ನಿರ್ಮಾಪಕರ ಸಂಘಕ್ಕೆ ನಾನಾ ಅಡ್ಡಿ

ಎಲ್ಲಾ ಅಂದುಕೊಂಡಂತೆ ಆದಗಿದ್ದರೆ ನವಂಬರ್ 1 ರಂದ ನಿರ್ಮಾಪಕರ ಸಂಘದ ಕಟ್ಟಡ ಉದ್ಘಾಟನೆಯಾಗಬೇಕಾಗಿತ್ತು. ಅದು ಇದೀಗ ಮತ್ತೆ ಮುಂದೂಡಿಕೆಯಾಗಿದೆ.

ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಪ್ರತಿಕ್ರಿಯಿಸಿ, ಉದ್ಘಾಟನೆ ಮಾಡಲು ತಯಾರಿ ನಡೆದಿತ್ತು. ವಾಣಿಜ್ಯ ಮಂಡಳಿಯ ಅಧ್ಯಕ್ಷರು ಕಟ್ಟಡ ನಿರ್ಮಾಣಕ್ಕಾಗಿ ಮೂರು ಕೋಟಿ ರೂಪಾಯಿ ಕೊಡಿಸಿದ್ದರು. ಅದಕ್ಕೆ ನಮ್ಮರೇ ತಕರಾರು ತಂದಿದ್ದಾರೆ ಇದರಿಂದ ಕಟ್ಟಡ ನಿರ್ಮಾಣ ಮತ್ತೆ ವಿಳಂಬವಾಗಿದೆ. ಸಂಕ್ರಾಂತಿ ವೇಳೆಗೆ ಉದ್ಘಾಟನೆ ಮಾಡುವ ಉದ್ದೇಶವಿದೆ ಎಂದರು.

ಕುಚುಕು ಚಿತ್ರದ ಟ್ರೈಲರ್ ವೇಳೆ ಮಾತನಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ ಸುರೇಶ್‍ಮ ನಿರ್ಮಾಪಕರ ಸಂಘಕ್ಕೆ ಸಾಲ ಕೊಡಿಸಿದ್ದರೂ ಅದು ಸರಿ ಇಲ್ಲ. ಇದು ಸರಿಯಿಲ್ಲ. ಯಾಕೆ 3 ಕೋಟಿ ಕೊಟ್ಟಿದ್ದಾರೆ ಎಂದು ಕೆಲವರು ತಕರಾರು ತೆಗೆದಿದ್ದಾರೆ. ಅಡ್ಡಿ ಪಡಿಸಿದವರನ್ನು ಕಟ್ಟಡಕ್ಕೆ ಕರೆತಂದು ತೋರಿಸಿ ಅವರಿಗೆ ಮುಜಗರ ಆಗಲಿ ಎಂದು ಸಲಹೆ ನೀಡಿದರು.

ಸೆಟಲೈಟ್ ಹಕ್ಕು ಕೊಡಿಸಿ

ಹೊಸ ನಿರ್ಮಾಪಕರಿಗೆ ವಾಣಿಜ್ಯ ಮಂಡಳಿಯಿಂದಲೇ ಸೆಟಲೈಟ್ ಮತ್ತು ಡಿಜಿಟಲ್ ಹಕ್ಕು ಕೊಡಿಸಲು ಘಟಕ ಸ್ಥಾಪಿಸಿ ಎಂದು ನಟ ಅರ್ಜುನ್ ಚೌಹ್ಹಾಣ್ ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ಮನವಿ ಮಾಡಿಕೊಂಡರು.

ಹೊಸ ನಿರ್ಮಾಪಕರು ಚಿತ್ರ ಪೂರ್ಣ ಮಾಡಿಕೊಂಡು ಬಂದರೆ ಅವರಿಗೆ ಚಿತ್ರಮಂದಿರಗಳಿಗೆ ಅವಕಾಶ ಜೊತೆಗೆ ಡಿಜಿಟಲ್ ಹಕ್ಕು ಕೊಡಿಸುವ ಕೆಲಸ ಆದರೆ ಹೊಸ ನಿರ್ಮಾಪಕರು ಉಳಿಯಲಿದ್ದಾರೆ ಎಂದರು