ನಿರ್ಮಾಪಕ ಕುಮಾರ್ ವಿರುದ್ದ ನ್ಯಾಯಾಲಯಕ್ಕೆ : ನಟ  ಕಿಚ್ಚ ಸುದೀಪ್

ಬೆಂಗಳೂರು,ಜು.10- ಚಿತ್ರದಲ್ಲಿ ನಟಿಸುತ್ತೇನೆ ಎಂದು  ಹಣ ಪಡೆದು  ಕಾಲ್ ಶೀಟ್ ಕೊಡದೆ ಸತಾಯಿಸುತ್ತಿದ್ದಾರೆ‌. ಅವರ ಮನೆ ಎದುರು ಧರಣಿ ನಡೆಸುವುದಾಗಿ ಬೆದರಿಕೆ ಹಾಕಿದ್ದ ನಿರ್ಮಾಪಕ  ಎನ್. ಎಂ ಕುಮಾರ್ ವಿರುದ್ದ ನ್ಯಾಯಾಲಯಕ್ಕೆ ಹೋಗುವುದಾಗಿ ನಟ ಕಿಚ್ಚ ಸುದೀಪ್ ಪ್ರಕಟಿಸಿದ್ದಾರೆ.

ನಿರ್ಮಾಪಕ ಎಂ.ಎನ್ ಕುಮಾರ್ ಆತ್ಮಹತ್ಯೆಗೆ ನಾಲ್ಕೈದು ಬಾರಿ ಪ್ರಯತ್ನ ಪಟ್ಟಿದ್ದಾರೆ. ಅನಾಹುತವಾದರೆ  ಸುದೀಪ್ ಕಾರಣ ಎಂದಿದ್ದ ಮತ್ತೊಬ್ಬ  ನಿರ್ಮಾಪಕ   ಎಂ.ಎನ್   ಸುರೇಶ್ ವಿರುದ್ದವೂ ನ್ಯಾಯಾಲಯಕ್ಕೆ ಹೋಗುವುದಾಗಿ ಸುದೀಪ್ ತಿಳಿಸಿದ್ದಾರೆ.

ತಮ್ಮ ವಿರುದ್ಧ ಬಂದಿರುವ ಆರೋಪಗಳ ವಿರುದ್ಧ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳುವ ಉದ್ದೇಶದಿಂದ  ನ್ಯಾಯಾಲಯಕ್ಕೆ ಹೋಗುತ್ತಿದ್ದೇನೆ ನನ್ನ ತಪ್ಪಿದ್ದರೆ ನ್ಯಾಯಾಲಯ ನೀಡುವ ದಂಡಪಾವತಿಗೆ  ತಲೆಬಾಗುತ್ತೇನೆ. ಇಲ್ಲದಿದ್ದರೆ ನ್ಯಾಯಾಲಯದಲ್ಲಿ ಎಲ್ಲವೂ ಪ್ರಕರಣ ಇತ್ಯರ್ಥವಾಗಲಿ ಎಂದು ಅವರು ತಿಳಿಸಿದ್ದಾರೆ

ಚಲನಚಿತ್ರ ವಾಣಿಜ್ಯ ಮಂಡಳಿಗೆ ಈ ಸಂಬಂಧ ಐದು ಪುಟಗಳ ಸುದೀರ್ಘ ಪತ್ರ ಬರೆದಿರುವ ನಟ ಸುದೀಪ್, 80 ವರ್ಷಗಳಿಗೆ ಅಧಿಕ ಇತಿಹಾಸವಿರುವ ಕನ್ನಡ ಚಿತ್ರರಂಗದಲ್ಲಿ ಕಳೆದ 27 ವರ್ಷಗಳಿಂದ ನಟ ನಿರ್ದೇಶಕ, ನಿರ್ಮಾಪಕ, ಬರಹಗಾರನಾಗಿ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಚಿತ್ರರಂಗಕ್ಕೆ ನನ್ನದು ಆದ ಅಳಿಲು ಸೇವೆ ಇದೆ.ಈ ಅವಧಿಯಲ್ಲಿ ಯಾವುದೇ ಕಪ್ಪುಚುಕ್ಕೆ ನನ್ನ ಮೇಲೆ ಇಲ್ಲ ಎಂದು ತಿಳಿಸಿದ್ದಾರೆ.

ಇಷ್ಟು ವರ್ಷಗಳ ಅವಧಿಯಲ್ಲಿ ನನಗೂ ಕೂಡ ಹಲವು ನಿರ್ಮಾಪಕರಿಂದ ಹಣ ಬರಬೇಕಾಗಿದೆ ಎಂದು ಕೂಡ ತಾವು ವಾಣಿಜ್ಯ ಮಂಡಳಿ ಆಗಲಿ ಅಥವಾ ಇನ್ಯಾವುದೇ ಸಂಘಟನೆಯ ಮೊರೆ ಹೋಗಿಲ್ಲ. ವಾಣಿಜ್ಯ ಮಂಡಳಿಗೆ ಬಂದ  ದೂರುಗಳನ್ನು ಪರಿಶೀಲಿಸಿ ಮುಂದುವರಿಯಬೇಕೆ ಹೊರತು ಸುಖ ಸುಮ್ಮನೆ ಬಂದದನ್ನು ಸ್ವೀಕರಿಸಬಾರದು ಎಂದು ಅವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ಸಲಹೆ ನೀಡಿದ್ದಾರೆ.

ನಿರ್ಮಾಪಕ ಕುಮಾರ್ ಅವರಿಗೆ ಮಾನವೀಯತೆಯ ದೃಷ್ಟಿಯಿಂದ ಹಲವು ಬಾರಿ  ಸಹಾಯ  ಮಾಡಲು ಮುಂದಾಗಿದೆ ಆದರೆ ಅದ್ಯಾಕೋ ಕಾಲ ಕೂಡಿ ಬರಲಿಲ್ಲ ಯಾವಾಗ ತಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ ಬಂದರೋ ತಾವು ಅವರ ಸಂಪರ್ಕ ಕಡಿತ ನಾಡಿಕೊಂಡಿದ್ದಾಗಿ ತಿಳಿಸಿದ್ದಾರೆ.

ಸುರೇಶ್ ವಿರುದ್ದೂ ದೂರು:

ನಿರ್ಮಾಪಕ ಸುರೇಶ್ ಅವರು ತಮ್ಮ ವಿರುದ್ಧ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ  ಅವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ.

ನಟ ಸುದೀಪ್ ಅವರು ಕಾಲ್ ಶೀಟ್ ಕೊಡದ ಹಿನ್ನೆಲೆಯಲ್ಲಿ ನಿರ್ಮಾಪಕ ಕುಮಾರ್ ನಾಲ್ಕೈದು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಅನಾಹುತವಾದರೆ ಸುದೀಪ್ ಅವರೇ ಹೊಣೆ ಎನ್ನುವ ಹೇಳಿಕೆ ನೀಡಿರುವುದು ದುರದೃಷ್ಟಕರ ತಾವು ಈ ರೀತಿಯ ಪಾಪಪ್ರಜ್ಞೆಯಲ್ಲಿ ಇರಲು ಇಷ್ಟಪಡಿವುದಿಲ್ಲ ಹೀಗಾಗಿ ಅವರ ವಿರುದ್ಧವು ದೇವರು ದಾಖಲಿಸಿರಿಗಾಗಿ ತಿಳಿಸಿದ್ದಾರೆ

ಸ್ವಂತ ಹಣದಿಂದ ಖರೀದಿಸಿದ್ದು:

ರಾಜರಾಜೇಶ್ವರಿ ನಗರದಲ್ಲಿ ತಾವು ಶೇಕಡಾ 95ರಷ್ಟು ಸಾಲದಲ್ಲಿ ಮನೆಯನ್ನು ಖರೀದಿ ಮಾಡಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ..

ರಾಜರಾಜೇಶ್ವರಿ ನಗರ ಮನೆ ಖರೀದಿಗೆ ಹಣ ನೀಡಿದೆ ಎನ್ನುವ ಕುಮಾರ ಅವರ ಆರೋಪದಲ್ಲಿ ಯಾವುದು ಸತ್ಯ ಅಂಶವಿಲ್ಲ ಎನ್ನುವುದನ್ನು ನಟ ಸುದೀಪ್ ಇದೆ ವೇಳೆ ಸ್ಪಷ್ಟಪಡಿಸಿದ್ದಾರೆ

ಅನಿವಾರ್ಯಗಾಗಿ ನ್ಯಾಯಾಲಯಕ್ಕೆ

ನಟ,ನಿರ್ಮಾಪಕರ ವಿರುದ್ದದ ಜಗಳದಲ್ಲಿ  ವಾಣಿಜ್ಯಮಂಡಳಿ ಉಭಯ ಸಂಕಟಕ್ಕೆ ಸಿಲುಕಬಾರದು ಎನ್ನುವ ಉದ್ದೇಶದಿಂದ ನ್ಯಾಯಾಲಯಕ್ಕೆ ಹೋಗುತ್ತಿರುವುದಾಗಿ ತಿಳಿಸಿದ್ದಾರೆ.

ನ್ಯಾಯಾಲಯ ಯಾವುದೇ ತೀರ್ಪು ನೀಡಿದರೂ ಅದನ್ನು ಗೌರವಿಸುವುದಾಗಿ ತಿಳಿಸಿದ್ದಾರೆ.