ನಿವೃತ್ತರಾದ ಎ.ಎಸ್.ಐ ಎಲ್.ಮೂರ್ತಿಯವರಿಗೆ ಬೀಳ್ಕೊಡುಗೆ ::

ಹಿರಿಯೂರು.ಜೂ.1 : ತಾಲೂಕಿನ ಅಬ್ಬಿನ ಹೊಳೆ ಪೊಲೀಸ್ ಠಾಣೆಯ ಲ್ಲಿ    ಎ.ಎಸ್.ಐ ಆಗಿ ಕಾರ್ಯ ನಿರ್ವಹಿಸಿ ವಯೋ ನಿವೃತ್ತರಾದ ಎಲ್.ಮೂರ್ತಿ ಯವರಿಗೆ ಠಾಣೆ ಯಲ್ಲಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.   ಅವರನ್ನು ಸನ್ಮಾನಿಸಿದ ಪಿ.ಎಸ್.ಐ ಪರಶುರಾಮ ಎನ್ ಲಮಾಣಿ ಇವರು ಮಾತನಾಡಿ ಎಲ್.ಮೂರ್ತಿಯವರು ಈ ದಿನ ತಮ್ಮ ಸುದೀರ್ಘ ವೃತ್ತಿ ಜೀವನವನ್ನು ಮುಗಿಸಿ ವಯೋನಿವೃತ್ತಿ ಹೊಂದಿದ್ದು ಅವರು ಪೊಲೀಸ್ ಇಲಾಖೆಗೆ  ಸಲ್ಲಿಸಿದ ಸೇವೆಯು ಶ್ಲಾಘನೀಯ. ಅವರು ಪೊಲೀಸ್ ಇಲಾಖೆಗೆ ಸೇರಿದ ದಿನದಿಂದ ಈ ದಿನದವರೆಗೂ ಸಮಾಜಕ್ಕೆ ಸಾರ್ವಜನಿಕರಿಗೆ ಸೌಮ್ಯ ಸ್ವಭಾವದಿಂದ ಹಾಗೂ ಕೆಲವೊಮ್ಮೆ ಸಿಟ್ಟಿನ ಮಾತುಗಳಿಂದ ಎಂಥಹ ಕಠಿಣವಾದ ಸಮಸ್ಯೆಯನ್ನು ಬಗೆಹರಿಸಿ ಯಶಸ್ವಿಯಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ ಹಾಗೂ ಅವರ ನಿವೃತ್ತಿಯ ಮುಂದಿನ ದಿನಗಳು ಸುಖಕರವಾಗಿರಲಿ ಭಗವಂತ ಒಳ್ಳೆಯ ಆರೋಗ್ಯ ಕೊಟ್ಟು ಅವರ ಸಂಸಾರದ ನೌಕೆಯನ್ನು ಉನ್ನತ ಮಟ್ಟಕ್ಕೆ ಸಾಗಿಸಲಿ ಎಂದು   ಠಾಣೆಯ ವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಠಾಣೆಯ ಸಿಬ್ಬಂದಿ ಉಪಸ್ಥಿತರಿದ್ದರು.