ನಿರ್ದೇಶಕ ನಾರಾಯಣ್ ಪುತ್ರ ಪಂಕಜ್ ಕಿರುತೆರೆಗೆ

ಬೆಂಗಳೂರು,ಜೂ.೨-ಇತ್ತೀಚೆಗೆ ಹಿರಿತೆರೆಯಲ್ಲಿ ಮಿಂಚಿದ ನಕ್ಷತ್ರಗಳು ಕಿರುತೆರೆಯಲ್ಲಿ ಅಭಿನಯಿಸುವ ಸಂಗತಿ ಸಾಮಾನ್ಯ. ಚೈತ್ರದ ಚಂದ್ರಮ, ಚೆಲುವಿನ ಚಿಲಿಪಿಲಿ, ಮೂಲಕ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡ ಎಸ್. ನಾರಾಯಣ್ ಸುಪುತ್ರ ಪಂಕಜ್ ಈಗ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದಾರೆ.
ಅತ್ಯುತ್ತಮ ಧಾರಾವಾಹಿಗಳ ಮೂಲಕ ಕನ್ನಡಿಗರ ಮನ ಗೆದ್ದಿರುವ ಸಿರಿಕನ್ನಡ ವಾಹಿನಿಯಲ್ಲಿ ಇದೆ ಜೂನ್ ೫ ರಿಂದ ಎರಡು ಮೆಗಾ ಧಾರಾವಾಹಿಗಳು ಊರ್ಮಿಳಾ ಬ್ರಾಹ್ಮಣರ ಕೆಫೆ ಮತ್ತು ರಿಯಾಲಿಟಿ ಶೋ ಸಖತ್ ಜೋಡಿ ಆರಂಭವಾಗಲಿದೆ. ಈ ಬಗ್ಗೆ ಮಾಹಿತಿ ನೀಡಲು ವಾಹಿನಿ ಪತ್ರಿಕಾಗೋಷ್ಠಿ ಆಯೋಜಿಸಿತ್ತು.
ತಾವು ಮತ್ತು ರಶ್ಮಿತಾ ನಟಿಸುತ್ತಿರುವ ‘ಊರ್ಮಿಳಾ’ ಧಾರಾವಾಹಿ ಜೂನ್ ೫ರಿಂದ ರಾತ್ರಿ ೮.೩೦ಕ್ಕೆ ಪ್ರಸಾರವಾಗಲಿದೆ ಎಂದು ಪಂಕಜ್ ಹೇಳಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಬಾಲನಟನಾಗಿ ಧಾರಾವಾಹಿಯಲ್ಲಿ ನಟಿಸಿದೆ. ಈಗ ಈ ಧಾರಾವಾಹಿಯ ಮೂಲಕ ಮತ್ತೆ ಕಿರುತೆರೆಗೆ ಬಂದಿದ್ದೇನೆ ಎಂದು ಹೇಳಿದರು. ನಂತರ ರಶ್ಮಿತಾ, ಆಶಾರಾಣಿ, ಶಿವು ಸೇರಿದಂತೆ ಹಲವು ಕಲಾವಿದರು ತಮ್ಮ ಪಾತ್ರದ ಬಗ್ಗೆ ವಿವರಿಸಿದರು.
ಜೂ.೫ರಿಂದ ಊರ್ಮಿಳಾ ಹಾಗೂ ಬ್ರಾಹ್ಮನ್ಸ್ ಕೆಫೆ ಎಂಬ ಎರಡು ಮೆಗಾ ಧಾರಾವಾಹಿಗಳು ಹಾಗೂ ಸಖತ್ ಜೋಡಿ ಎಂಬ ರಿಯಾಲಿಟಿ ಶೋ ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ನಮ್ಮ ವಾಹಿನಿಯಿಂದ ಅಪಾರ ವೆಚ್ಚದಲ್ಲಿ ಈ ರಿಯಾಲಿಟಿ ಶೋ ನಿರ್ಮಾಣವಾಗುತ್ತಿದೆ. ಈ ಶೋನಲ್ಲಿ ಭಾರಿ ಮೊತ್ತದ ಉಡುಗೊರೆಗಳು ಇದೆ. ಮುಂದೆ ನಮ್ಮ ವಾಹಿನಿಯ ವೀಕ್ಷಕರಿಗೆ ಅರ್ಧಗಂಟೆಗೊಮ್ಮೆ ಪ್ರಶ್ನೆ ಕೇಳುವುದು. ಗೆದ್ದವರಿಗೆ ವಿಶೇಷ ಬಹುಮಾನ ನೀಡುವ ಯೋಜನೆ ಕೂಡ ಇದೆ ಎಂದು ವಾಹಿನಿಯ ಮುಖ್ಯಸ್ಥ ರಾಜೇಶ್ ರಾಜಘಟ್ಟ ತಿಳಿಸಿದರು. ಸಂಸ್ಥಾಪಕ ನಿರ್ದೇಶಕ ಶಿವಕುಮಾರ್ ಉಪಸ್ಥಿತರಿದ್ದರು.
ನೀವು ನನ್ನನ್ನು ಹಾಸ್ಯನಟನಾಗಿ ಗುರುತಿಸಿದ್ದೀರಿ. ಹೇಮಲತಾ ಮತ್ತು ನಾನು ಸಖತ್ ಜೋಡಿ ಎಂಬ ಸಖತ್ ಶೋ ನಡೆಸಿ ಕೊಡುತ್ತಿದ್ದೇವೆ. ಈಗಾಗಲೇ ಮೂರು ಕಂತುಗಳ ಚಿತ್ರೀಕರಣ ನಡೆದಿದೆ. ಜೂನ್ ೫ ರಿಂದ ಸೋಮವಾರದಿಂದ ಶುಕ್ರವಾರ ದವರೆಗೆ ಸಂಜೆ ೬ ಗಂಟೆಗೆ ಸಖತ್ ಜೋಡಿ ಪ್ರಸಾರವಾಗಲಿದೆ. ಇದಕ್ಕಾಗಿ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿ ಸೆಟ್ ಹಾಕಲಾಗಿದೆ ಎಂದು ಹಿತೇಶ್ ತಿಳಿಸಿದರು.
ರವಿ ಆರ್ ಗರಣಿ ಬರೆದ ಬ್ರಹ್ಮನ ಕೆಫೆ ವಿಭಿನ್ನ ಕಥಾಹಂದರ ಹೊಂದಿದೆ. ಜೂನ್ ೫ ರಿಂದ ಸೋಮವಾರದಿಂದ ಶುಕ್ರವಾರ ದವರೆಗೆ ರಾತ್ರಿ ೯.೩೦ಕ್ಕೆ ಪ್ರಸಾರವಾಗಲಿದೆ. ಈ ಧಾರಾವಾಹಿಯ ಮೂಲಕ ಶಿವು ಎಂಬ ಹೊಸ ಹುಡುಗ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಗಾಯತ್ರಿ ಸೆಲ್ವಂ ಮತ್ತು ಸೆಲ್ವಂ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ ಎಂದು ನಿರ್ದೇಶಕ ಸಂಜೀವ್ ತಗಡೂರು ತಿಳಿಸಿದ್ದಾರೆ. ಶ್ರೀನಾಥ್ ವಸಿಷ್ಠ, ಪ್ರಥಂ ಪ್ರಸಾದ್, ಶಿವ, ರಾಮಸ್ವಾಮಿ ಮುಂತಾದವರು ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.