ನಿಲ್ಲದ ಅಕ್ರಮ ಮರಳು ಸಾಗಾಣಿಕೆ, ಮೂರು ಟ್ರ್ಯಾಕ್ಟರ್ ಜಪ್ತಿ

ಸಿಂಧನೂರು.ಜೂ.೧೧-ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದಾಗ ಟ್ರ್ಯಾಕ್ಟರ್ ಚಾಲಕನೊಬ್ಬ ಮರಣ ಹೊಂದಿದ ಕಲ್ಲೂರು ಗ್ರಾಮದಲ್ಲಿ ವಾರದ ಹಿಂದೆ ಘಟನೆ ಸಂಭವಿಸಿದರೂ ಸಹ ಅಕ್ರಮ ಮರಳು ದಂದೆಕೊರರು ಪೋಲಿಸರ ಭಯವಿಲ್ಲದೆ ನಿರಂತರ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಪ್ರಕರಣಗಳು ಕಂಡುಬಂದಿವೆ. ಇದನ್ನು ನೋಡಿದರೆ ತಾಲ್ಲೂಕಿನಲ್ಲಿ ಅಕ್ರಮ ಮರಳು ಸಾಗಾಣಿಕೆ ನಿರಂತರವಾಗಿ ನಡೆಯುತ್ತಿದೆ.
ತಾಲುಕಿನ ಪಗಡದಿನ್ನಿ ಗ್ರಾಮದ ಹಳ್ಳದಲ್ಲಿ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದೆ ಖಚಿತ ಮಾಹಿತಿ ಮೇರೆಗೆ ಗ್ರಾಮೀಣ ಠಾಣೆಯ ಪಿಎಸ್‌ಐ ಎರಿಯಪ್ಪ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ ಒಂದು ಟ್ರ್ಯಾಕ್ಟರ್ ಜಪ್ತಿ ಮಾಡಿಕೊಂಡಿದ್ದು ಟ್ರ್ಯಾಕ್ಟರ್ ಮಾಲಿಕ ಅಯ್ಯಪ್ಪ ಪರಾರಿಯಾಗಿದ್ದಾನೆ.
ತಾಲುಕಿನ ಬಾದರ್ಲಿ ಹಳ್ಳದಿಂದ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ಯರಿಯಪ್ಪ ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ಎರಡು ಟ್ರ್ಯಾಕ್ಟರ್‌ಗಳು ಹಾಗೂ ಒಂದು ಬೈಕ್ ಜಪ್ತಿ ಮಾಡಿಕೊಂಡಿದ್ದು ಟ್ರ್ಯಾಕ್ಟರ್ ಮಾಲಿಕರಾದ ಗಿಣಿವಾರ ಶಂಕರಪ್ಪ ಹಾಗೂ ಅಯ್ಯಪ್ಪ ಪರಾರಿಯಾಗಿದ್ದಾರೆ.
ಗಿಣಿವಾರ ಶಂಕ್ರಪ್ಪ, ಶಿವರಾಜ, ಪಗಡದಿನ್ನಿ ಅಯ್ಯಪ್ಪನ ಮೇಲೆ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಅಕ್ರಮ ಮರಳು ಕುರಿತು ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆಂದು ಪಿಎಸ್‌ಐ ಯರಿಯಪ್ಪ ತಿಳಿಸಿದರು.