ನಿಲ್ಲದ ದ್ವಿಚಕ್ರ ಸವಾರರ ತಿರುಗಾಟ; ಪೊಲಿಸರಿಂದ ವಾಹನಗಳ ಸೀಜ್

ಜಗಳೂರು.ಏ.೨೪; ಪಟ್ಟಣದಲ್ಲಿ ಸಾರ್ವಜನಿಕರು ಮತ್ತು ದ್ವಿಚಕ್ರವಾಹನ ಸವಾರರು ರಸ್ತೆಗೆ ಇಳಿಯದಂತೆ ಫೀಲ್ಡ್ ಗೆ ಇಳಿದ ಪೊಲೀಸ್ ಪಡೆ.ಮೊದಲ ಹಂತದ  ಕರ್ಫ್ಯೂ ಮತ್ತು 144 ಸೆಕ್ಷನ್ ಬೆನ್ನಲ್ಲೇ  ಜಗಳೂರು ಪಟ್ಟಣದಲ್ಲಿ ನಿಶಬ್ದವಾಗಿರುವುದು ಕಂಡುಬಂತು ಪೊಲೀಸರು ಜನರ ಓಡಾಟ ನಿಯಂತ್ರಿಸಿ
ದ್ವಿಚಕ್ರ ಸವಾರರನ್ನು ಮನೆ ಸೇರಿಸಲು ಪೊಲೀಸ್ ಇಲಾಖೆಯ ಆರಕ್ಷಕ ವೃತ್ತ ನಿರೀಕ್ಷಕರಾದ ಮಂಜುನಾಥ್ ಪಂಡಿತ್  ಮತ್ತು ಪೊಲೀಸ್ ಇಲಾಖೆಯ ಉಪ ನಿರೀಕ್ಷಕರ ಸಂತೋಷ್ ಬಾಗೋಜಿ ಹಾಗೂ ಎ.ಎಸ್.ಐ ಚಂದ್ರಶೇಖರ್ ಮತ್ತು ಪೊಲೀಸ್ ಸಿಬ್ಬಂದಿಗಳು ಫೀಲ್ಡ್ ಇಳಿದು ದ್ವಿಚಕ್ರ ವಾಹನಗಳನ್ನು ಸೀಸ್ ಮಾಡಲು ಮುಂದಾದರು ಮತ್ತು ಪೊಲೀಸ್ ಇಲಾಖೆಯವರು ಕೋರೋನ ವೈರಸ್ ಮಹಾಮಾರಿ ರೋಗವನ್ನು ತಡೆಗಟ್ಟುವಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಲ್ಲಿ  ಸಹಕರಿಸುತ್ತಿದ್ದಾರೆ 
ಏ 25 ರ ತನಕ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ  ಕರ್ಫ್ಯೂ ಮತ್ತು 144 ಸೆಕ್ಷನ್ ನಿಷೇಧಾಜ್ಞೆ ಮುಂದುವರಿಸಿದ್ದರು ಜನತೆಯಲ್ಲಿ ಮಾತ್ರ ಕೋರೋನ ವೈರಸ್ಸಿನ ಭಯ ಕಾಣಲಿಲ್ಲ ಜಗಳೂರು ಪಟ್ಟಣದ ಹಳೇ ಮಹಾತ್ಮಗಾಂಧೀಜಿ ವೃತ್ತ ಮತ್ತು ಹೊಸ ಬಸ್ ನಿಲ್ದಾಣ. ಚಳ್ಳಕೆರೆ ರಸ್ತೆಯ ಟೋಲ್ ಗೇಟ್ ನಲ್ಲಿ ಪಟ್ಟಣದ ಸುಮಾರು ರಸ್ತೆಗಳು ಸೇರಿದಂತೆ ಜನತೆ ಲಾಕ್ ಡೌನ್ ಮಾಡಿದರು ಜನರು ಮತ್ತು ವಾಹನ ಸವಾರರು ಸುಖಾಸುಮ್ಮನೆ ರಸ್ತೆಗಿಳಿದು ಓಡಾಟ ಮಾಡುತ್ತಿದ್ದವರಿಗೆ ಲಾಠಿ ರುಚಿ ತೋರಿಸುವ  ಮುಖಾಂತರ ಮನೆಯಲ್ಲಿರುವಂತೆ ಜಾಗೃತಿ ಮೂಡಿಸಿದರು.ದಿನನಿತ್ಯ ತರಕಾರಿ. ದಿನಸಿ. ಹಾಲು ಹಣ್ಣು ಖರೀದಿ ಮಾಡುವುದು ಕಂಡುಬಂತು ನಂತರ ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ಗಳಲ್ಲಿ ಇತರ ಕಡೆ ಜನತೆ ಕೆಲವರು ಸಾಗಿದರು ಅನವಶ್ಯಕವಾಗಗೀ ಜನತೆ ಕೂಡ ರಸ್ತೆಗಿಳಿದು ಓಡಾಡುವುದು ಕಂಡುಬಂತು ಜನತೆ ಒಂದಲ್ಲ ಒಂದು ಕಾರಣ ಪೊಲೀಸರಿಗೆ ಹೇಳಿ ಪಟ್ಟಣದ ಸುತ್ತ ಓಡಾಡುತ್ತಿದರು ಇದು ಪೋಲಿಸ್ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಮೊದಲ ಹಂತದಲ್ಲಿ ಕೆಲ ಕಟ್ಟುನಿಟ್ಟಿನ ಕ್ರಮ ವಹಿಸಿದ್ದರು ಜನ  ತಮಗೆ ಅರಿವಿಲ್ಲದಂತೆ  ರಸ್ತೆಗಿಳಿದು ಹೋರಾಟ ಮಾಡುತ್ತಿದ್ದಾರೆ ಆದರೆ ಕರ್ಫ್ಯೂ ಜಾರಿಯಲ್ಲಿರುವುದರಿಂದ ಲಾಕ್ ಡೌನ್  ಸ್ವಲ್ಪ ರೈತರಿಗೆ ಮತ್ತು ದಿನನಿತ್ಯ ಬೇಕಾಗುವ ಸಾಮಗ್ರಿಗಳು ವಾಹನ ಸರಬರಾಜು ಮಾಡುವ ವಾಹನಗಳಿಗೆ  ತೊಂದರೆಯಾಗದಂತೆ ಸಂಚಾರಕ್ಕೆ ಅನುಮತಿ ನೀಡಿದರು  

ಪೊಲೀಸ್ ಕಠಿಣ ಲಾಕ್ಡೌನ್ ಗೆ ಸಿದ್ಧತೆ
ದಿನನಿತ್ಯದ ವಸ್ತು ಗಳ ಖರೀದಿಗೆ ಹೊರಬಂದರು ಸಾಮಾಜಿಕ ಅಂತರ ಕಾಪಾಡುವಲ್ಲಿ ಜನತೆ ಗಮನ ಹರಿಸುತ್ತಿಲ್ಲ ಈ ಬಗ್ಗೆ ಹಲವಾರು ರೀತಿಯಲ್ಲಿ ಜನತೆಗೆ ಪೊಲೀಸರು ಮಾಹಿತಿ ತಿಳಿಸಿ ಹೇಳಿದರು ಇದನ್ನು ಪಾಲಿಸಿದ ಇರುವುದು ವಿಷಾದನೀಯವಾಗಿದ
ಸಾರ್ವಜನಿಕರು ಮತ್ತು ದ್ವಿಚಕ್ರ ವಾಹನಗಳು ಓಡಾಡಲು ಆರಂಭಿಸಿದ್ದು ಲಾಕ್ ಡೌನ್ ನ ಆದೇಶವನ್ನು ಪಾಲನೆ ಮಾಡುವಂತೆ ಜನರಿಗೆ ಪೊಲೀಸರು ಬೀದಿಗಿಳಿದು ದ್ವಿಚಕ್ರವಾಹನ ಮತ್ತು  ಅನವಶ್ಯಕವಾಗಿ ಓಡಾಡುವ ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯ ವೃತ್ತ  ನಿರೀಕ್ಷಕರಾದ ಮಂಜುನಾಥ ಪಂಡಿತ್  ಮತ್ತು ಪೋಲಿಸ್ ಇಲಾಖೆಯ ಉಪನಿರೀಕ್ಷಕ ರಾದ ಸಂತೋಷ್ ಬಾಗೋಜಿ  ತಿಳಿ ಹೇಳಿದರು 
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಅರಕ್ಷಕರ ನಿರೀಕ್ಷಕರಾದ ಮಂಜುನಾಥ ಪಂಡಿತ್ . ಪೊಲೀಸ್ ಇಲಾಖೆ ಉಪ ನಿರೀಕ್ಷಕರಾದ ಸಂತೋಷ್ ಬಾಗೋಜಿ ಮತ್ತು ಎ ಎಸ್ಐ  ಚಂದ್ರಶೇಖರ್ ಪೊಲೀಸ್ ಸಿಬ್ಬಂದಿಗಳು ಕಟ್ಟುನಿಟ್ಟಿನ ಆದೇಶ ಪಾಲಿಸುವಂತೆ ಸಾರ್ವಜನಿಕರಿಗೆ ಮತ್ತು ದ್ವಿಚಕ್ರವಾಹನ ಸವಾರರಿಗೆ ಖಡಕ್ ಎಚ್ಚರಿಕೆ ನೀಡಿದರು