ನಿರ್ದೇಶಕನಾಗಲು ಹೊರಟ ನೃತ್ಯ ನಿರ್ದೇಶಕ

ಚುಟು ಚುಟು ಖ್ಯಾತಿಯ ನೃತ್ಯ‌ನಿರ್ದೇಶಕ ಭೂಷಣ್,  ರಾಜ ರಾಣಿ ರೋರರ್ ರಾಕೆಟ್ ಸಿನಿಮಾ ಮೂಲಕ ನಾಯಕನಾಗಿದ್ದರು. ಇದೀಗ ನಿರ್ದೇಶಕನಾಗಿ ಬಡ್ತೊ ಪಡೆದಿದ್ದಾರೆ. ನೃತ್ಯ‌ ನಿರ್ದೇಶನ, ನಾಯಕನಾಗಿ ಸಿನಿಮಾ ಪ್ರೇಮಿಗಳಿಗೆ ಪರಿಚಿತರಾಗಿದ್ದು‌ ನಿರ್ದೇಶಕರಾಗುತ್ತಿದ್ದಾರೆ.

ಸಿನಿಮಾ ಯಾವುದು  ಯಾವ ಜಾನರ್  ಹೀರೋ, ಮತ್ತಿತರ ಮಾಹಿತಿ ಬಗ್ಗೆ ಗುಟ್ಟುಬಿಟ್ಟುಕೊಟ್ಟಿಲ್ಲ. ಸದ್ಯ ಭೂಷಣ್ ಕಥೆ ಬರೆಯುವುದರಲ್ಲಿ ಬ್ಯುಸಿಯಾಗಿದ್ದಾರೆ. ಡಾಕ್ಟರ್, ಇಂಜಿನಿಯರ್ ಆಗಲು ಕೋರ್ಸ್ ಬೇಕು. ಆದರೆ ಡೈರೆಕ್ಟರ್ ಆಗಲು ಫೋರ್ಸ್ ಎಂಬ ವಿಡಿಯೋ ಝಲಕ್ ಮೂಲಕ‌ ಕಿಕ್ ಕೊಟ್ಟಿದ್ದಾರೆ.

 ಶೀಘ್ರದಲ್ಲೇ ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾ ಬಗ್ಗೆ ಇಂಟ್ರೆಸ್ಟಿಂಗ್ ಸಮಾಚಾರ  ಹಂಚಿಕೊಳ್ಳಲಿದ್ದಾರೆ. ಈಗಾಗಲೇ ಭಾರತೀಯ ಚಿತ್ರರಂಗದ ಮೈಕಲ್ ಜಾಕ್ಸನ್ ಪ್ರಭುದೇವ, ನೃತ್ಯ ನಿರ್ದೇಶನ, ನಟನೆ,‌ ನಿರ್ಮಾಣದ ಜೊತೆಗೆ ನಿರ್ದೇಶಕರಾಗಿಯೂ ಗೆದ್ದಿದ್ದಾರೆ. ಈಗ ಅವರ ಹಾದಿಯಲ್ಲೇ ಹೆಜ್ಜೆ ಇಟ್ಟಿದ್ದಾರೆ ಭೂಷಣ್.