ನಿಲ್ಲದ ಪ್ಲಾಸ್ಟಿಕ್ ಚೀಲ ಬಳಕೆ

(ಸಂಜೆವಾಣಿ ಪ್ರತಿನಿಧಿಯಿಂದ )
ಬಳ್ಳಾರಿ:ಜು,9- ಪಾಲಿಕೆಯಿಂದ ನಗರದಲ್ಲಿ ಒಮ್ಮೆ ಬಳಕೆಯ ಪ್ಲಾಸ್ಟೀಕ್ ಚೀಲ ಮತ್ತಿತರೇ ಸಾಮಾಗ್ರಿ ನಿಷೇಧ ಮಾಡಿದೆ. ಆದರೆ ನಗರದ ಜಿಲ್ಲಾಧಿಕಾರಿ ನಿವಾಸ ಬಳಿ ರಸ್ತೆಯಲ್ಲಿ ಹಣ್ಣುಗಳನ್ನು ಮಾರಾಟ ಮಾಡುವವರು ಮಾತ್ರ ಪ್ಲಾಸ್ಟಿಕ್ ಕವರ್ ಬಳಕೆ ನಿಲ್ಲಿಸಿಲ್ಲ.
ಹೆಚ್ಚಿನ ರೇಟಿಗೆ ಖರೀದಿ ಮಾಡಿಕೊಂಡು ಬಂದಿದೆ ಎನ್ನುತ್ತಾರೆ. ಕಳ್ಳತನದಿಂದಲೇ ತಂದುಕೊಡುತ್ತಾರಂತೆ. ಕವರ್ ಇಲ್ಲದಿದ್ದರೆ ವ್ಯಾಪಾರಕ್ಕೆ ಸಮಸ್ಯೆ ಅಂತಾರೆ ಹಣ್ಣುಗಳ ಮಾರಾಟಗಾರರು.
ಪೇಪರ್ ಕವರ್ ಗಳ  ಉತ್ಪಾದನೆ, ಬಳಕೆಗೆ ಪಾಲಿಕೆ ಕಾರ್ಯಕ್ರಮ ರೂಪಿಸಬೇಕಿದೆ.

Attachments area