ನಿರ್ಮಾಪಕರಾದ ಹಾಸ್ಯ ನಟ ವಿಶ್ವ

ಮೊಟ್ಟ ಮೊದಲ ಬಾರಿಗೆ ಹಾಸ್ಯನಟ ತರಂಗ ವಿಶ್ವ  ನಿರ್ಮಿಸುತ್ತಿರುವ ಗಿರ್ಕಿ ಚಿತ್ರ  ನಿರ್ಮಾಣಕ್ಕೆ ಮುಂದಾಗಿದ್ದಾರೆ. ಜೊತೆಗೆ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ನಿರ್ಮಾಪಕರಾಗಿ ಅದೃಷ್ಠ ಪರೀಕ್ಷೆಗೆ ಇಳಿದಿದ್ದಾರೆ.

ನಿರ್ದೇಶಕ ಯೋಗರಾಜ್ ಭಟ್ ಶಿಷ್ಯ ವೀರೇಶ್ ಪಿ ಎಮ್ ಆಕ್ಷನ್ ಕಟ್  ಹೇಳಿದ್ದು, ಚಿತ್ರದ ಕೆಲಸಗಳು ಸಂಪೂರ್ಣವಾಗಿ ಮುಗಿದಿದ್ದು ಸೆನ್ಸಾರ್ ಗೆ ಕಳಿಸಲು ಸಿದ್ಧವಾಗಿದೆ.

ಚಿತ್ರದ ಮುಖ್ಯ ಭೂಮಿಕೆಯಲ್ಲಿ ವಿಲೋಕ್ ರಾಜ್, ತರಂಗ ವಿಶ್ವ, ದಿವ್ಯ ಉರುಡುಗ ಮತ್ತು ರಾಶಿ ಮಹದೇವ್  ನಟಿಸಿದ್ದಾರೆ. ಚಿತ್ರದಲ್ಲಿ ಎರಡು ಫೈಟ್ ಮತ್ತು ಮೂರು ಗೀತೆಗಳಿದ್ದು, ವೀರ್ ಸಮರ್ಥ್ ಅವರು ಸಂಗೀತ ಸಂಯೋಜಿಸಿದ್ದಾರೆ. ಇತ್ತೀಚಿಗಷ್ಟೇ ನಿರ್ದೇಶಕರೇ ಬರೆದಿರುವ “ಗಿರ್ಕಿ” ಟೈಟಲ್ ಟ್ರ್ಯಾಕ್ ನ್ನು ರಘು ದೀಕ್ಷಿತ್  ಹಾಡಿದ್ದು ಗೀತೆ ಅದ್ಭುತವಾಗಿ ಮೂಡಿಬಂದಿದೆ.

ಇನ್ನು ಈ ಚಿತ್ರ ಜನವರಿ ಕೊನೆಯ ವಾರದಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ಯೋಜನೆ ಹಾಕಿಕೊಂಡಿದ್ದಾರೆ.