ನಿವೃತ್ತ ಉಪನಿರೀಕ್ಷಕ ನಂಜುಂಡೇಗೌಡ ನಿಧನ

ಕೋಲಾರ, ಏ. ೨೯: ತಾಂತ್ರಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರೀಕ್ಷಕ ತಾಲೂಕಿನ ಕೋಟಿಗಾನಹಳ್ಳಿ ಗ್ರಾಮದ ಕೆ.ವಿ ನಂಜುಂಡೇಗೌಡ (೮೩) ರವರು ನ್ಯೂಮೋನಿಯಾ ಖಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ ೨೮-೪-೨೦೨೧ರ ಬೆಳಗ್ಗೆ ನಿಧನರಾಗಿದ್ದಾರೆ.
ಇವರು ಕರ್ನಾಟಕ ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಉಪಾಧ್ಯಾಯರಾಗಿ, ಪ್ರಾಂಶುಪಾಲರಾಗಿ, ಉಪ ನಿರ್ದೇಶಕರಾಗಿ ೩೬ ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. ಇವರು ಡಿಪ್ಲಮೋ ಮತ್ತು ಇಂಜನೀಯರಿಂಗ್ ವಿದ್ಯಾರ್ಥಿಗಳಿಗಾಗಿ ೧೫ ಪುಸ್ತಕಗಳನ್ನು ಹಾಗೂ ಕೋಟಿಗಾನಹಳ್ಳಿ ಗ್ರಾಮದ ಇತಿಹಾಸ ಹೇಳುವ “ನೆನಪಿನಂಗಳದಿಂದ” (ನಮ್ಮೂರು ನಮ್ಮ ಜನ) ಪುಸ್ತಕವನ್ನು ರಚಿಸಿರುತ್ತಾರೆ.
ಇವರ ನಿಧನಕ್ಕೆ ಮೇಸ್ಟ್ರು ಕೆ.ವಿ ನಾರಾಯಣಪ್ಪ ಕುಟುಂಬ ಹಾಗೂ ಕೋಟಿಗಾನಹಳ್ಳಿ ಗ್ರಾಮದ ಜನತೆ ಮತ್ತು ಇವರ ಅಪಾರ ವಿದ್ಯಾರ್ಥಿಗಳು ಸಂತಾಪವನ್ನು ಸೂಚಿಸಿರುತ್ತಾರೆ.
ದಯಾನಂದ ಸಾಗರ್ ಇಂಜನೀಯರಿಂಗ್ ಕಾಲೇಜಿನಲ್ಲಿ ಸಿವಿಲ್ ವಿಭಾಗದಲ್ಲಿ ಹೆಚ್.ಓ.ಡಿಯಾಗಿ ಮಗ ಕೆ.ಎನ್ ವಿಶ್ವನಾಥ್ ಕಾರ್ಯನಿರ್ವಹಿಸುತ್ತಿದ್ದಾರೆ. ಪುತ್ರಿ ಕೆ.ಎನ್.ಶೋಭಾ ಸಾಪ್ಟ್‌ವೇರ್ ಇಂಜಿನೀಯರ್, ಸೊಸೆ ರಾಜೇಶ್ವರಿ ದಯಾನಂದ ಸಾಗರ್ ಇಂಜನೀಯರಿಂಗ್ ಕಾಲೇಜಿನಲ್ಲಿ ಬಯೋಟೆಕ್ ವಿಭಾಗದ ಹೆಚ್.ಓ.ಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.