ನಿವೃತ್ತ ಡಿಜಿಪಿ ಎಸ್.ಸಿ. ಸಕ್ಸೇನಾ ನಿಧನ

ಬೆಂಗಳೂರು,ನ.೧೮-ಅನಾರೋಗ್ಯದಿಂದ ಬಳಲುತ್ತಿದ್ದ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ(ಡಿಜಿಪಿ) ಎಸ್.ಸಿ. ಸಕ್ಸೇನಾ ಅವರು ಇಂದು ಬೆಳಿಗ್ಗೆ
ನಿಧನರಾದರು.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಸಿ. ಸಕ್ಸೇನಾ ಅವರು ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಬೆಳಿಗ್ಗೆ ೬:೩೦ಕ್ಕೆ ಕೊನೆಯುಸಿರೆಳೆದಿದ್ದಾರೆ.
ಕಳೆದ ಒಂದುವರೆ ತಿಂಗಳು ಐಸಿಯೂನಲ್ಲಿ ಚಿಕಿತ್ಸೆ ಪಡೆದಿದ್ದ ಸಕ್ಸೇನಾ ಅವರನ್ನು ೧೦ ದಿನಗಳ ಹಿಂದಷ್ಟೇ ಆರೋಗ್ಯದಲ್ಲಿ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ಜನರಲ್ ವಾರ್ಡ್?ಗೆ ಶಿಫ್ಟ್ ಮಾಡಲಾಗಿತ್ತು.
ಆದರೆ ಮತ್ತೆ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. ಹೀಗಾಗಿ ಚಿಕಿತ್ಸೆ ಪಲಿಸದೆ ಎಸ್.ಸಿ ಸಕ್ಸೇನಾ ಬೆಳಿಗ್ಗೆ ಮೃತಪಟ್ಟ ಅವರಿಗೆ ೭೦ ವರ್ಷ ವಯಸ್ಸಾಗಿತ್ತು.
೧೯೭೬ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದ ಸಕ್ಸೇನಾ ಅಲ್ಲಾಳಸಂದ್ರದ ಜಕ್ಕೂರು ಪ್ಲಾಂಟೇಷನ್ ಲೇಔಟ್ ನಲ್ಲಿ ವಾಸವಿದ್ದರು ಮಧ್ಯಾಹ್ನ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯ ಕ್ರಿಯೆ ನಡೆಸಲಾಯಿತು.