ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಭರವಸೆ

ರಾಯಚೂರು.ನ.20-ಐಐಐಟಿ ತರಗತಿ ಪ್ರಾರಂಭಕ್ಕೆ ನಿಗದಿ ಪಡಿಸಿರುವ ಯರಮರಸ ಕ್ಯಾಂಪ್ ನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ವ್ಯಾಪ್ತಿ ಮನೆಗಳ ತೆರವು ಕಾರ್ಯಾಚರಣೆ ಸ್ಥಳಕ್ಕೆ ನಗರಸಭೆ ಅಧ್ಯಕ್ಷ ಈ ವಿನಯ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
ಸರ್ಕಾರೀ ಇಂಜಿನಿಯರಿಂಗ್ ಕಾಲೇಜು ತಡೆಗೋಡೆ ನಿರ್ಮಾಣಕ್ಕೆ ಮೀಸಲಾದ ಉದ್ದೇಶಿತ ಸ್ಥಳದಲ್ಲಿ ಕಳೆದ 60 ವರ್ಷಗಳಿಂದಲೂ 65 ಕ್ಕೂ ಮೇಲ್ಪಟ್ಟು ನಿವಾಸಿಗಳು ಕುಟುಂಬ ವರ್ಗ ಸಮೇತ ನೆಲೆಯೂರಿತ್ತು.
ತಡೆಗೋಡೆ ನಿರ್ಮಾಣದಿಂದಾಗಿ ಉದ್ದೇಶಿತ ಒಳಾಂಗಣ ಸ್ಥಳದಲ್ಲಿ 65 ಕ್ಕೂ ಮನೆಗಳ ತೆರವು ಕಾರ್ಯಾಚರಣೆಗೆ ನಿವಾಸಿಗಳಿಂದ ತೀರ್ವ ವಿರೋಧ ವ್ಯಕ್ತಗೊಂಡ ಹಿನ್ನೆಲೆ, ನಗರಸಭೆ ಅಧ್ಯಕ್ಷರು ಹಾಗೂ ಸದಸ್ಯರ ನಿಯೋಗ ಭೇಟಿ ನೀಡಿ ವಾಸ್ತವ ಪರಿಶೀಲಿಸಿತು.ಮನೆ ಕಳೆದುಕೊಳ್ಳುವ ನಿವಾಸಿಗಳಿಗೆ ಯರಮರಸ್ ಕ್ಯಾಂಪ್ ನ ಪ್ರವಾಸಿ ಮಂದಿರ ಹಿಂಬದಿ ಸ್ಥಳದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ,ನಿರಾಶ್ರಿತರಿಗೆ ಮನೆ ನಿರ್ಮಾಣ ಕುರಿತು ಮುಂಬರುವ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾಣ ಮಾಡುವ ಭರವಸೆ ವ್ಯಕ್ತಪಡಿಸಿದರು.
ನಗರಸಭೆ ಪೌರಾಯುಕ್ತ ದೊಡ್ಡಮನಿ, ಎಇಇ ಶಫಿ, ಮುಖಂಡರಾದ ನರಸಿಂಹಲು ಮಾಡಗಿರಿ, ಈರಪ್ಪಗೌಡ,ಗೋವಿಂದರೆಡ್ಡಿ, ನಗರಸಭೆ ಸದಸ್ಯರಾದ ಸಣ್ಣ ನರಸರೆಡ್ಡಿ, ಹರಿಬಾಬು, ರಫಿ, ವೈ,ಎಸ್, ಅಶೋಕ್‌, ವಿನೋದರೆಡ್ಡಿ, ರಾಮನಗೌಡ,ಈಶ್ವರ್, ಶರಣಗೌಡ, ಸುರೇಶ ಗೌಡ, ಸಂದೀಪ್, ಪವನ್, ಜಾವೀದ್ ಇನ್ನ್ನಿತರರು ಉಪಸ್ಥಿತರಿದ್ದರು.