಂದ್ರಾಳ, ಡಾ. ಪ್ರವೀಣ ಬಗಲಿ, ಡಾ. ರಾಜು ಯಲಗೊಂಡ, ಬಸವರಾಜ ಯಾದವಾಡ, ಸುನೀಲ, ಶರಣಗೌಡ ಬಗಲಿ, ಚಂದ್ರಶೇಖರ ಬಿರಾದಾರ, ಅರವಿಂದ ಸಜ್ಜನ, ಷಣ್ಮುಖ ಮಡಿವಾಳ, ವಿರುಪಾಕ್ಷಿ ನುಚ್ಚಿ, ವೆಂಕಟೇಶ ನಾಡಗೌಡ, ದೇವಾಪೂರ ಮುಂತಾದ ದೋಸ್ತ ಸ್ಪೋಟ್ಸ್ ಕ್ಲಬ್‍ನ ಸದಸ್ಯರು ಭಾಗವಹಿಸಿದ್ದರು.