ನಿವೃತ್ತಿ: ಬಳಗಾನೂರಮಠರಿಗೆ ಸನ್ಮಾನ

(ಸಂಜೆವಾಣಿ ನ್ಯೂಸ್)
ಧಾರವಾಡ,ಜು6 : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಭಾಗವೇ ಆಗಿರುವ ಬಿಆರ್ಟಿಎಸ್' ಸಾರಿಗೆ ವ್ಯವಸ್ಥೆಯಲ್ಲಿ ತಾಂತ್ರಿಕ ಸಹಾಯಕ ಹುದ್ದೆಯಿಂದ ನಿವೃತ್ತಿ ಹೊಂದಿದ ರವಿ ಸಿ. ಬಳಗಾನೂರಮಠ ಅವರಿಗೆ ಇಲ್ಲಿಗೆ ಸಮೀಪದ ಅಮ್ಮಿನಬಾವಿ ಗ್ರಾಮದಲ್ಲಿ ನಡೆದ ಸರಳ ಸಮಾರಂಭದಲ್ಲಿ ಗೌರವಿಸಲಾಯಿತು. ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ರವಿ ಸಿ. ಬಳಗಾನೂರಮಠ ದಂಪತಿಗಳನ್ನು ಶಾಲು ಹೊದಿಸಿ ಗೌರವಿಸಿ ಆಶೀರ್ವದಿಸಿದರು. ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷತೆವಹಿಸಿದ್ದರು. ಅಭಿನಂದನಾಪರ ಮಾತನಾಡಿದಜೀವನ ಶಿಕ್ಷಣ’ ಮಾಸಪತ್ರಿಕೆಯ ನಿವೃತ್ತ ಸಂಪಾದಕ ಡಾ. ಗುರುಮೂರ್ತಿ ಯರಗಂಬಳಿಮಠ, 1989 ಏಪ್ರೀಲ್‍ದಲ್ಲಿ ಜಮಖಂಡಿ ಡೀಪೆÇೀದಿಂದ ಸೇವೆಗೆ ಆರಂಭಿಸಿದ ಆರ್.ಸಿ. ಬಳಗಾನೂರಮಠ ಅವರು, ನಂತರ ಹುಬ್ಬಳ್ಳಿ-ಧಾರವಾಡ ಸೇರಿ ಒಟ್ಟು 34 ವರ್ಷಗಳ ಅಖಂಡ ಸೇವೆ ಸಲ್ಲಿಸಿದ್ದು, ಸದಾ ಸಮಯ ಪ್ರಜ್ಞೆ ಹಾಗೂ ಕೆಲಸದಲ್ಲಿ ಆಸಕ್ತಿಯನ್ನು ಮೈಗೂಡಿಸಿಕೊಂಡಿದ್ದರು ಎಂದರು. ವಿಶಾಲ ಹಿರೇಮಠ ಸ್ವಾಗತಿಸಿದರು. ವಿನುತಾ ಹಿಡಕಿಮಠ ನಿರೂಪಿಸಿದರು. ಮಯೂರ ಸುತಗಟ್ಟಿ ವಂದಿಸಿದರು. ಅಭಿಷೇಕ ಗಿರಿಯಪ್ಪನವರ, ಮಹೇಶ ಬಿ.ಆರ್. ಇತರರು ಇದ್ದರು.