ನಿರ್ಲಕ್ಷತೆಯಿಂದಾಗಿ ತೆರಿಗೆ ಹಣವು ಸೋರಿಕೆ

ಕೋಲಾರ,ಮಾ,೧೫- ನಗರಸಭೆಯ ಆಡಳಿತದ ನಿರ್ಲಕ್ಷತೆಯಿಂದಾಗಿ ಕೋಟ್ಯಾಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣವು ಸೋರಿಕೆಯಾಗಿ ಬೆಸ್ಕಾಂ ಪಾಲಾಗುವಂತ ಪ್ರಕರಣವನ್ನು ನಗರಸಭಾ ಸದಸ್ಯ ಎಂ.ಸುರೇಶ್ ಬಾಬು (ಸೂರಿ) ಬೆಳಕಿಗೆ ತಂದರು,
ಇಂದು ನಗರಸಭೆಯ ೨೦೨೩-೨೪ನೇ ಸಾಲಿನ ಅಯ್ಯ-ವ್ಯಯ ಮಂಡನೆಯ ನಂತರ ನಡೆದ ಚರ್ಚೆಯ ಅವಧಿಯಲ್ಲಿ ಬೀದಿ ದೀಪ ನಿರ್ವಹಣೆ ವಿದ್ಯುತ್ ಬಿಲ್‌ಗೆ ರೂ,೭,೫೨,೦೦,೦೦೦ ವೆಚ್ಚವನ್ನು ನಿರೀಕ್ಷಿತ ವೆಚ್ಚವನ್ನು ನಮೋಧಿಸಿರುವುದು ಅವೈಜ್ಞಾನಿಕವಾಗಿದೆ. ನಗರದಲ್ಲಿ ಎಷ್ಟು ವಿದ್ಯುತ್ ಕಂಬಗಳಿಗೆ ದೀಪಗಳನ್ನು ಅಳವಡಿಸಿದೆ, ಇವುಗಳಿಗೆ ಮೀಟರ್ ಇಲ್ಲದೆ ಕಣ್ಣು ಮುಚ್ಚಿ ಕೊಂಡು ಬಿಲ್‌ಗಳನ್ನು ಪಾವತಿಸುತ್ತೀರಾ ? ಎಲ್.ಇ.ಡಿ. ಮರ್ಕ್ಯೂರಿ, ಟ್ಯೊಬ್ ಲೈಟ್‌ಗಳು ಎಷ್ಟು ಬಳಕೆ ಮಾಡುತ್ತಿದೆ ? ಬೀದಿ ನಿರ್ವಹಣೆಯ ವಿದ್ಯುತ್ ಬಿಲ್ ನಮೋಧಿಸುವಂತ ಮಾನ ದಂಡಗಳೇನು ? ಬೀದಿ ದೀಪ ನಿರ್ವಾಹಣೆಯನ್ನು ಯಾವ ರೀತಿ ಮಾಡಲಾಗುತ್ತಿದೆ ಎಂದು ಪ್ರಶ್ನೆಗಳ ಸುರಿಮಳೆಯನ್ನೆ ಸುರಿಸಿದರು,
ನಮ್ಮ ವಾರ್ಡಿನಲ್ಲಿ ಉದಾಹರಣೆಗೆ ೧೦೦ ಕಂಬಗಳಿದೆ ಅದರಲ್ಲಿ ೮೦ ಕಂಬಗಳಲ್ಲಿ ಮಾತ್ರ ದೀಪಗಳನ್ನು ಆಳವಡಿಸಿದ್ದು ಉಳಿದ ೨೦ ಕಂಬಗಳಲ್ಲಿ ದೀಪಗಳಿಲ್ಲ ಅದರೆ ಬೆಸ್ಕಾಂ ಪ್ರತಿ ಕಂಬಕ್ಕೆ ವಿದ್ಯುತ್ ದೀಪದ ದರವನ್ನು ಅವೈಜ್ಞಾನಿಕವಾಗಿ ಅಳವಡಿಸಿದ್ದು ಹೆಚ್ಚುವರಿಯಾಗಿ ೨೦ ದೀಪಗಳನ್ನು ಬಳಸದೆ ಇದ್ದರೂ ನಗರಸಭೆಯಿಂದ ಬಿಲ್ ಪಾವತಿಸಲಾಗುತ್ತಿದೆ. ಇದರ ನಷ್ಟವನ್ನು ಸಾರ್ವಜನಿಕರ ತೆರಿಗೆ ಹಣದಿಂದ ಪಾವತಿಸುತ್ತಿದೆ. ಈ ನಷ್ಟಕ್ಕೆ ನಗರಸಭೆಯ ಅಧಿಕಾರಿಗಳೇ ನೇರ ಹೊಣೆಯಾಗಿದ್ದಾರೆ ಎಂದರು,

ಬೀದಿ ದೀಪಗಳ ನಿರ್ವಾಹಣೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಒಂದು ಕಂಬದಲ್ಲಿ ದೀಪ ಹಾಳವಾದರೆ ಮತ್ತೆ ಹೊಸ ದೀಪ ಅಳವಡಿಸ ಬೇಕಾದರೆ ೬ ತಿಂಗಳಾಗುತ್ತದೆ ಎಂಬುವುದಕ್ಕೆ ನಗರದ ಜನನಿಭೀಡ ಪ್ರಮುಖ ರಸ್ತೆಯಾದ ಎಂ.ಬಿ.ರಸ್ತೆಯಲ್ಲಿ ಕಳೆದ ೨ ತಿಂಗಳಿಂದ ಸಾರ್ವಜನಿಕರು ಕಗ್ಗತ್ತಲಿನಲ್ಲಿ ಸಂಚರಿಸುತ್ತಿದ್ದಾರೆ. ಪ್ರಮುಖ ರಸ್ತೆಗಳಲ್ಲಿಯೇ ಈ ಅವ್ಯವಸ್ಥೆ ಉಂಟಾದರೆ ವಾರ್ಡಿನಲ್ಲಿರುವ ಬೀದಿ ದೀಪಗಳ ನಿರ್ವಹಣೆ ಎಷ್ಟು ಮಾತ್ರ ಅಗುತ್ತಿದೆ ಎಂಬುವುದು ನೀವೇ ಉಹಿಸಬಹುದಾಗಿದೆ ಎಂದರು,
ಬೀದಿ ದೀಪಗಳ ಕಂಬಗಳಿಗೆ ವಿದ್ಯುತ್ ಮೀಟರ್ ಆಳವಡಿಸದೆ ಕಂಬದ ಲೆಕ್ಕದಲ್ಲಿ ವಿದ್ಯುತ್ ಬಿಲ್‌ಗಳು ಪಾವತಿಸುವುದು ಅವೈಜ್ಞಾನಿಕತೆಯ ಪರಮಾವಧಿಯಾಗಿದೆ. ವಿದ್ಯುತ್ ಬಳಿಸದೆ ಇದ್ದರೂ ಬಿಲ್ ಪಾವತಿಸುವ ಶುದ್ದ ಮೂರ್ಖತನವಲ್ಲವೆ ಎಂದರು, ಹಾಳಾದ ದೀಪಗಳನ್ನು ೬-೮ ತಿಂಗಳಿಗೆ ಅಳವಡಿಸುತ್ತಾರೆ ಅದರೆ ನಾವುಗಳು ಪ್ರತಿ ಮಾಹೆ ಬಿಲ್‌ಗಳನ್ನು ಪಾವತಿಸ ಬೇಕಾಗಿರುವುದು ಯಾವ ಮಾನ ದಂಡ ಸ್ವಾಮಿ ಎಂದು ಪ್ರಶ್ನಿಸಿದರು,

ಇದೇ ರೀತಿ ಕೊಳವೆ ಬಾವಿಗಳಿಗೆ ಅಳವಡಿಸಿರುವ ಮೋಟರ್‌ಗಳ ಬಗ್ಗೆಯೂ ಅವೈಜ್ಞಾನಿಕವಾಗಿ ಬಿಲ್ ಪಾವತಿಸಲಾಗುತ್ತಿದೆ. ಉದಾಹರಣೆಗೆ ನಮ್ಮ ವಾರ್ಡಿನಲ್ಲಿ ೮ ಬೋರ್‌ವೆಲ್‌ಗಳಿದ್ದರೆ ೩ ಬೋರ್ ವೆಲ್ ಮಾತ್ರ ಚಾಲನೆಯಲ್ಲಿದ್ದು ಉಳಿದ ೫ ಬೋರ್‌ವೆಲ್ ನಿಷ್ಕ್ರಿಯೆ ಗೊಂಡಿದೆ. ಅದರೂ ಪ್ರತಿ ಬೋರ್ ವೆಲ್ ಲೆಕ್ಕಾಚಾರದಲ್ಲಿ ನಗರದ ೩೫ ವಾರ್ಡಗಳ ವ್ಯಾಪ್ತಿಯಲ್ಲಿರುವ ನೊರಾರು ಬೋರ್ ವೆಲ್‌ಗಳು ನೀರಿಲ್ಲದೆ, ಮೋಟರ್ ಪಂಪ್‌ಗಳು ಹಾಳಾಗಿ ಬಳಕೆ ಮಾಡದಿದ್ದರೂ ವ್ಯರ್ಥವಾಗಿ ಬೆಸ್ಕಾಂಗೆ ಕೋಟ್ಯಾಂತರ ರೂಪಾಯಿ ಪಾವತಿಸಿರುವುದು ಸಾವರ್ರ್‍ಅಜನಿಕರ ತೆರಿಗೆ ಹಣವನ್ನು ನಗರಸಭೆಯ ಸಂಬಂಧ ಪಟ್ಟ ಅಧಿಕಾರಿಗಳ ನಿರ್ಲಕ್ಷತೆಯಿಂದ ಕೋಟ್ಯಾಂತರ ರೂಪಾಯಿ ಸೋರಿಕೆಯಾಗುತ್ತಿದೆ ಎಂದು ವಿವರಿಸಿದರು.
ಈ ಕುರಿತು ನಗರಸಭೆಯ ಇಂಚನಿಯರ್ ಪದ್ಮರೆಡ್ಡಿ ಅವರು ಸಮರ್ಪಕವಾದ ಉತ್ತರ ನೀಡುವಲ್ಲಿ ವಿಫಲರಾಗಿ ಕೆಲವೊಂದು ದಾಖಲೆಗಳ ಕುರಿತು ಸಿದ್ದ ಪಡೆಸಿ ಕೊಳ್ಳದೆ ಇರುವ ಕುರಿತು ಅಸಮಾಧಾನ ವ್ಯಕ್ತಪಡೆಸಿದ ಅವರು ಮುಂದಿನ ದಿನಗಳಲ್ಲಿ ಇದೇ ರೀತಿ ನಿರ್ಲಕ್ಷಿಸಿದಲ್ಲಿ ಸಭೆಯನ್ನು ಬಹಿಷ್ಕರಿಸಲಾಗುವುದು, ಸಾರ್ವಜನಿಕರ ಕೋಟ್ಯಾಂತರ ರೂಪಾಯಿ ಪೋಲಾಗಿರುವುದಕ್ಕೆ ನಿಮ್ಮ ಬೇಜವಬಾರಿತನಕ್ಕೆ ನಿದರ್ಶನವಾಗಿದೆ ಎಂದು ದೂರಿದರು,

ಜಮೀನು ಖರೀದಿಗೆಂದು ೧೦ ಕೋಟಿ ರೂ ಮೀಸಲಿರಿಸಿದೆ ಅದರೆ ಈಗಾ ನಗರಸಭೆ ವ್ಯಾಪ್ತಿಗೆ ಸೇರಿರುವ ಜಮೀನುಗಳು ಎಲ್ಲೆಲ್ಲಿ ಇದೆ ಎಂಬುವುದು ಮಾಹಿತಿ ನೀಡಿ, ಈಗಾ ನಗರಸಭೆಗೆ ಸೇರಿರುವ ಜಮೀನುಗಳು ಏನಾಗಿದೆ. ಸಂಗೊಂಡಹಳ್ಳಿ, ಬಾರಂಡಹಳ್ಳಿ, ಮೂರಂಡಹಳ್ಳಿ, ಖಾದ್ರಿಪುರ ಜಮೀನುಗಳು ಎಷ್ಟೆಷ್ಟು ಇದೆ ಎಂದು ಪ್ರಶ್ನಿಸಿದಾಗ ಸಂಬಂಧ ಪಟ್ಟ ಅಧಿಕಾರಿಗಳಿಂದ ಪೌರಕಾರ್ಮಿಕರ ವಸತಿ ಸೌಲಭ್ಯಕ್ಕೆ ಈಗಾಗಲೇ ಆಶ್ರಯ ಸಮಿತಿಯಲ್ಲಿ ಕೆಲವರಿಗೆ ಹಂಚಿಕೆ ಮಾಡಲಾಗಿದೆ ಎಂಬ ಉತ್ತರಿಸಿದರು,
ಅಶ್ರಯ ಸಮಿತಿಗೆ ಸಂಬಂಧಿಸಿದಂತೆ ನಗರಸಭೆಯ ಜೀವನ್ ಅವರು ಸಂಗೊಂಡಹಳ್ಳಿಯಲ್ಲಿ ೫ ಎಕರೆ ಜಮೀನು ಇದ್ದು ಸರ್ವೆ ಮಾಡಲಾಗಿದೆ. ಬಾರಂಡಹಳ್ಳಿಯಲ್ಲಿ ೪,೧೩ ಎಕರೆ ಇದ್ದು ೫೯ ಮಂದಿಗೆ ಪೌರಕಾರ್ಮಿಕರಿಗೆ ನಿವೇಶನದ ಹಕ್ಕು ಪತ್ರ ವಿತರಿಸಲಾಗಿದ್ದು ೧ ಎಕರೆ ಉಳಿದಿದೆ. ಖಾದಿಪುರದಲ್ಲಿ ೧೦ ಎಕರೆ ಜಮೀನು ಇದೆ ಎಂದು ಉತ್ತರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿ ಸೂರಿ ಅವರು ರಹಮತ್ ನಗರ, ಮಿಲತ್ ನಗರ,ಕೀಲು ಕೋಟೆ, ಗಾಂಧಿ ನಗರ ಸೇರಿದಂತೆ ಅನೇಕ ಕಡೆ ನಿವೇಶನ ಇಲ್ಲದೆ ಕಡುಬಡವರು ಇದ್ದು ಅವರಿಂದ ನಗರಸಣೆಗೆ ಅರ್ಜಿಗಳು ಬಂದಿದ್ದರೂ ಸಹ ವಿತರಿಸುವ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ ಅವರು ಇರುವಂತ ನಗರಸಭೆ ಜಮೀನುಗಳನ್ನು ಹಂಚಿಕೆ ಮಾಡದೆ ೧೦ ಕೋಟಿ ವೆಚ್ಚದಲ್ಲಿ ಜಮೀನು ಖರೀದಿ ಏಕೆಂದು ಪ್ರಶ್ನಿಸಿದ ಅವರು ಸಾರ್ವಜನಿಕರ ತೆರಿಗೆ ಹಣವನ್ನು ವೆಚ್ಚ ಮಾಡುವ ಮೊದಲು ಪರಮಾರ್ಷೆ ಮಾಡಬೇಕೆಂದು ಕಿವಿ ಮಾತು ತಿಳಿಸಿದರು,

ವಿದ್ಯುತ್ ಬಿಲ್ ಸೋರಿಕೆ ಕುರಿತು ಬೆಸ್ಕಾಂ ಎ.ಇ.ಇ. ಸ್ವಾಮಿ ಪ್ರತಿ ಕ್ರಿಯಿಸಿ ಬೀದಿದೀಪಗಳ ನಿರ್ವಾಹಣೆಯನ್ನು ಮಾಡಲು ಹೊಸದಾಗಿ ಆಟೋ ಮೀಟರ್ ಆಳವಡಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇದೆ. ಸಂಜೆ ೬ ಗಂಟೆಯಿಂದ ಬೆಳಿಗ್ಗೆ ೬ ಗಂಟೆಯವರೆಗೆ ಮಾತ್ರ ದೀಪಗಳು ಬೆಳಗಿ ನಂತರ ಸಂರ್ಪಕ ಕಡಿತಗೊಳ್ಳುತ್ತದೆ. ಇದರಿಂದ ಗುತ್ತಿಗೆದಾರರು ಸಮರ್ಪವಾಗಿ ನಿರ್ವಾಹಣೆ ಮಾಡದಿದ್ದರೂ ವಿದ್ಯುತ್ ಮತ್ತು ಬಿಲ್ ಸೋರಿಕೆ ಅಗುವುದು ಎರಡು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದ ಅವರು ೧೫ ಬೀದಿ ದೀಪಗಳ ಕಂಬಗಳಿಗೆ ಒಂದು ಮೀಟರ್ ಅಳವಡಿಸಿರುತ್ತದೆ ಎಂದು ತಿಳಿಸಿದರು,