ನಿರ್ದೇಶಕಿಯಾದ ನಟಿ ಅಪೂರ್ವ ಗೌಡ

“ಓ ನನ್ನ ಚೇತನ ಚಿತ್ರದ” ಮೊದಲ ಹಾಡು  ಬಿಡುಗಡೆಯಾಗಿದೆ. ಚಿತ್ರದ ಮೂಲಕ ಕನ್ನಡಚಿತ್ರರಂಗಕ್ಕೆ ಮತ್ತೊಬ್ಬ ಮಹಿಳಾ ನಿರ್ದೇಶಕಿಯ ಆಗಮನವಾಗಿದೆ, ಅವರೇ ನಟಿ ಅಪೂರ್ವಗೌಡ.

ನಟಿ ಅಪೂರ್ವ ಗೌಡ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದೆ. ಒಂದು ಫೆÇೀನ್ ಸುತ್ತಾ ಸುತ್ತೋ ಹಳ್ಳಿ ಸೊಗಡಿನ ಸಿನಿಮಾ. ಹರಿ ಸಂತು ಕಥೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಪ್ರದೀಪ್ ವರ್ಮಾ ಸಂಗೀತವಿದೆ. ಹರಿ ಸಂತು ಸಾಹಿತ್ಯವಿರುವ ಅಂಜು ಹಾಡು ಬಿಡುಗಡೆಯಾಗಿದೆ.

ಮಾಧುರ್ಯ ಭರಿತವಾಗಿರೋ ಹಾಡಿಗೆ ಅಶ್ವಿನ್ ಶರ್ಮಾ ಧನಿಯಾಗಿದ್ದಾರೆ. ಗುರುಪ್ರಶಾಂತ್ ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಸಂಕಲ ಚಿತ್ರಕ್ಕಿದೆ. ಚಿತ್ರದ ಮುಖ್ಯಭೂಮಿಕೆಯಲ್ಲಿ ಮಾಸ್ಟರ್ ಪ್ರತೀಕ್, ಮಾಸ್ಟರ್ ಪ್ರೀತಮ್,ಬೇಬಿ ದಾನೇಶ್ವರಿ, ಬೇಬಿ ಡಿಂಪನಾ, ಬೇಬಿ ಮೋನಿಕಾ ನಟಿಸಿದ್ದಾರೆ.

ದೀಪಕ್ ವಿ. ಎಸ್ ಮಹೇಶ್, ವಿ. ಪ್ರಶಾಂತ್,ಹರೀಶ್ ಕುಮಾರ್, ಸಾಯಿ ಅಶೋಕ್ ಕುಮಾರ್, ಡಾ. ನಾರಾಯಣ್ ಹೊಸ್ಮನೆ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಂದೇಶ ಸಾರೋದ್ರ ಜೊತೆಗೆ ಔಟ್ ಅಂಡ್ ಔಟ್ ಎಂಟ್ರಟೈನ್ಮೆಂಟ್ ಪ್ಯಾಕೇಜ್ ಆಗಿ ಬರ್ತಿರೋ ಓ ನನ್ನ ಚೇತನ ಯಾವುದೇ ಮನರಂಜನೆಗೆ ಕಡಿಮೆ ಇಲ್ಲದ ಹಾಗೇ ಮೂಡಿ ಬಂದಿದೆ ಅನ್ನೋದು ಚಿತ್ರತಂಡದ ಮಾತು.