ನಿಲ್ಲದ ರೈತರ ಆತ್ಮಹತ್ಯೆ: ಪ್ರೇಮಸಿಂಗ್ ಜಾಧವ ಆಕ್ರೋಶ

ಚಿಂಚೋಳಿ,ನ 18: ತಾಲೂಕಿನಲ್ಲಿ ರೈತರ ಆತ್ಮಹತ್ಯೆಗಳು ನಿರಂತರವಾಗಿ ನಡೆಯುತ್ತಿದ್ದು ರೈತರ ನೆರವಿಗೆ ಸರಕಾರ ಸ್ಪಂದಿಸುತ್ತಿಲ್ಲ ಎಂದು ಪ್ರೇಮ್‍ಸಿಂಗ್ ಕಿಡಿಕಾರಿದ್ದಾರೆ
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರೈತರ ಆತ್ಮಹತ್ಯೆ ಪ್ರಕರಣ ಗಳು ನಿರಂತರವಾಗಿ ನಡೆಯತ್ತಿದ್ದು, ರೈತರ ನೆರವಿಗೆ ರಾಜ್ಯ ಸರಕಾರ ಸ್ಪಂದಿಸುತ್ತಿಲ್ಲ .ಈಗಾಗಲೆ ಬರಗಾಲ ಘೋಷಣೆ ಮಾಡಿದ್ದು,ಪರಿಹಾರಧನ ಇನ್ನೂ ರೈತರಿಗೆ ತಲುಪಿಲ್ಲ.
ಸಂಕಷ್ಟಕ್ಕೆ ಒಳಗಾದ ರೈತರಿಗೆ ನೆರವಾಗಿರಬೇಕಾಗಿದ್ದ ಸರಕಾರ ರೈತರ ಬಗ್ಗೆ ಉದಾಸೀನತೆ ತೋರುತ್ತಿರುವುದು ಖಂಡನೀಯ ಎಂದು ತಾಲೂಕ ಬಂಜಾರ ಸಮಾಜದ ಅಧ್ಯಕ್ಷ ಪ್ರೇಮಸಿಂಗ್ ಜಾಧವ ಕಿಡಿ ಕಾರಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ಕೆ.ಎಮ್. ಬಾರಿ, ಭೀಮಶೆಟ್ಟಿ ಮುರುಡಾ, ರಾಜು ಪವ್ಹಾರ, ಕಿರಣ ಮಡಿವಾಳ, ಇದ್ದರು