ನಿಲೋಗಲ್: ಹುತಾತ್ಮ ದಿನಾಚರಣೆ

ಲಿಂಗಸೂಗೂರು.ಮಾ.೨೪-ಶಾಹಿದ್ ಭಗತ್ ಸಿಂಗ್, ರಾಜ್ ಗುರು, ಸುಖದೇವ್ ಅವರ ಹುತಾತ್ಮ ದಿನಾಚರಣೆಯನ್ನು ಲಿಂಗಸ್ಗೂರಿನ ನಿಲೋಗಲ್‌ನಲ್ಲಿ ಎಸ್‌ಎಫ್‌ಐ, ಡಿವೈಎಫ್‌ಐ ಸಹಯೋಗದಲ್ಲಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾಧ್ಯಕ್ಷರು ಹಾಗೂ ಗ್ರಾಪಂ ಸದಸ್ಯ ರಮೇಶ ವೀರಾಪೂರು ಮಾತನಾಡಿ ದೇಶಪ್ರೇಮಿ ಸಂಗಾತಿಗಳು ಭಗತ್ ಸಿಂಗ್ ರಾಜಗುರು ಸುಖದೇವ್ ದೇಶದ ವಿಮೋಚನೆಗಾಗಿ ನಗು ನಗುತ್ತಲೇ ನೇಣುಗಂಬಕ್ಕೇರಿದ ಈ ಸಂಗಾತಿಗಳ ತ್ಯಾಗ ವ್ಯರ್ಥವಾಗಲು ಬಿಡದಿರಲು ಶಪಥ ಮಾಡೋಣ ಎಂದರು.
” ಸ್ವಾತಂತ್ರ್ಯ ಎಂದರೆ ಕೇವಲ ಯಜಮಾನರ ಬದಲಾವಣೆ ಎಂದಾದರೆ ಜನರ ಶೋಷಣೆ ಮುಂದುವರಿಯಲಿದೆ.” ಎಂಬ ಭಗತ್ ಸಿಂಗ್ ಮಾತು ಇಂದಿಗೂ ಹೆಚ್ಚು ಪ್ರಸ್ತುತ ಇಂದು ದೇಶವನ್ನು ವಿನಾಶದ ಅಂಚಿನಲ್ಲಿ ನಿಲ್ಲಿಸಿರುವ ಆರ್ಥಿಕ, ಶೈಕ್ಷಣಿಕ ಅಸಮಾನತೆ, ನಿರುದ್ಯೋಗ, ಫ್ಯಾಸಿಸಂ, ಕರಾಳ ಕೋಮುವಾದಿ ರಾಜಕಾರಣ, ಮತಾಂಧತೆ, ಜಾತಿ ತಾರತಮ್ಯ, ಲಿಂಗ ತಾರತಮ್ಯಗಳ ವಿರುದ್ಧ ಸಮಾನತೆಗಾಗಿ ಹೋರಾಟವನ್ನು ಮುಂದುವರಿಸಬೇಕು ಎಂದರು.
ಈ ವಿಮೋಚನಾ ಸಮರದಲ್ಲಿ ಉದುರಿದ ಕೆಂಪು ತಾರೆಗಳಿಗೆ ಲಾಲ್ ಸಲಾಂ ಹೇಳೋಣ. ಭಗತ್ ಸಿಂಗ್ ಮತ್ತು ಆತನ ಸಂಗಾತಿಗಳು ಬಿದ್ದ ಮರಗಳಲ್ಲ, ಬಿತ್ತಿದ ಬೀಜಗಳು ಎಂದರು.
ಈ ಸಂದರ್ಭದಲ್ಲಿ ಎಸ್‌ಎಫ್‌ಐ ತಾಲೂಕಾಧ್ಯಕ್ಷ ತಿಪ್ಪಣ್ಣ ನಿಲೋಗಲ್, ನಿಲೋಗಲ್ ಘಟಕದ ಕಾರ್ಯದರ್ಶಿ ನಾಗರಾಜ್, ಮುಖಂಡ ಸಿದ್ದು ಪೂಜಾರಿ ಮಾತನಾಡಿದರು.
ಈ ವೇಳೆ ಎಸ್‌ಎಫ್‌ಐ ತಾಲೂಕು ಸಮಿತಿ ಸದಸ್ಯರಾದ ಅಮರೇಗೌಡ ವೆಂಕಟೇಶ, ಶಿವಪ್ಪ, ಮಹೇಶ ಗರ್ಚಿನಮನಿ, ಡಿವೈಎಫ್‌ಐ ಮುಖಂಡರಾದ ಪ್ರವಿಣ್ ಕುಮಾರ್, ಮಹಾದೇವ, ಶಿವರಾಜ್ ಕಪಗಲ್, ವಿಶ್ವನಾಥ್ ಈಚನಾಳ, ಬವರಾಜ್ ದೊಡ್ಡಮನಿ, ಕೆಪಿಆರ್ ಎಸ್ ನ ಅಮರೇ ಮಡಿವಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.