ನಿವೃತ್ತ ಡಿ ಗ್ರೂಪ್ ಮಹಿಳೆಗೆ ಸನ್ಮಾನ ಬೀಳ್ಕೊಡುಗೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ 3 :- ಪಟ್ಟಣದ ಗಂಗಮ್ಮ ಎಂಬುವವರು ತಾಲೂಕಿನ ಹಿರೇಹೆಗ್ಡಾಳ್ ಸರ್ಕಾರಿ ಪ್ರೌಢಶಾಲೆಯಲ್ಲಿ ಸತತ 17ವರ್ಷದಿಂದ ಡಿ ಗ್ರೂಪ್ ನೌಕರರಾಗಿ ಸೇವೆ ಸಲ್ಲಿಸಿ ಸೇವೆಯಿಂದ ನಿವೃತ್ತರಾಗಿದ್ದರಿಂದ ಆ ಪ್ರೌಢಶಾಲೆಯ ಮುಖ್ಯ ಗುರುಗಳಾದ ರಂಗಪ್ಪ ಹಾಗೂ ಶಿಕ್ಷಕ ವರ್ಗದವರು ಹಾಗೂ ಶಾಲಾಭಿವೃದ್ಧಿ ಸಮಿತಿಯರು ಸೇರಿ ಗಂಗಮ್ಮ ಇವರನ್ನು ಸನ್ಮಾನಿಸಿ ಗೌರವಪೂರ್ವಕವಾಗಿ ಬಿಳ್ಕೊಟ್ಟರು. ಈ ಸಂದರ್ಭದಲ್ಲಿ ಕೂಡ್ಲಿಗಿಯ ಶ್ರೀನಿವಾಸ ಹಾಗೂ ಸೊಲ್ಲಮ್ಮ ಉಪಸ್ಥಿತರಿದ್ದರು.