ನಿರ್ಮಲಾಗೆ ಹಣಕಾಸು,ಜೋಶಿಗೆ ಆಹಾರ, ಎಚ್ ಡಿಕೆಗೆ ಬೃಹತ್ ಕೈಗಾರಿಕೆ, ಶೋಭಾಗೆ‌‌ ಎಂಎಸ್ ಎಂಇ, ಸೋಮಣ್ಣಗೆ ರೈಲ್ವೆ

ಬೆಂಗಳೂರು: ಮೋದಿ ಸರ್ಕಾರದ ಸಚಿವ ಸಂಪುಟದಲ್ಲಿ ರಾಜ್ಯದ ಐವರಿಗೆ ಸಚಿವ ಸ್ಥಾನ ಸಿಕ್ಕಿದೆ. ಪ್ರಲ್ಹಾದ್‌ ಜೋಶಿ, ಎಚ್‌.ಡಿ.ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ಸಿಕ್ಕಿದ್ದರೆ, ವಿ.ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಅವರಿಗೆ ರಾಜ್ಯ ಖಾತೆ ನೀಡಲಾಗಿದೆ.
ಸೋಮಣ್ಣ ಅವರಿಗೆ ಡಬಲ್ ಧಮಾಕ ಒಲಿದಿದೆ. ಮತ್ತೊಂದೆಡೆ ಕೃಷಿ ಖಾತೆಯ ಬಗ್ಗೆ ಒಲವಿದ್ದ ಕಮಾರಸ್ವಾಮಿಗೆ ಪ್ರಾಪ್ತವಾಗಿಲ್ಲ. ಉಕ್ಕು ಮತ್ತು ಬೃಹತ್ ಕೈಗಾರಿಕೆ ಲಭಿಸಿದೆ.
ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರಿಗೆ, ಹಣಕಾಸು ಖಾತೆ ನೀಡಲಾಗಿದ್ದು, ಕಳೆದ ಬಾರಿ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ ಪ್ರಲ್ಹಾದ್‌ ಜೋಶಿ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ರಕ್ಷಣೆ, ಮರು ಬಳಕೆ ಇಂಧನ ಖಾತೆ ನೀಡಲಾಗಿದೆ.
ಕಳೆದ ಬಾರಿ ಕೃಷಿ ಖಾತೆ ರಾಜ್ಯ ಸಚಿವರಾಗಿದ್ದ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಈ ಬಾರಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ರಾಜ್ಯ ಖಾತೆ ಲಭಿಸಿದರೆ,
ತುಮಕೂರು ಸಂಸದ ವಿ.ಸೋಮಣ್ಣ ಅವರಿಗೆ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ನೀಡಲಾಗಿದೆ.