ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಅ.2 :- ಕೂಡ್ಲಿಗಿ ಸಾರಿಗೆ ಸಂಸ್ಥೆಯಲ್ಲಿ ಕಂಟ್ರೋಲರ್ ಆಗಿ ನಿವೃತ್ತಿ ಹೊಂದಿದ್ದ ಎಂ ಬಿ ರುದ್ರಮುನಿ (67) ಕಳೆದ ರಾತ್ರಿ ಹೃದಯಘಾತದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಸಾರಿಗೆ ಸಂಸ್ಥೆಯಲ್ಲಿ ಮೂರು ದಶಕಗಳ ಕಾಲ ಅಪಾರ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ರುದ್ರಮುನಿ ಅವರಿಗೆ ಇತ್ತೀಚಿಗೆ ಹೃದಯದಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಿ ನಂತರ ಮಗಳ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದರು ಆದರೆ ಕಳೆದ ರಾತ್ರಿ ಸಹ ಮತ್ತೆ ಹೃದಯಘಾತ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದೋಯ್ದರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆಂದು ಕುಟುಂಬ ಮೂಲಗಳು ತಿಳಿಸಿದ್ದು ಇಂದು ಮಧ್ಯಾಹ್ನ ಅವರ ಸ್ವಂತ ಊರಾದ ನಾಯಕನಹಟ್ಟಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ಮೃತರು ಪತ್ನಿ, ಐವರು ಪುತ್ರಿಯರು ಹಾಗೂ ಓರ್ವ ಪುತ್ರ ಮತ್ತು ಪತ್ರಿಕಾ ಪ್ರತಿನಿಧಿಯಾದ ಬೆಂಗಳೂರು ಖಾಸಗಿ ಚಾನೆಲ್ ಪ್ರಧಾನ ವ್ಯವಸ್ಥಾಪಕ ಅಳಿಯ ರಮೇಶ ಹಿರೇಜಂಬೂರ್ ಸೇರಿದಂತೆ ಉಳಿದ ಅಳಿಯಂದಿರು, ಬಂಧು ಮಿತ್ರರನ್ನು ಅಗಲಿದ್ದಾರೆ.
One attachment • Scanned by Gmail