ನಿರ್ದೇಶಕ, ಆಡಳಿತ ಮಂಡಳಿಯ ಕಾರ್ಯದಿಂದ ಸಂಘದ ಬೆಳವಣಿಗೆ

ಸಿರವಾರ.ಮಾ.೨೬- ಒಂದು ಸಹಕಾರಿ ಸಂಘ ಪ್ರಾರಂಭ ಮಾಡುವುದು ಸುಲಭ, ಆದರೆ ಅದನ್ನು ಲಾಭದಲ್ಲಿ ಮುನ್ನಡಿಸಿಕೊಂಡು ಹೋಗುವುದಕ್ಕೆ ನಿರ್ಧೇಶಕರು ಸಂಘ ಕಾರ್ಯಗಳ ಬಗ್ಗೆ ಆಗಾಗೆ ವಿಕ್ಷಣೆ ಮಾಡುತ್ತಿರುವುದು, ಸಿಬ್ಬಂದಿ ವರ್ಗ ಸಕಾಲದಲ್ಲಿ ಸಾಲ ಮರುಪಾವತಿಸಿಕೊಳುತ್ತಿರುವುದರಿಂದ ಸಂಘವು ಲಾಭದಲ್ಲಿ ಸಾಗುತ್ತಿರುವುದು, ಇದು ಹೀಗೆ ಸಾಗಲಿ ಎಂದು ನವಲಕಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯರು ಹೇಳಿದರು. ಪಟ್ಟಣದ ಚುಕ್ಕಿ ತೇಜಸ್ ಮಹಲ್ ನಲ್ಲಿ ಶನಿವಾರ ಸಿರಿ ಸಂಜೀವಿನ ಸೌಹಾರ್ದ ಸಹಕಾರಿ ಸಂಘದ ಪ್ರಧಾನ ಕಛೇರಿ ಉದ್ಘಾಟಿಸಿ ಮಾತನಾಡಿದ ಅವರು ಸಹಕಾರಿ ಸಂಘ ಪ್ರಾರಂಭದಿಂದ ಚಿಕ್ಕಪುಟ್ಟ ವ್ಯಾಪಾರಸ್ಥರಿಗೆ ಆರ್ಥಿಕವಾಗಿ ಅನುಕೂಲವಾಗುವುದರ ಜೊತೆಗೆ ಸ್ಥಳಿಯ ಯುವಕರಿಗೆ ಉದ್ಯೋಗ ಸಿಕ್ಕು ನಿರುದ್ಯೋಗಕ್ಕೆ ಕಡಿವಾಣ ಹಾಕಿದಂತಾಗಿದೆ. ಸಂಘಗಳು ಹೆಚ್ಚು ಅದಂತೆ ಸಾಲ ಪಡೆಯುವವರು ಅವರೆ ಇರುತ್ತಾರೆ. ಸಾಲ ಪಡೆಯುವವರ ಆರ್ಥಿಕ ಸ್ಥಿತಿ, ವ್ಯಾಪಾರ ವ್ಯವಹಾರ ನೋಡಿ ಸಾಲ ನೀಡಿ ಸಂಸ್ಥೆ ಇದೇ ರೀತಿ ಲಾಭದಲ್ಲಿ ಸಾಗಲಿ ಎಂದರು. ಸಿ.ಸಂ.ಪ.ಸ.ಸಂ ಅದ್ಯಕ್ಷ ಚುಕ್ಕಿ ಸೂಗಪ್ಪಸಾಹುಕಾರ ಮಾತನಾಡಿ ಚಿಕ್ಕ ವ್ಯಾಪಾರಸ್ಥರಿಗೆ ೯ ವರ್ಷಗಳ ಹಿಂದೆ ಚಿಕ್ಕ, ಬೀದಿ ವ್ಯಾಪಾರಿಗಳ ಅನುಕೂಲಕ್ಕಾಗಿ, ಸ್ಥಳಿಯರಿಗೆ ಸುಲಭವಾಗಿ ಸಾಲ ದೊರೆಯಲೆಂದು ಬ್ಯಾಂಕ್ ಪ್ರಾರಂಭಿಸಲಾಯಿತು. ಇಂದು ಸ್ಥಳಿಯ ಸೇರಿ ಬೇರೆ ಬೇರೆ ಕಡೆ ಶಾಖೆಗಳನ್ನು ತೆರೆಯುವ ಮೂಲಕ ಉದ್ಯೋಗ , ಸಾಲ ನೀಡುವ ಆರ್ಥಿಕವಾಗಿ ನೇರವಾಗಿದೆವೆ ಎಂದರು. ಅತಿಥಿಗಳಾಗಿ ಸಿಂಧನೂರಿನ ರಾಜಶೇಖರ ಬಿ, ಜಿಲ್ಲಾ ಸಂಯೋಜಕರಾದ ವೆಂಕಟೇಶ ರಾಠೋಡ್, ನಿರ್ದೇಶಕರಾದ ವಿರೇಶ ಗಣೇಕಲ್,ವೈ.ಭೂಪನಗೌಡ, ರಮೇಶದರ್ಶನಕರ್, ವಾಸುಬಾಬು, ಪರಮೇಶ ಎಂ, ಶಿವಶರಣ ಅರಕೇರಾ, ಶರಣಪ್ಪ ಹುಯಲಗೋಳ,ಪವನ್ ದರ್ಶನಕರ್,ಮಲ್ಲಿಕಾರ್ಜುನ ಚತ್ತರಾಮ ಪಟೇಲ್,ಮಲ್ಲಿಕಾರ್ಜುನ ಚನ್ನೂರು, ರವಿಕುಮಾರ,ತಿಪ್ಪಣ್ಣ ಆಳೂರಿ, ಸಿ.ಓ ಮಹೇಶ ಸೇರಿದಂತೆ ಸಿಬ್ಬಂದಿ ವರ್ಗದವರು ಇದರು.