ನಿರ್ಭಿತ ಮತದಾನಕ್ಕಾಗಿ ಪೊಲೀಸ್ ಪಥಸಂಚಲನ

ತಾಳಿಕೋಟೆ:ಮೇ.1: ಲೋಕಸಭಾ ಚುನಾವಣಾ ನಿಮಿತ್ಯವಾಗಿ ಸಾರ್ವಜನಿಕರು ನಿರ್ಭಿತದಿಂದ ಮತಚಲಾವಣೆಗಾಗಿ ಮತ್ತು ಅಹೀತಕರ ಘಟನೆ ಜರುಗದಂತೆ ಮುಂಜಾಗೃತ ಕ್ರಮವಾಗಿ ಪಟ್ಟಣದಲ್ಲಿ ಮಂಗಳವಾರರಂದು ಗುಜರಾತ ರಾಜ್ಯದ ಪೊಲೀಸ್ ಪೋರ್ಸ್ ಮತ್ತು ತಾಳಿಕೋಟೆಯ ಪೊಲೀಸ್ ಸಿಬ್ಬಂದಿಗಳು ಪಟ್ಟಣದಲ್ಲಿ ಪಥ ಸಂಚಲನ ನಡೆಸಿದರು.
ಪಟ್ಟಣದ ಪೊಲೀಸ್ ಠಾಣೆಯಿಂದ ಪ್ರಾರಂಭಗೊಂಡ ಪಥ ಸಂಚಲನಕ್ಕೆ ಡಿವಾಯ್‍ಎಸ್‍ಪಿ ಬಲ್ಲಪ್ಪ ನಂದಗಾವಿ ಮತ್ತು ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ಅವರು ಚಾಲನೆ ನೀಡಿದರು. ಈ ಪಥ ಸಂಚಲನವು ಮಿಲತ್ ನಗರ, ಮಕಾಂದಾರ ಗಲ್ಲಿ, ಶ್ರೀ ಅಂಬಾಭವಾನಿ ಮಂದಿರ ರಸ್ತೆ, ಕತ್ರಿ ಭಜಾರ, ಮಹಲ್‍ಗಲ್ಲಿ, ಕೇಂಭಾವಿ ಗಲ್ಲಿ, ಭೋವಿ ಗಲ್ಲಿ, ಕೈಲಾಸಪೇಠೆ, ಪಂಚಸೈಯದ ದರ್ಗಾ, ಕತ್ರಿ ಭಜಾರ, ವಿಠ್ಠಲ ಮಂದಿರ ರಸ್ತೆ, ಶಿವಾಜಿ ಮಹಾರಾಜರ ವೃತ್ತ, ಬಸ್ ನಿಲ್ದಾಣದ ಮುಂಭಾಗದ ರಸ್ತೆ, ಶ್ರೀ ಬಸವೇಶ್ವರ ವೃತ್ತದ ಮೂಲಕ ಮರಳಿ ಪೊಲೀಸ್ ಠಾಣೆ ತಲುಪಿ ಪಥ ಸಂಚಲನವನ್ನು ಮುಕ್ತಾಯಗೊಳಿಸಲಾಯಿತು.
ಪೊಲೀಸ್ ಪಥ ಸಂಚಲನದ ವೇಳೆ ಪಟ್ಟಣದ ಶ್ರೀ ನಿಮಿಷಾಂಭಾ ದೇವಿ ಮಂದಿರ ಮುಂದೆ ಪಟ್ಟಣದ ನಾಗರಿಕರು ಮತ್ತು ಮಹಿಳೆಯರು ಪಥ ಸಂಚಲನದಲ್ಲಿ ಪಾಲ್ಗೊಂಡ ಪೊಲೀಸ್ ಸಿಬ್ಬಂದಿಗಳಿಗೆ ಆರುತಿ ಬೆಳಗಿ ಪಥ ಸಂಚಲನಕ್ಕೆ ಸ್ವಾಗತಕೋರಿದರು.
ಈ ಸಮಯದಲ್ಲಿ ಮಾತನಾಡಿದ ಡಿವಾಯ್‍ಎಸ್‍ಪಿ ಬಲ್ಲಪ್ಪ ನಂದಗಾವಿ ಅವರು ಲೋಕಸಭಾ ಚುನಾವಣೆ ನಿಮಿತ್ಯವಾಗಿ ಗುಜರಾತ ರಾಜ್ಯದಿಂದ ಪೊಲೀಸ್ ಪೋರ್ಸ್ ಆಗಮಿಸಿದೆ ಮೇ.7 ರಂದು ನಡೆಯುವ ಚುನಾವಣೆಯ ನಿಮಿತ್ಯವಾಗಿ ಪಟ್ಟಣದಲ್ಲಿ ಈ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಮತದಾರರು ನಿರ್ಭಿತದಿಂದ ಮತದಾನ ಮಾಡಬೇಕು ಚುನಾವಣಾ ಸಂದರ್ಬದಲ್ಲಿ ಯಾವುದೇ ರೀತಿ ಅಹೀತಕರ ಘಟನೆಗಳು ಜರುಗದಂತೆ ಮುಂಜಾಗೃತ ಕ್ರಮವನ್ನು ವಹಿಸಲಾಗಿದೆ ಎಂದರು.
ಈ ಸಮಯದಲ್ಲಿ ಗುಜರಾತ ಪೊಲೀಸ್ ಪೋರ್ಸ್‍ನ ಸಿಪಿಐ ವ್ಹಿ,ವ್ಹಿ. ನೀನಂ, ತಾಳಿಕೋಟೆ ಪೊಲೀಸ್ ಠಾಣಾ ಪಿಎಸ್‍ಐ ಮಹ್ಮದತೌಸೀಫ್ ಘೋರಿ, ಅಪರಾಧ ವಿಭಾಗ ಪಿಎಸ್‍ಐ ಆರ್.ಡಿ.ಲಮಾಣೆ, ಎಎಸ್‍ಐ ಸಿ.ಎಸ್.ಭಂಗಿ, ಎಸ್.ಎಂ.ಪಡಶೆಟ್ಟಿ, ಸಂಗಮೇಶ ಚಲವಾದಿ, ಎಂ.ಎಲ್.ಪಟ್ಟೇದ, ಪಿ.ಎಂ.ಗಣತಿ, ಪ್ರಭು ಪೂಜಾರಿ, ಮೊದಲಾದವರು ಇದ್ದರು.