ನಿವೃತ್ತಿ ಬಗ್ಗೆ ಪೋಸ್ಟ್‌ ಹಾಕಿ, ಟ್ವಿಸ್ಟ್‌ ಕೊಟ್ಟ ಪಿ.ವಿ ಸಿಂಧು

ನವದೆಹಲಿ, ನ 2- ‘ಡೆನ್ಮಾರ್ಕ್ ಓಪನ್ ಕೊನೆಯ ಸ್ಟ್ರಾ’ ಎಂದು ಹೇಳುವ ಮೂಲಕ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ತನ್ನ ಅಭಿಮಾನಿಗಳಿಗೆ ಹೃದಯಕ್ಕೆ ಕೊಳ್ಳಿ ಇಟ್ಟಿದ್ದಾರೆ.

ಪಿ.ವಿ ಸಿಂಧು ‘ಐ ರಿಟೈರ್’ (‘I RETIRE’) ಎಂದು ಟ್ವೀಟ್ ಮಾಡುವ ಮೂಲಕ ಬ್ಯಾಟ್ಮಿಂಟನ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಡೆನ್ಮಾರ್ಕ್ ಓಪನ್‌ ತನ್ನ ಅಂತಿಮ ಟೂರ್ನಿ. ‘ನಾನು ನಿವೃತ್ತಿ ಹೊಂದಿದ್ದೇನೆ’ ಎಂದು ಪೋಸ್ಟ್ ಮಾಡುವ ಮೂಲಕ ಪಿ.ವಿ. ಸಿಂಧು ತಮ್ಮ ಅಭಿಮಾನಿಗಳಿಗೆ ಅಕ್ಷರಶಃ ಶಾಕ್ ನೀಡಿದ್ದಾರೆ.

ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಟ್ವೀಟರ್ ಮೂಲಕ ಸಂದೇಶ ನೀಡಿದ್ದು ‘ನನ್ನ ಆಲೋಚನೆಗಳನ್ನು ಸ್ಪಷ್ಟವಾಗಿಸಬೇಕೆಂದು ನಾನು ಬಹಳ ಸಮಯದಿಂದ ಯೋಚಿಸುತ್ತಿದ್ದೆ, ನಾನು ಬಹಳ ಸಮಯದಿಂದ ಈ ವಿಷಯದಲ್ಲಿ ಹೋರಾಡುತ್ತಿದ್ದೇನೆ ಎಂದು ಒಪ್ಪಿಕೊಳ್ಳುತ್ತೇನೆ, ಇದು ತಪ್ಪು ಎಂದು ನಿಮಗೆ ತಿಳಿದಿದೆ. ಅದಕ್ಕಾಗಿಯೇ ನಾನು ಇಂದು ಈ ಸಂದೇಶವನ್ನು ಬರೆಯುತ್ತಿದ್ದೇನೆ. ನಾನು ಇನ್ನು ಮುಂದೆ ಅದನ್ನು ಎದುರಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಈ ಹೇಳಿಕೆಯನ್ನು ಓದುವುದರಿಂದ ನೀವು ಆಶ್ಚರ್ಯಚಕಿತರಾಗುವಿರಿ ಅಥವಾ ಗೊಂದಲಕ್ಕೊಳಗಾಗುತ್ತೀರಿ ಎಂದು ನಾನು ಅರ್ಥಮಾಡಿಕೊಳ್ಳಬಲ್ಲೆ, ಆದರೆ ನೀವು ನನ್ನ ಆಲೋಚನೆಯನ್ನು ಸಂಪೂರ್ಣವಾಗಿ ಓದಿದಾಗ, ನೀವು ನನ್ನ ಆಲೋಚನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ನೀವು ನನ್ನನ್ನು ಬೆಂಬಲಿಸುವಿರಿ ಎಂದು ನಾನು ಭಾವಿಸುತ್ತೇನೆ ಎಂದವರು ಆಶಯ ವ್ಯಕ್ತಪಡಿಸಿದ್ದಾರೆ.

ಪಿವಿ ಸಿಂಧು ಈಗಾಗಲೇ ಡೆನ್ಮಾರ್ಕ್​ ಓಪನ್​ನಿಂದ ಹಿಂದೆ ಸರಿದಿದ್ದು, ಇದರ ಮಧ್ಯೆ ಅವರ ಕುಟುಂಬದಲ್ಲಿನ ವಿವಾದದಿಂದಾಗಿ ಅವರು ಲಂಡನ್​ನಲ್ಲಿ ಉಳಿದುಕೊಂಡಿದ್ದಾರೆ ಎಂಬ ವದಂತಿ ನಡುವೆ ಅವರು ಮಾಡಿರುವ ಟ್ವೀಟ್​​ ಗೊಂದಲ ಹುಟ್ಟಿಸಿತು.

ಡೆನ್ಮಾರ್ಕ್​ ಟೂರ್ನಿ ನನ್ನ ಕೊನೆಯ ಪಂದ್ಯವಾಗಿದೆ ಎಂದು ಹೇಳಿರುವ ಅವರು, ಕಳೆದ ಕೆಲ ತಿಂಗಳಿಂದ ಜಗತ್ತಿನಲ್ಲಿ ಅಶಾಂತಿ, ಕೆಟ್ಟ ಪರಿಸ್ಥಿತಿ ಉದ್ಬವವಾಗಿತ್ತು. ಆದರೆ ಇದೀಗ ಆ ಭಯದಿಂದ ನಾನು ನಿವೃತ್ತಿಯಾಗುತ್ತಿದ್ದೇನೆ ಎಂದಿದ್ದಾರೆ.ಕೊರೊನಾ ವೈರಸ್​ ಹಾಗೂ ಲಾಕ್​ಡೌನ್​ ನಮಗೆ ಅನೇಕ ಪಾಠ ಕಲಿಸಿದ್ದು, ಹೀಗಾಗಿ ಮನೆಯಲ್ಲೇ ಜೀವನ ಕಳೆಯುವಂತಾಗಿದೆ.

ಕೊರೊನಾ ವೈರಸ್​, ಶುಚಿತ್ವದ ಬಗ್ಗೆ ಇರುವ ನಿರ್ಲಕ್ಷ್ಯದಿಂದ ಇದೀಗ ನಿವೃತ್ತಿಯಾಗುತ್ತಿದ್ದು,ಕೆಟ್ಟ ಆಲೋಚನೆಗಳಿಂದಲೂ ನಾನು ನಿವೃತ್ತಿ ಪಡೆದುಕೊಳ್ಳುತ್ತಿದ್ದೇನೆ ಎಂದು ತಮ್ಮ ಟ್ವೀಟರ್​ನಲ್ಲಿ ಹೇಳಿಕೊಂಡಿದ್ದಾರೆ. ಇದರ ಜತೆಗೆ ತಾವು ಕ್ರೀಡೆಯಿಂದ ನಿವೃತ್ತಿಯಾಗುತ್ತಿಲ್ಲ, ಬದಲಾಗಿ ಮತ್ತಷ್ಟು ಬಲಿಷ್ಠವಾಗಿ ಮುಂದಿನ ಟೂರ್ನಿಗೋಸ್ಕರ ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಹೌದು ಪಿ.ವಿ ಸಿಂಧು ಅವರು ಮಾಡಿದ ‘ಡೆನ್ಮಾರ್ಕ್ ಓಪನ್ ಅಂತಿಮ ಸ್ಟ್ರಾ, ನಾನು ನಿವೃತ್ತಿ ಹೊಂದಿದ್ದೇನೆ’ ಎಂದು ಇತ್ತೀಚಿನ ಟ್ವಿಟ್ಟರ್ ಪೋಸ್ಟ್‌ ವೊಂದು ತನ್ನ ಅಭಿಮಾನಿಗಳು, ಮತ್ತು ಹಿತೈಷಿಗಳಿಗೆ ‘ಮಿನಿ ಹೃದಯಾಘಾತ’ ಕಾರಣವಾಯಿತು.