ನಿಲಯ ಪ್ರವೇಶಕ್ಕೆ ಅರ್ಜಿಆಹ್ವಾನ: ವಿದ್ಯಾರ್ಥಿನಿಯರಿಗೆ ಉಚಿತ ವಸತಿ, ಊಟ

ರಾಯಚೂರು,ಜೂ.೦೧-
ಹತ್ತನೇ ತರಗತಿಯ ಬಳಿಕ ಪಿಯುಸಿ ಮತ್ತು ಪದವಿ ಓದ ಬಯಸುವ ಆರ್ಥಿಕವಾಗಿ ಹಿಂದುಳಿದ ಲಿಂಗಾಯತ ಸಮುದಾಯ ಮತ್ತು ಒಳ ಪಂಗಡದ ವಿದ್ಯಾರ್ಥಿನಿಯರಿಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಚನ್ನಬಸವ ಚಾರಿಟೇಬಲ್ ಟ್ರಸ್ಟ್‌ನಿಂದ ಉಚಿತ ಊಟ ಮತ್ತು ವಸತಿ ಕಲ್ಪಿಸಲಾಗುತ್ತಿದೆ ಎಂದು ವಸತಿ ನಿಲಯದ ಅಧ್ಯಕ್ಷೆ ಸುಕನ್ಯಾ ಸಿಂಗನಾಳ ತಿಳಿಸಿದ್ದಾರೆ.
ವೀರಶೈವ ಲಿಂಗಾಯತ ಮತ್ತು ಅದರ ಒಳ ಪಂಗಡಕ್ಕೆ ಬರುವ ಕುಂಬಾರ, ಮಡಿವಾಳ, ಹಡಪದ, ಗಾಣಿಗ, ಬೇಡಜಂಗಮ, ರೆಡ್ಡಿ, ಒಕ್ಕಲಿಗ, ಪಂಚಮಸಾಲಿ, ಬಣಜಿಗ, ಹೂಗಾರ, ಬಿಳಿಕುರುಹಿನಶೆಟ್ಟಿ, ಶಿಂಪಿಗ, ಲಾಳಗಂಡ ಸೇರಿದಂತೆ ಎಲ್ಲಾ ಒಳಪಂಗಡದ ಹೆಣ್ಣು ಮಕ್ಕಳಿಗೆ ವಸತಿ ನಿಲಯಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದಿರುವ ಬಡ ಕುಟುಂಬದ ಹೆಣ್ಣು ಈ ವಸತಿ ನಿಲಯದಲ್ಲಿ ಉಚಿತ ವಸತಿ ಮತ್ತು ಊಟದ ಸೌಲಭ್ಯ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಹತ್ತನೇ ತರಗತಿ ಉತ್ತೀರ್ಣರಾಗಿ ಮುಂದಿನ ವಿದ್ಯಾಭ್ಯಾಸವನ್ನು ಮುಂದುವರೆಸುವ ಹೆಣ್ಣು ಮಾತ್ರ ಈ ಸಔಲಭ್ಯ ಗ್ರಂಥಾಲಯ ಮತ್ತು ಲ್ಯಾಪ್‌ಟಾಪ್ ವ್ಯವಸ್ಥೆ ಕಲ್ಪಿಸಲಾಗುವುದು. ಆಸಕ್ತರು ಗಂಗಾವತಿಯ ಜಯನಗರದಲ್ಲಿರುವ ಶ್ರೀ ಚನ್ನಬಸವ ಚಾರಿಟೇಬಲ್ ಪ್ರತಿಷ್ಠಾನದ ವಸತಿ ನಿಲಯದಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ಸಲ್ಲಿಸಬೇಕೆಂದು ಹೇಳಿದರು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಶ್ರೀಶೈಲ ಪಟ್ಟಣಶೆಟ್ಟಿ ಸಂಚಾಲಕರು (ಮೊ:೯೪೪೮೬೪೯೫೨೨) ಸಂಪರ್ಕಿಸಬಹುದು.