
ಗುರುಗ್ರಾಮ್(ಹರಿಯಾಣ),ಮಾ.೨೯-ನಗರದ ದೌಲತಾಬಾದ್ ಬಳಿಯ ಗುರುಗ್ರಾಮ್-ದ್ವಾರಕಾ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ನಿರ್ಮಾಣ ಹಂತದಲ್ಲಿದ್ದ
ಫ್ಲೈಓವರ್ ಕುಸಿದು ಮೂವರು ಕಾರ್ಮಿಕರು ಗಾಯಗೊಂಡಿದ್ದಾರೆ.
ಕಾರ್ಮಿಕರನ್ನು ಸ್ಥಳೀಯ
ಆಸ್ಪತ್ರೆಗೆ ದಾಖಲಿಸಲಾಗಿದ್ದು
ಅವರಲ್ಲಿ ಓರ್ವ ನ ಸ್ಥಿತಿ
ಗಂಭೀರವಾಗಿದೆ.
ಗುರುಗ್ರಾಮ್-ದ್ವಾರಕಾ
ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ
ನಿರ್ಮಾಣ ಹಂತದಲ್ಲಿದ್ದ
ಫ್ಲೈಓವರ್ನ ಒಂದು ಭಾಗ ಇಂದು ಬೆಳಗ್ಗೆ ೭.೩೦ರ ಸುಮಾರಿಗೆ
ಏಕಾಏಕಿ ಕುಸಿದು ಅದರಡಿ ಸಿಲುಕಿದ ಮೂವರು ಕಾರ್ಮಿಕರು
ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ಮತ್ತು ರಕ್ಷಣಾ ತಂಡದ ಸಿಬ್ಬಂದಿ
ಸೇರಿದಂತೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿ ಮಾಹಿತಿ
ಕಲೆ ಹಾಕುತ್ತಿದ್ದಾರೆ.