ನಿವೃತ್ತರಿಂದಲೂ ಆಹಾರ ಕಿಟ್ ವಿತರಣೆ ವಿಕಾಸ ಭಾರತಿ ಸಮಾನ ಮನಸ್ಕರ ವೇದಿಕೆಯಿಂದ ಕಡುಬಡವರಿಗೆ ಆಹಾರ ಕಿಟ್

ಹೊಸಪೇಟೆ ಜೂ4: ಸ್ಥಳೀಯ ವಿಕಾಸ ಭಾರತಿ ಸಮಾನ ಮನಸ್ಕರ ವೇದಿಕೆ ತಮ್ಮ ಸ್ವಂತ ಹಣದಲ್ಲಿ 20 ಕಡುಬಡವರಿಗೆ ಆಹಾರದ ಕಿಟ್‍ಗಳನ್ನು ನೀಡುವ ಮೂಲಕ ತಮ್ಮ ಮಾನವೀಯತೆಯನ್ನು ಮೆರೆದಿದ್ದಾರೆ.
ಜೀವನದ ಸಂದ್ಯಾಕಾಲದಲ್ಲಿ ಬರುವ ಪೆನ್‍ಷೇನ್‍ನಲ್ಲಿಯೇ ಜೀವನ ಸಾಗಿಸುತ್ತಿದ್ದರೂ ಇದರಲ್ಲಿಯೇ ಸ್ವಲ್ಪವಾದರೂ ಇನ್ನೊಬ್ಬರ ಜೀವನಕ್ಕೆ ಆಸರೆಯಾದರೆ ಅಷ್ಟೇ ಸಾಕು ಎಂಬ ಸಾರ್ಥಕತೆಯನ್ನು ಈ ತಂಡ ಮೆರೆದಿದೆ. ಅಂದಾಜು 2 ಸಾವಿರ ಮೌಲ್ಯದ ಆಹಾರ ದಿನಸಿಗಳಾದ ಅಕ್ಕಿ, ಬೆಳೆ, ಬೆಲ್ಲ, ಮಸಾಲಾ ಪದಾರ್ಥಗಳು ಸೇರಿದಂತೆ ದೈನಂದಿನ ಅವಶ್ಯಕತೆ ನೀಗಿಸುವ ಹಾಗೂ ಸುಮಾರ 15 ದಿನಗಳಿಗೆ ಆಗುವ ಆಹಾರ ಪರಿಕರಗಳನ್ನು ಅತ್ಯಂತ ಅವಶ್ಯಕತೆ ಇರುವವರಿಗೆ, ತಾವುಗಳೆ ಖುದ್ದಾಗಿ ಆರ್ಥಿಕ ಪರಿಸ್ಥಿತಿಯನ್ನು ನೋಡಿ ಹಂಚಿಕೆ ಮಾಡಿದರು.