ನಿರ್ಮಾಪಕನ ಹಾದಿ ಹಿಡಿದ ನಿರ್ದೇಶಕ ಅಭಿರಾಮ್

ಬೆಂಗಳೂರು, ಮೇ. 28-ಕೊರೊನಾ ಸೋಂಕಿನಿಂದ ಕೆಲ ದಿನಗಳ‌ ಹಿಂದೆ ನಿಧನರಾಗಿದ್ದ ನಟ,ನಿರ್ಮಾಪಕ ಮಂಜುನಾಥ್ ಹಾದಿಯನ್ನು ನಿರ್ದೇಶಕ ಅಭಿರಾಮ್ ಹಿಡಿದಿದ್ದಾರೆ. ಉಸಿರಾಟದ ಸಮಸ್ಯೆಯಿಂದ‌‌ ಅವರು ನಿಧನರಾಗಿದ್ದಾರೆ‌.

ಸಂಯುಕ್ತ- 2 ಮತ್ತು ೦% ಲವ್ ಚಿತ್ರವನ್ನು ನಿರ್ಮಾಪಕ ಡಿ.ಎಸ್.‌ ಮಂಜುನಾಥ್ ನಿರ್ಮಾಣ ಮಾಡಿದ್ದರೆ ಅಭಿರಾಮ್ ನಿರ್ದೇಶನ ಮಾಡಿದ್ದರು.

ಸದ್ಯ ೦% ಲವ್‌, ಚಿತ್ರದಲ್ಲಿ ಹೀರೋ ಆಗಿ ಕೂಡಾ ನಟಿಸುತ್ತಿ‌ದ್ದ ಮಂಜುನಾಥ್ ನಿರ್ಮಾಣ ಕೂಡ ಮಾಡುತ್ತಿದ್ದರು. ಕೆಲ ದಿನಗಳ‌ ಹಿಂದೆ ಕೊರೊನಾ ದಿಂದ‌‌ ಅವರು ನಿಧನರಾಗಿದ್ದರು.

ಇದೀಗ ೦% ಲವ್‌ ,ಸಂಯುಕ್ತ-2 ಎರಡೂ ಚಿತ್ರದ ನಿರ್ದೇಶಕ ಅಭಿರಾಮ್ ಉಸಿರಾಟದ ಸಮಸ್ಯೆ ಹಾಗು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಎರಡೂ ಚಿತ್ರದ ನಿರ್ಮಾಪಕ,‌ನಿರ್ದೇಶಕರು ಚಿತ್ರ ಬಿಡುಗಡೆಯಾಗುವ ಮುನ್ನವೇ ಮೃತಪಟ್ಟಿರುವ ಮನ ಕಲಕುವ ಘಟನೆ ನಡೆದಿದೆ

ನಿರ್ದೇಶಕ ಅಭಿರಾಮ್ ಅವರಿಗೆ ಜ್ವರ, ಕೆಮ್ಮು ಇತ್ಯಾದಿ ಅನಾರೋಗ್ಯದ ಲಕ್ಷಣಗಳಿದ್ದರೂ ಸೂಕ್ತ ಚಿಕಿತ್ಸೆ ಪಡೆದಿರಲಿಲ್ಲ. ಕನಿಷ್ಟ ಕೋವಿಡ್‌ ಪರೀಕ್ಷೆಯನ್ನಾದರೂ ಮಾಡಿಸಿಕೊಳ್ಳದೆ ಉಸಿರಾಟದ ತೊಂದರೆ ಶುರುವಾಗುವ ತನಕ ಮನೆಯಲ್ಲೇ ಇದ್ದ ಕಾರಣವೋ ಏನೋ ಇಂದು ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಆಪ್ತ ರು ತಿಳಿಸಿದ್ದಾರೆ.

ಸಂತಾಪ:.

ಎರಡು ಚಿತ್ರಗಳಲ್ಲಿ ಕೆಲಸ ಮಾಡಿದ್ದ ನಿರ್ಮಾಪಕ, ನಿರ್ದೇಶಕರ ನಿಧನಕ್ಕೆ ಕನ್ನಡ ಚಿತ್ರರಂಗ‌ ತೀವ್ರ ಸಂತಾಪ ಸೂಚಿಸಿದೆ.