ನಿವೃತ್ತ ಕೃಷಿ ಅಧಿಕಾರಿ ಹನುಮಂತಪ್ಪ ನಿಧನ

ಹಿರಿಯೂರು.ಡಿ.28: ಹಿರಿಯೂರು ನಗರದ  ನಿವೃತ್ತ ಕೃಷಿ ಅಧಿಕಾರಿ ಕುರುಬ ಸಮಾಜದ ಮುಖಂಡರು ಹಾಗೂ ಕನಕ ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ಸದಸ್ಯರು ಆಗಿದ್ದ ಎಲ್.ಹನುಮಂತಪ್ಪ (81) ಇವರು ಭಾನುವಾರ ರಾತ್ರಿ ನಿಧನ ಹೊಂದಿರುತ್ತಾರೆ. ಮೃತರು ಪತ್ನಿ ಹಾಗೂ ನಗರಸಭೆ ಮಾಜಿ ಸದಸ್ಯ ಹೆಚ್. ನಟರಾಜ್ ಸೇರಿದಂತೆ ನಾಲ್ವರು ಪುತ್ರರು ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ ಅವರ ಅಂತ್ಯಕ್ರಿಯೆ ಸೋಮವಾರ  ಮದ್ಯಾಹ್ನ  ನಗರದ ಹರಿಶ್ಚಂದ್ರ ಘಾಟ್ ಬಳಿ ಇರುವ ರುದ್ರಭೂಮಿಯಲ್ಲಿ ನೆರವೇರಿತು. ಶಾಸಕರಾದ ಪೂರ್ಣಿಮಾ ಶ್ರೀನಿವಾಸ್, ರಾಜ್ಯ ಯಾದವ ಸಮಾಜದ ಅಧ್ಯಕ್ದರಾದ ಡಿ.ಟಿ.ಶ್ರೀನಿವಾಸ್ ಮತ್ತು ಜಿಲ್ಲಾ ಬಿಜೆಪಿ ಮುಖಂಡ ನಿಶಾನಿ ಜಯ್ಯಣ್ಣ  ಮತ್ತು  ಅನೇಕ ಯುವ ಮುಖಂಡರು ಹನುಮಂತಪ್ಪನವರ ನಿಧನಕ್ಕೆ ಸಂತಾಪ ವ್ಯಕ್ತ ಪಡಿಸಿದ್ದಾರೆ.