ನಿಲ್ಲದ ಬೈಕ್ ಓಡಾಟ, ಪೋಲಿಸರಿಂದ ದಂಡ

ಸಿಂಧನೂರು.ಮೇ.೧೬-ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಅನಾವಶ್ಯಕವಾಗಿ ಹೊರಗೆ ತಿರುಗಾಡುವ ಬೈಕ್ ಗಳನ್ನು ಹಿಡಿದು ಪೋಲಿಸರು ದಂಡ ಹಾಕಿ ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದಾರೆ.
ನಗರ ಠಾಣೆಯ ಪಿಎಸ್‌ಐ ವಿಜಯ ಕೃಷ್ಣ ತಮ್ಮ ಸಿಬ್ಬಂದಿಗಳೊಂದಿಗೆ ನಗರದ ಬಸವ ವೃತ್ತ, ಬಪ್ಪೂರು ರಸ್ತೆ, ಗಾಂಧಿ ಸರ್ಕಲ್, ಚನ್ನಮ್ಮ ಸರ್ಕಲ್‌ನಲ್ಲಿ ಬೆಳಗಿನಿಂದ ನಿಂತು ಅನಾವಶ್ಯಕವಾಗಿ ರಸ್ತೆಯಲ್ಲಿ ಓಡಾಡುವ ನೂರಾರು ಬೈಕ್‌ಗಳನ್ನು ಪೋಲಿಸರು ಹಿಡಿದು ದಂಡ ಹಾಕಿ ಕೊರೊನಾ ಬಗ್ಗೆ ಬೈಕ್ ಸವಾರರಿಗೆ ಪಿಎಸ್‌ಐ ವಿಜಯಕೃಷ್ಣ ಎಚ್ಚರಿಕೆ ನೀಡಿ ಕಳುಹಿಸಿದರು.
ಬೈಕ್‌ಗಳನ್ನು ನಗರ ಠಾಣೆಗೆ ತಂದಾಗ ಬೈಕ್ ಸವಾರರು ಸರತಿ ಸಾಲಿನಲ್ಲಿ ನಿಂತು ದಂಡ ಪಾವತಿಸಿದರು.ಇನ್ನೂ ಮುಂದೆ ನಾವು ಹೊರಗೆ ಬರುವುದಿಲ್ಲ ದಯವಿಟ್ಟು ನಮ್ಮನ್ನು ಬಿಟ್ಟು ಬಿಡಿ ಎಂದು ಎಂದು ಪೋಲಿಸರಲ್ಲಿ ಮನವಿ ಮಾಡಿಕೊಂಡ ದೃಶ್ಯ ಕಂಡು ಬಂತು.