ನಿರ್ಮಾಣ ಉತ್ಸವದಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ

ಕಲಬುರಗಿ,ಮೇ.17-ಇಂದಿನ ಇಂಜಿನಿಯರಿಂಗ್ ಕಾಲೇಜಿನ ಪಠ್ಯ ಪಠ್ಯಕ್ರಮಕ್ಕೂ ಉದ್ದಿಮೆಗಳಿಗೆ ಬೇಕಾಗುವ ತಂತ್ರಜ್ಞಾನಕ್ಕೂ ಇರುವ ಅಂತರ ಇನ್ನೂ ಕಡಿಮೆಯಾಗಬೇಕಾಗಿದೆ. ಉದ್ಯಮ ಸ್ನೇಹಿ ಪಠ್ಯಕ್ರಮ, ಉದ್ಯಮಕ್ಕೆ ಬೇಕಾಗುವ ಕೌಶಲ್ಯಗಳನ್ನು, ವಿದ್ಯಾರ್ಥಿಗಳಲ್ಲಿ ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಪಿಡಿಎ ಕಾಲೇಜಿನ ಮಾಜಿ ವಿದ್ಯಾರ್ಥಿಯಾಗಿ ನಾನು ಮತ್ತು ನಮ್ಮ ಕಂಪನಿ ಮತ್ತು ನಮ್ಮ ಸಹಪಾಠಿ ವೃಂದ ಎಲ್ಲರೂ ಸಹಾಯಕ್ಕೆ ಸದಾ ಸಿದ್ಧರಿದ್ದೇವೆ. ನಿರ್ಮಾಣದಂತಹ ಉತ್ಸವಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುತ್ತವೆ. ಹೊಸ ಹೊಸ ಜನ ಉಪಯೋಗಿ ನಾವಿನ್ಯತೆಗಳನ್ನು, ಜನ ಉಪಯೋಗಿ ತಂತ್ರಜ್ಞಾನಗಳನ್ನು, ಜನರ ಸಾಮಾನ್ಯ ಸಮಸ್ಯೆಗಳಿಗೆ ಪರಿಹಾರ ನೀಡುವಂತಹ ನಾವಿನ್ಯತೆಗಳನ್ನು, ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮಾಡಬೇಕಾಗಿದೆ ಎಂದು ಬೆಂಗಳೂರಿನ ನಿಂಬಲ್ ವಿಷನ್ ಪ್ರೈವೇಟ್ ಲಿಮಿಟೆಡ್ ನ ಸಿಇಒ ಮತ್ತು ಸಂಸ್ಥಾಪಕರಾದ ಪಿಡಿಎ ಕಾಲೇಜಿನ ಮಾಜಿ ವಿದ್ಯಾರ್ಥಿ ಚಿನ್ನಯ್ಯ ಮಠ ಹೇಳಿದರು.
ನಗರದ ಪಿಡಿಎ ಕಾಲೇಜಿನಲ್ಲಿ ಆಯೋಜಿಸಿರುವ ಎರಡು ದಿನಗಳ (ಮೇ.16 ಮತ್ತು 17) ನಿರ್ಮಾಣ ಸಾಂಸ್ಕøತಿಕ ಮತ್ತು ತಾಂತ್ರಿಕ ಉತ್ಸವವನ್ನು ಉದ್ಘಾಟಿಸಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಗೌರವ ಅತಿಥಿಗಳಾಗಿ ಆಗಮಿಸಿದ್ದ ಕಾಲೇಜಿನ ಮಾಜಿ ವಿದ್ಯಾರ್ಥಿ ಮತ್ತು ಖ್ಯಾತ ನಟ ಅಭಿಷೇಕ್ ಗೀತೆ ಮಾತನಾಡುತ್ತ, ಪಿಡಿಎ ಕಾಲೇಜು ನನಗೆ ಮುಖ್ಯವಾಗಿ ಆತ್ಮಸ್ಥೈರ್ಯವನ್ನು ಕೊಟ್ಟಿತು. ವೃತ್ತಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು ಕೂಡ ಓದುತ್ತಿರುವಾಗ ನನ್ನ ಹವ್ಯಾಸಗಳಾದಂತಹ ನೃತ್ಯ ಮತ್ತು ನಟನ ಕಲೆಗೆ ನಮ್ಮ ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು ಪೆÇ್ರೀತ್ಸಾಹ ಕೊಟ್ಟು ಇವತ್ತು ನಾನು ಖ್ಯಾತ ನಟ ಮತ್ತು ಇಂಜಿನಿಯರಾಗಲು ಪಿಡಿಎ ಇಂಜಿನಿಯರಿಂಗ್ ಕಾಲೇಜಿನಿಂದ ಎಲ್ಲಾ ಪ್ರಾಧ್ಯಾಪಕರು ಕಾರಣ ಎಂದು ಸಂತಸ ವ್ಯಕ್ತಪಡಿಸಿದರು.
ಪದ್ಮಶ್ರೀ ಪ್ರಶಸ್ತಿ ವಿಜೇತರು, ಮ್ಯಾಕ್ಸ್ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತರು ಆದ ನೀಲಿಮಾ ಮಿಶ್ರವರು ಮಾತನಾಡುತ್ತ, ನಾನು ಚಿಕ್ಕವಳಿದ್ದಾಗ ನಮ್ಮ ಅಕ್ಕ ಪಕ್ಕದವರು ಹಸಿವಿನಿಂದ ನಿದ್ರೆ ಮಾಡದೇ ಇರುವುದು ನೋಡಿ 13ನೇ ವಯಸ್ಸಿಗೆ ಅವರಿಗೆ ಪರಿಹಾರ ಕೊಡದೆ ನಾನು ಮದುವೆ ಮಾಡಿಕೊಳ್ಳುವುದಿಲ್ಲ ಎಂದು ನಿರ್ಧಾರ ಮಾಡಿ ಇವತ್ತು ಸಮಾಜಕ್ಕಾಗಿ ಏನಾದರು ಮಾಡಬೇಕೆಂದು ಮಹಿಳೆಯರ ಕಲ್ಯಾಣಕ್ಕಾಗಿ ದುಡಿದುತ್ತಿರುವುದಾಗಿ ಹೇಳಿದರು. ನಾವು ಸಂತೃಪ್ತರಾದರು ಕೂಡ ಯಾರು ಕೆಲವು ಅವಕಾಶಕ್ಕಾಗಿ ಕಾಯುತ್ತಿರುತ್ತಾರೋ ಯಾರಿಗೆ ಬಡತನ ಹಸಿವು ಸಮಸ್ಯೆಗಳಾಗಿದ್ದಾವೋ ಅಂತಹ ಸಂತ್ರಸ್ತರಿಗೆ ಸಹಾಯ ಮಾಡಬೇಕೆಂದು ನುಡಿದರು. ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ಕಲಬುರ್ಗಿಯ ನಿರುದ್ಯೋಗಿ ಮಹಿಳೆಯರು ಸಿದ್ಧಪಡಿಸಿದ ಜಾಕಾಯಿಟಿಗಳನ್ನು ಎಲ್ಲರೂ ಖರೀದಿಸಬೇಕಾಗಿ ವಿನಂತಿಸಿದರು. ಅದೇ ರೀತಿ ಇನ್ನೊಬ್ಬ ಗೌರವ ಅತಿಥಿಗಳಾದ ಡಾ. ಶುಭಂಗಿ ಪಾಟೀಲ್ ಅವರು ಮಾತನಾಡುತ್ತ “ನನ್ನ ಎಲ್ಲಾ ಸಾಧನೆಗೆ ಪಿಡಿಎ ಕಾಲೇಜಿನ ಆಡಳಿತ ಮಂಡಳಿಯರ ಮತ್ತು ಅಧ್ಯಕ್ಷರಾದ ಶಶಿಲ್ ನಮೋಶಿಯವರ ಸಹಾಯ ಮತ್ತು ಬೆಂಬಲ ಕಾರಣ” ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದಂತಹ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶಶಿಲ್ ನಮೋಶಿಯವರು ಮಾತನಾಡುತ್ತ “ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಯಾವುದೇ ಕಾರ್ಯಕ್ರಮಗಳಿದ್ದರೂ ಕೂಡ ನಮ್ಮ ಆಡಳಿತ ಮಂಡಳಿಯು ಸದಾ ಬೆಂಬಲ ನೀಡುತ್ತದೆ. ಪಿಡಿಎ ಕಾಲೇಜಿನಲ್ಲಿ ಒಳ್ಳೆಯ ಕಾರ್ಯನಿರ್ವಹಿಸುವ ಗುಂಪು ಇದ್ದು ಅದು ಇನ್ನೂ ಕೂಡ ಅತ್ಯಂತ ಕ್ರಿಯಾಶೀಲವಾಗಿ ಮಾಡಿ ಕಾಲೇಜನ್ನು ಕರ್ನಾಟಕ ರಾಜ್ಯದಲ್ಲಿ ಟಾಪ್ ಐದರಲ್ಲಿ ಬರುವಂತೆ ಎಲ್ಲರೂ ಕೆಲಸ ಮಾಡಬೇಕೆಂದು ನುಡಿದರು. ಕಾಲೇಜಿನ ಪ್ರಚಾರದಂತ ಡಾ. ಎಸ್.ಆರ್. ಮೀಸೆ ಅವರು ಸ್ವಾಗತಿಸಿದರು. ನಿರ್ಮಾಣ 2024ರ ಸಂಚಾಲಕರಾದ ಡಾ. ಪ್ರಶಾಂತ್ ಕಾಂಬಳೆ ಅವರು ಕಾರ್ಯಕ್ರಮ ಈ ಉತ್ಸವದ ಕುರಿತು ವಿವರ ನೀಡಿದರು ಸಂಯೋಜಕರಾದ ಪೆÇ್ರ .ವೀಣಾ ಸರಾಫ್ ಡಾ .ವೀಣಾ ಪೆÇ್ರ. ಉದಯ್ ಬಳ್ಳಾರಿ ಅವರು ಅತಿಥಿಗಳನ್ನು ಪರಿಚಯಿಸಿದರು. ಸಂಯೋಜಕರಾದ ಪೆÇ್ರ. ಜಯಪ್ರಕಾಶ್ ಕ್ಷೀರಸಾಗರ ರವರು ವಂದಿಸಿದರು. ವೇದಿಕೆ ಮೇಲೆ ಬೆಂಗಳೂರಿನ ಮೇದಿನಿ ಟೆಕ್ನಾಲಜಿ ನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಕಲ್ಲೂರ್ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ರಾಜ ಭೀಮಳ್ಳಿ, ಕಾರ್ಯದರ್ಶಿ ಉದಯ್ ಚಿಂಚೋಳಿ, ಆಡಳಿತ ಮಂಡಳಿ ಸದಸ್ಯರಾದ ಅರುಣ್ ಕುಮಾರ್ ಎಂ ಪಾಟೀಲ್, ಡಾ. ಶರಣಬಸಪ್ಪ ಹರವಾಳ ,ಮಾದೇವಪ್ಪ ರಾಂಪುರೆ ಸಾಯಿನಾಥ ಪಾಟೀಲ್, ಡಾ. ಅನಿಲ್ ಪಟ್ಟಣ, ನಾಗಣ್ಣ ಘಂಟಿ, ಡಾ.ಶಿವಾನಂದ ಮೇಲ್ಕುಂದಿ ಕಾಲೇಜಿನ ಉಪ ಪ್ರಾಚಾರ್ಯರಾದ ಡಾ.ಶ್ರೀದೇವಿ ಸೋಮ, ಡಾ.ಎಸ್.ಆರ್ ಹೊಟ್ಟಿ, ಟೆಕ್ನೋವಿಜನ್ ಸಂಚಾಲಕರಾದ ಡಾ. ಸುಜಾತಾ ತೆರದಾಳ್, ವಿದ್ಯಾರ್ಥಿ ಪ್ರತಿನಿಧಿಗಳಾದ ಲಕ್ಷ್ಮಿಕಾಂತ್ ಶ್ರೀಗಿರಿ, ಚೇತನ್ಲಕಂಟೆ, ಉಪಸ್ಥಿತರಿದ್ದರು. ಉತ್ಸವದ ಸಂಯೋಜಕರಾದ ಅಕ್ಷಯ ಆಸ್ಪಲಿ ಯವರು ಕಾರ್ಯಕ್ರಮವನ್ನು ನಿರೂಪಿಸಿದರು. ತದನಂತರ ಟೆಕ್ನೋ ವಿಜನ್ ವಿದ್ಯಾರ್ಥಿಗಳ ಪ್ರಾಜೆಕ್ಟ್ ಪ್ರದರ್ಶನ ಕಾರ್ಯಕ್ರಮ ನಡೆಯಿತು ಸಾಯಂಕಾಲ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ಟೆಕ್ನೋ ಜನ ಸಂಯೋಜಕರಾದ ಡಾ. ಶರಣಬಸಪ್ಪ ಗಂದಿಗೆ ಡಾ ರಾಕೇಶ್ ಡಾ .ಪವನ್ ರಂಗದಾಳ ಉಪಸ್ಥಿತರಿದ್ದರು.