ನಿವೃತ್ತ ಐಎಎಸ್ ಅಧಿಕಾರಿ, ನಟ ಕೆ ಶಿವರಾಮ್ ಇನ್ನಿಲ್ಲ

ಬೆಂಗಳೂರು, ಫೆ.29- ನಿವೃತ್ತ ಹಿರಿಯ ಐಎಎಸ್ ಅಧಿಕಾರಿ, ನಟಣ ರಾಜಕಾರಣಿ ಕೆ.ಶಿವರಾಮ್ ಹೃದಯಾಘಾತದಿಂದ ಇಂದು ಸಂಜೆ ನಿಧನರಾಗಿದ್ದಾರೆ.

ಕನ್ನಡ ದಲ್ಲಿ ಐಎಎಸ್ ಪರೀಕ್ಷೆ ಬರೆದು ಐಎಎಸ್ ಆದ ಹಿರಿಮೆಗೆ ಪಾತ್ರರಾಗಿದ್ದ ಶಿವರಾಮ್ ಅವರಿಗೆ ಕಳೆದ 6 ದಿನಗಳ ಹಿಂದೆ ರಕ್ತದ ಒತ್ತಡ ದಲ್ಲಿ ಏರಿಳಿತವಾಗಿ ಹೃದಯಾಘಾತದವಾಗಿತ್ತು.ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿತ್ತು. ಇಂದು ಸಂಜೆ ಮತ್ತೊಮ್ಮೆ ಹೃದಯಾಘಾತವಾಗಿ ಅವರು ಇಹಲೋಹ ತ್ಯಜಿಸಿದ್ದಾರೆ.

ಐಎಎಸ್ ಅಧಿಕಾರಿಯಾಗಿದ್ದ ವೇಳೆ ಸಿನಿಮಾ ದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ಸರು. ಬಾ ನಲ್ಲೆ ಮಧು ಚಂದ್ರಿಕೆ ಚಿತ್ರದ ಮೂಲಕ ಅಪಾರ ಜನಪ್ರಿಯತೆ ಪಡೆದಿದ್ದರು. ಆ ನಂತರ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.

ಜೊತೆಗೆ ರಾಜಕಾತಣದಲ್ಲಿ ಸಾಧನೆ ಮಾಡಬೇಕು ಎನ್ನುವ ಹಂಬಲದಿಂದ ಉನ್ನತ ಹುದ್ದಯಲ್ಲಿದ್ದ ಸಮಯದಲ್ಲಿ ಸ್ವಯಂ ನಿವೃತ್ತಿ ಪಡೆದು ವಿಜಯಪುರ ದಿಂದ ಲೋಕಸಭೆ ಗೆ ಸ್ಪರ್ಧಿಸಿದ್ದರು. ಮೊದಲ ಪ್ರಯತ್ನದಲ್ಲಿ ಸೋಲು ಕಂಡಿದ್ದರು. ಆನಂತರ ಹಲವು ಪ್ರಯತ್ನ ಮಾಡಿದ್ದರೂ ಸಾದ್ಯವಾಗಿರಲಿಲ್ಲ.

ಈ ಬಾರಿ ಬಿಜೆಪಿಯಿಂದ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ತಯಾರಿ ಮಾಡಿಕೊಂಡಿದ್ದರು. ನಾಲ್ಕೈದು ತಿಂಗಳಿಂದ ಪ್ರವಾಸ ಮಾಡಿ ಬಳಲಿದ್ದರರು. ವಾರದ ಹಿಂದೆ ಹೃದಯಾಘಾತವಾಗಿ ಆಸ್ಪತ್ರೆ ಸೇರಿದ್ದರು. ಅವರನ್ನು ಬದುಕಿಸುವ ಎಲ್ಲಾ ಪ್ರಯತ್ನ ವಿಫಕವಾಗಿ ಸಂಜೆ ಇಹಲೋಕ ತ್ಯಜಿಸಿದ್ದಾರೆ.

ನಾಳೆ ಅಂತಿಮ ದರ್ಶನ

ನಾಳೆ ಬೆಳಗ್ಗೆ 9 ಗಂಟೆಯಿಂದ ಮದ್ಯಾಹ್ನ 3 ಗಂಟೆಯ ತನಕ ರವೀಂದ್ರ ಕಲಾಕ್ಷೇತ್ರದಲ್ಲಿ ಕೆ. ಶಿವರಾಮ್ ಅವರ ಪಾರ್ಥೀವ ಶರೀರವನ್ನು ಅಂತಿ‌ಮ ದರ್ಶನಕ್ಕೆ ಇಡಲಾಗುವುದು ಎಂದು ಅವರ ಅಳಿಯ ಹಾಗು ನಟ ಪ್ರದೀಪ್ ತಿಳಿಸಿದ್ಸಾರೆ.

ಸಿನಿಮಾ ,ರಾಜಕಾರಣ ಮತ್ತು ಆಡಳಿತ ಕ್ಷೇತ್ರದಲ್ಲಿ ಅವರ ಸ್ನೇಹಿತರು, ಒಡನಾಡಿಗಳು ಮತ್ತು ಅಭಿಮಾನಿಗಳಿಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಿದ ನಂತರ ಸಂಜೆ ಎಲ್ಲಿ ಅಂತ್ಯಕ್ರಿಯೆ ನಡೆಸಯವ ಬಗ್ಗೆ ನಿರ್ದಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.