ನಿವೃತ್ತಿ ಉಪನ್ಯಾಸಕರಿಗೆ ಸನ್ಮಾನ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.10: ನಗರದ ಸಂತ ಜನರ ಪದವಿ ಪೂರ್ವ ಕಾಲೇಜಿನಲ್ಲಿ ,ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ದ್ವಿತೀಯ ಪಿಯುಸಿ ರಾಜ್ಯಶಾಸ್ತ್ರ ವಿಷಯದ ಮೌಲ್ಯಮಾಪನವು ನಡೆಯುತ್ತಿದ್ದು ಇಂದು ರಾಜ್ಯಶಾಸ್ತ್ರ ವಿಷಯದ  ವಯೋ ನಿವೃತ್ತಿ ಹೊಂದಿರುವ ಉಪನ್ಯಾಸಕರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತಾನರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶಿವರಾಂ ವಹಿಸಿಕೊಂಡಿದ್ದು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ನಮ್ಮ ಕೇಂದ್ರದಲ್ಲಿ ಯಾವುದೇ ಸಮಸ್ಯೆಗಳಿಲ್ಲದೆ ಮೌಲ್ಯಮಾಪನವು ನಡೆದಿದ್ದಕ್ಕೆ ಎಲ್ಲಾ ಉಪನ್ಯಾಸಕರಿಗೆ ಧನ್ಯವಾದಗಳು ಸಲ್ಲಿಸಿದರು.
ರಾಜ್ಯಶಾಸ್ತ್ರ ಮೌಲ್ಯಮಾಪನ ಕೇಂದ್ರದ ಮುಖ್ಯಪರೀಕ್ಷಕರಾದ , ಕೂಡ್ಲಿಗಿಯ ಹಿರೇಮಠ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರ  ಅರವಿಂದ್  ಕುಲಕರ್ಣಿ ಮಾತನಾಡಿ, ಶಿಬಿರದಲ್ಲಿ ಯಾವುದೇ ತೊಂದರೆಗಳಿಲ್ಲದೆ ನಮ್ಮ ಉಪನ್ಯಾಸಕರು ಉತ್ತಮ ರೀತಿಯಲ್ಲಿ ತಪ್ಪುಗಳಿಲ್ಲದಂತೆ ತಮ್ಮ ಕಾರ್ಯವನ್ನು ನಿರ್ವಹಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಷಯದ ಪರಿವೀಕ್ಷಕರಾದ ಬಳ್ಳಾರಿ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜ್ ಪ್ರಾಚಾರ್ಯರಾದ ಶ್ರೀಮತಿ ಸುಲೇಖ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕರಾದ ಕೃಷ್ಣಮೂರ್ತಿಸ್ವಾಗತಿಸಿದರು, ಶ್ರೀಮತಿ ರಮಾ ಗಣ್ಯಮಾನ್ಯರನ್ನು ವಂದಿಸಿದರು ನಾಗರೆಡ್ಡಿ ಕೆ ವಿ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ್, ಶರಣಬಸವರಾಜ್, ಶ್ರೀಶೈಲ್ , ಶರಣಪ್ಪ , ವೆಂಕಟೇಶಲು, ಗೌಡ್ರು ಬಸವರಾಜ್ , ದುರ್ಗಪ್ಪಹಾಗೂ ಬಳ್ಳಾರಿ ವಿಜಯನಗರ ಕೊಪ್ಪಳ ರಾಯಚೂರು ಜಿಲ್ಲೆಗಳ ಎಲ್ಲಾ ಉಪನ್ಯಾಸಕರು, ಉಪನ್ಯಾಸಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಈ ಕಾರ್ಯಕ್ರಮದಲ್ಲಿ ವಯೋ ನಿವೃತ್ತಿ ಹೊಂದಿರುವ ರಫಿಕ ಅಹ್ಮದ್, ಗಂಗಪ್ಪ ಆರ್ ಬಡಿಗೇರ್ ಮತ್ತು ಉದಯ್ ಸಿಂಗ್ ಇವರನ್ನು ಸನ್ಮಾನಿಸಲಾಯಿತು.