ನಿವಿಯಾ ಇಂಡಿಯಾದಿಂದ ಗಿನ್ನಿಸ್ ದಾಖಲೆ

ಮುಂಬೈ, ಆ ೧-ಕೊರೊನಾ ಸೋಂಕಿನ ಸಂದರ್ಭದಲ್ಲಿ ಕೈಗಳನ್ನು ಹಾಗೂ ಮುಖವನ್ನು ಒಂದು ನಿಮಿಷಗಳ ಕಾಲ ಏಕಕಾಲದಲ್ಲಿ ತೊಳೆದುಕೊಳ್ಳುವ ಕಾರ್ಯಕ್ರಮ ಆಯೋಜಿಸುವ ಮೂಲಕ ನಿವಿಯಾ ಇಂಡಿಯಾ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದೆ.
ದೇಶದ ನಾನಾ ಭಾಗಗಳಿಂದ ನೂರಕ್ಕೂ ಹೆಚ್ಚು ಪುರುಷರು ಏಕಕಾಲದಲ್ಲಿ ಒಂದು ನಿಮಿಷಗಳ ಕಾಲ ತಮ್ಮ ಮುಖವನ್ನು ತೊಳೆದುಕೊಳ್ಳುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅದಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ ದಾಖಲೆ ನಿರ್ಮಿಸಿದೆ.
ವಿಶ್ವದಲ್ಲಿ ಕೊರೊನಾ ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ವಚ್ಛತೆ ಹಾಗೂ ಶುಚಿತ್ವ ಜೀವನದ ಅವಿಭಾಜ್ಯ ಅಂಗವಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಿಂದ ಪಾಲ್ಗೊಂಡಿದ್ದ ನೂರಕ್ಕೂ ಹೆಚ್ಚು ಭಾಗಿದಾರರು ಉತ್ಸಾಹದಿಂದ ಪಾಲ್ಗೊಂಡು ಮುಖ ತೊಳೆದುಕೊಳ್ಳುವ ಮೂಲಕ ಚರ್ಮದ ಹಾರೈಕೆ ಬ್ರಾಂಡ್ ಗೆ ನೂತನ ವರ್ಚುವಲ್ ಗಿನ್ನಿಸ್ ದಾಖಲೆ ಸೃಷ್ಟಿ ಮಾಡಿದ್ದಾರೆ.
ಲಾಕ್ ಡೌನ್ ನಿಂದಾಗಿ ಪುರುಷರು, ಸಿಂಗಾರ, ಆರೋಗ್ಯದ ಕಡೆಗೆ ಗಮನ ಹರಿಸಿದ್ದಾರೆ. ಹೀಗಾಗಿ ಅವರ ಆರೋಗ್ಯದ ಗಮನವನ್ನು ಇಟ್ಟುಕೊಂಡು ಫೇಸ್ ವಾಶ್ ನಿಂದ ಮುಖ ತೊಳೆಯುವ ಮೂಲಕ ಮೊಡವೆಗಳಿಂದ ಮುಕ್ತರಾಗುವ ಮೂಲಕ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು ಅದಕ್ಕೆ ವಿಶ್ವ ದಾಖಲೆಗೆ ಪಾತ್ರವಾಗಿದೆ ಎಂದು ನಿವಿಯಾ ಇಂಡಿಯಾದ ಮಾರುಕಟ್ಟೆ ನಿರ್ದೇಶಕ ಸಚಿನ್ ಕಿಲ್ಲಾವಾಲಾ ತಿಳಿಸಿದ್ದಾರೆ.