ನಿವೃತ್ತ ಗೃಹರಕ್ಷಕರಿಗೆ ಸನ್ಮಾನ

ಧಾರವಾಡ ನ.13-: ನಗರದ ಸರ್ಕಾರಿ ನೌಕರ ಭವನದಲ್ಲಿ ಧಾರವಾಡ ಜಿಲ್ಲೆಯ ಧಾರವಾಡ ಜಿಲ್ಲಾ ಘಟಕದ ಗೃಹರಕ್ಷಕದಳ ವತಿಯಿಂದ ನಿವೃತಿಗೊಂಡ ಗೃಹರಕ್ಷಕ ಆರ್.ಸಿ.ಕುಂದರಗಿ ಹಾಗೂ ಗೃಹರಕ್ಷಕಿ ಉಮಾ.ಆರ್. ಕಾಮಕರ ಅವರಿಗೆ ಬೀಳ್ಕೊಂಡುಗೆ ಹಾಗೂ ಗಣನೀಯ ಸೇವೆ ಸಲ್ಲಿದವರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಜರುಗಿತು.ನಾಗರಿಕ ಸೇವಾದಳದ ಮುಖ್ಯ ವಾರ್ಡನ್ ಆಗಿ ಅಧಿಕಾರ ಸ್ವೀಕರಿಸಿದ ಡಾ. ಸತೀಶ್ ಇರಕಲ್ ಹಾಗೂ ಡೆಪ್ಯೂಟಿ ವಾರ್ಡನ್ ರಾಗಿ ಅಧಿಕಾರ ವಹಿಸಿಕೊಂಡ ರಾಹುಲ್ ಮುನಗೇಕರ್ ಅವರನ್ನು ಹಾಗೂ ಗೃಹರಕ್ಷಕದಳ ನಿವೃತ್ತ ಡೆಪ್ಯೂಟಿ ಕಮಾಂಡರ್ ಬಿ.ಆರ್.ಕಂದಗಲ್,ರಾಷ್ಟ್ರಪತಿ ಪದಕ ವಿಜೇತ ಹಾಗೂ ಸೇವೆಯಲ್ಲಿ ನಿವೃತ್ತಗೊಂಡಿದ್ದ ನಾಗರಾಜ ಆಲದಕಟ್ಟಿ ಅವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಗೃಹರಕ್ಷಕದಳದ ಜಿಲ್ಲಾ ಕಮಾಂಡೆಂಟ್ ಸತೀಶ್ ಪಾಟೀಲರವರು ಮಾತನಾಡುತ್ತಾ ಆರ್.ಸಿ.ಕುಂದರಗಿ ಜಮ್ಮುಕಾಶ್ಮಿರ ಅಂಡಮಾನ ನಿಕೋಬಾರ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಧಾರವಾಡ ಜಿಲ್ಲೆಯಿಂದ ಪ್ರತಿನಿಧಿಸಿ ಉತ್ತಮವಾದ ಸೇವೆಯನ್ನು ಸಲ್ಲಿಸಿದ್ದಾರೆ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಮಹೇಜ್ ಸಂಸ್ಥೆಯ ಅಧ್ಯಕ್ಷರಾದ ಡಾ.ಎಮ್.ಎ ಮುಮ್ಮಿಗಟ್ಟಿ, ಮಾತನಾಡುತ್ತಾ ಗೃಹರಕ್ಷಕರ ಸೇವೆ ಸ್ಮರಣಿಯಾದುದು ಎಂದು ತಿಳಿಸಿದರು. ಗೃಹರಕ್ಷಕದಳ ನಿವೃತ್ತ ಡೆಪ್ಯೂಟಿ ಕಮಾಂಡರ್ ಬಿ.ಆರ್.ಕಂದಗಲ್,ಸ್ಟಾಪ್ ಆಫೀಸರ್ ಡಾ.ಪ್ರಕಾಶ ಪವಾಡಶೆಟ್ಟಿ ವೇದಿಕೆ ಮೇಲೆ ಇದ್ದರು.

ಈ ಸಂದರ್ಭದಲ್ಲಿ ಗೃಹರಕ್ಷಕದಳದ ಅಧಿಕಾರಿಗಳಾದ ಸಹಾಯಕ ಬೋಧಕರಾದ ಟಿ.ಎ.ಬಾದಾಮಿ, ಗೃಹರಕ್ಷಕದಳ ಧಾರವಾಡ ಘಟಕಾಧಿಕಾರಿ ಅಶೋಕ ಬಿ.ಗೌಡರ್, ಅತಿಥಿಗಳನ್ನು ಸ್ವಾಗತಿಸಿ ಪುಷ್ಟಗುಚ್ಚ ನೀಡಿದರು. ಗೃಹರಕ್ಷಕ ಮತ್ತು ಗೃಹರಕ್ಷಕಕಿ ಸಿಬ್ಬಂದಿಗಳು ಉಪಸ್ಥಿತರಿದ್ದರು.