ನಿರ್ಭಯವಾಗಿ ಮತ ನೀಡುವ ಹಕ್ಕು ಸಂವಿಧಾನ ನೀಡಿದೆ

ಸಂಜೆವಾಣಿ ವಾರ್ತೆ
ಲಿಂಗಸುಗೂರು.ಏ.೦೮- ಚುನಾವಣೆಯ ಸಂದರ್ಭದಲ್ಲಿ ಒಳ್ಳೆಯ ಅವಕಾಶ ಇರುತ್ತದೆ, ಮತದಾರರು ಅದನ್ನು ಸರಿಯಾಗಿ ಉಪಯೋಗಿಸಿಕೊಂಡು, ಮತದಾನ ಹಬ್ಬದಲ್ಲಿ ನಿರ್ಭಯವಾಗಿ ನಿಮಗೆ ಬೇಕಾದವರಿಗೆ ಮತ ನೀಡುವ ಹಕ್ಕು ಸಂವಿಧಾನ ನೀಡಿದೆ ಎಂದು ಮತದಾರರಿಗೆ, ಎಲ್ಲರೂ ಮತ ಗಟ್ಟಿಗೆ ಬಂದು ತಪ್ಪದೆ ಮತದಾನ ಮಾಡಬೇಕು ಎಂದು ಸಹಾಯಕ ಆಯುಕ್ತರು ಹಾಗೂ ಚುನಾವಣಾಧಿಕಾರಿಗಳು ಸಿಂಧೆ ಅವಿನಾಶ ಸಂಜೀವನ್ ಅವರು ಹೇಳಿದರು.
ತಾಲೂಕಿನ ಈಚನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭಾರತ ಚುನಾವಣಾ ಆಯೋಗ ೨೦೨೪, ಜಿಲ್ಲಾ ಪಂಚಾಯತ ರಾಯಚೂರು, ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯತ, ತಾಲೂಕು ಸ್ವಿಪ್ ಸಮಿತಿ ಲಿಂಗಸಗೂರು ಗ್ರಾಮ ಪಂಚಾಯತ್ ವತಿಯಿಂದ ಹಮ್ಮಿಕೊಂಡ ಲೋಕಸಭಾ ಸಾರ್ವತ್ರಿಕ ಚುನಾವಣೆ ೨೦೨೪ರ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಯಸ್ಸಾದವರಿಗೆ, ವಿಕಲಚೇತನರಿಗೆ ಮನೆಯಲ್ಲಿ ಮತ ನೀಡುವ ಅವಕಾಶವಿದೆ, ಮತದಾನದಿಂದ ಯಾರು ವಂಚಿತರಾಗದೆ ಅಂದಿನ ದಿನ ತಪ್ಪದೆ ನಿಮ್ಮ ಮತಗಟ್ಟೆಗೆ ಹೋಗಿ ಮತ ಚಲಾಹಿಸಬೇಕೆಂದರು.
ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಯಾದವ್ ಅವರು ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಅಭಿವೃದ್ಧಿ ಕಾಣಬೇಕಾದರೆ ಅತ್ಯಂತ ಶ್ರೇಷ್ಠವಾದ ಧಾನ ಮತದಾನ ಇಂತಹ ಪವಿತ್ರವಾದ ಹಬ್ಬದಲ್ಲಿ ದೇಶ ಆಳುವರನ್ನು ಆಯ್ಕೆ ಮಾಡುವುದು ಪ್ರಜೆಗಳ ಕೈಯಲ್ಲಿದೆ, ಯಾವ ಆಶೆ ಅಮಿಷೆಗೆ ಒಳಗಾಗದೆ ಯಾರು ಕೂಡ ಮತದಾನದಿಂದ ವಂಚಿತರಾಗದoತೆ, ಎಲ್ಲರೂ ಮೇ ೭ ರಂದು ಕಡ್ಡಾಯವಾಗಿ ತಪ್ಪದೆ ಮತದಾನ ಚಲಾಯಿಸಿ ಈ ಚುನಾವಣೆಯಲ್ಲಿ ಈಚನಾಳ ಭೂತ್ ನಿಂದ ಪ್ರತೀಶತ ಮತದಾನ ಹೆಚ್ಚಿಸಬೇಕು ಎಂದರು.
ನಂತರ ಮತದಾನ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.ಕಾರ್ಯಕ್ರಮದಲ್ಲಿ ತಾ.ಪಂ. ಸಹಾಯಕ ನಿರ್ದೇಶಕರು ವೆಂಕಟೇಶ ದೇಸಾಯಿ, ಪಿಡಿಒ ಖಾಜಾಬೇಗಂ, ಕಾರ್ಯದರ್ಶಿ ಶಿವಪ್ಪ, ತಾಂತ್ರಿಕ ಸಹಾಯಕ್ ಪರ್ವತರೆಡ್ಡಿ ಹಾಗೂ ಸಂಜೀವಿನಿ-ಟಿಪಿಎಂ ಈರಪ್ಪ, ಬಿಎಂ-ಕೃಷಿ. ಮಲ್ಲಪ್ಪ ಗಾಳಪೂಜಿ, ಸಿಎಸ್ ಸ್ಕಿಲ್- ಬಸವರಾಜ ಕಟ್ಟಿಮನಿ, ಡಿಇಒ ಸುರೇಶ, ಬಿಎಫ್ ಟಿ ದುರಗಣ್ಣ, ಬಸಮ್ಮ, ಉಮಾದೇವಿ, ಶ್ರೀದೇವಿ, ಸ್ವ ಸಹಾಯ ಗುಂಪಿನ ಮಹಿಳೆಯರು, ನರೇಗಾ ಮೆಟ್ ಗಳು ಹಾಜರಿದ್ದರು.