ನಿರ್ದಿಷ್ಟವಾದ ಗುರಿ, ಸಾಧಿಸುವ ಛಲ ಇದ್ದರೆ ಸಾಧನೆ ಸುಲಭ : ಲಕ್ಷ್ಮಣ ಸವದಿ

ಅಥಣಿ : ಜು.10:ಜೀವನದಲ್ಲಿ ಆತ್ಮವಿಶ್ವಾಸ, ನಿರ್ದಿಷ್ಟವಾದ ಗುರಿ, ಸಾಧಿಸುವ ಛಲ ಹಾಗೂ ಸತತ ಪ್ರಾಮಾಣಿಕ ಪ್ರಯತ್ನದಿಂದ ಸಾಧನೆಯ ಹಾದಿ ಸುಲಭವಾಗುತ್ತದೆ ಎಂಬುದಕ್ಕೆ ನಮ್ಮ ಅಥಣಿ ತಾಲೂಕಿನ ಜನವಾಡ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದ ಸಾಹೇಬಲಾಲ ಕಮಾಲನವರ ಸಿ ಎ ಪರೀಕ್ಷೆ ಪಾಸ್ ಮಾಡುವ ಮೂಲಕ ಅನೇಕ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ ಎಂದು ಮಾಜಿ ಡಿಸಿಎಂ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು,
ಅವರು ತಾಲೂಕಿನ ರೆಡ್ಡೇರಹಟ್ಟಿ ಗ್ರಾಮದಲ್ಲಿ ಕಮಾಲನವರ ಬಂಧುಗಳು ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಮಗೆ ಜೀವನದಲ್ಲಿ ಬರುವ ಕಷ್ಟಗಳು ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಕಳಿಸುತ್ತವೆ. ಇಂದು ಸಿ ಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಸಾಹೇಬಲಾಲನ ತಂದೆ ಮಹ್ಮದ್ ಕಮಾಲವನರ ಬಡತನವನ್ನು ಮೆಟ್ಟಿನಿಂತು ತನ್ನ ಮೂರು ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ. ನಮ್ಮ ಜಮೀನು ಪಕ್ಕದ ಜಮೀನದಲ್ಲಿ ಪ್ರತಿದಿನವೂ ದುಡಿಯಲು ಬರುತ್ತಿದ್ದ ಮಹ್ಮದ್ ಜೀವನದಲ್ಲಿ ಬಹಳ ಕಷ್ಟಪಟ್ಟು ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ. ಇಂದು ಅವರ ಕಿರಿಯ ಮಗ ಅಖಿಲ ಭಾರತ ಲೆಕ್ಕ ಪರಿಶೋಧಕರ ಸಂಸ್ಥೆಯು ನಡೆಸುವ ಸಿ ಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಮೂಲಕ ಅವರ ಕುಟುಂಬಕ್ಕೆ, ಗ್ರಾಮಕ್ಕೆ ಅಷ್ಟೇ ಅಲ್ಲದೆ ತಾಲೂಕಿಗೆ ಕೀರ್ತಿ ತಂದಿದ್ದಾನೆ. ಅವರ ಮುಂದಿನ ಉದ್ಯೋಗ ಪ್ರಗತಿ ಹೊಂದಲಿ ಶುಭ ಹಾರೈಸಿದ ಅವರು ಕಷ್ಟದ ಜೀವನವನ್ನು ಗೆದ್ದು ಸಾಧನೆ ಹೊಂದಿದ ಮೇಲೆ ಕುಟುಂಬ, ಸಮಾಜ ಮತ್ತು ದೇಶವನ್ನ ಮರೆಯದೇ ಸಮಾಜಮುಖಿ ಸೇವೆಗಳನ್ನು ಸಲ್ಲಿಸುವ ಮೂಲಕ ನಮ್ಮ ಬದುಕು ಸಾರ್ಥಕ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು ನನ್ನ ರಾಜಕೀಯ ಜೀವನಕ್ಕೆ ಸದಾ ಬೆಂಬಲವನ್ನ ಸೂಚಿಸುತ್ತಾ ಇಂದು ಪ್ರೀತಿಯಿಂದ ಸನ್ಮಾನಿಸಿದ ಮಹ್ಮದ್ ಕಮಾಲನವರ ಬಂಧುಗಳಿಗೆ ಕೃತಜ್ಞತೆ ಸಲ್ಲಿಸಿದರು.
ನಂತರ ಶಾಸಕ ಲಕ್ಷ್ಮಣ ಸವದಿ, ಜನವಾಡ ಗ್ರಾಮದ ಸಿದ್ಧಾರೂಢ ಮಠದ ಪರಮಾನಂದ ಸ್ವಾಮೀಜಿ, ಕಮಾಲನವರ ಸಂಬಂಧಿಕರು ಸಿ ಎ ಪರೀಕ್ಷೆ ಪಾಸ್ ಮಾಡಿ ತಾಲೂಕಿಗೆ ಕೀರ್ತಿ ತಂದ ಸಾಹೇಬಲಾಲ ಅವರನ್ನು ಸನ್ಮಾನಿಸಿ ಶುಭ ಕೋರಿದರು. ಸನ್ಮಾನ ಸ್ವೀಕರಿಸಿದ ಸಾಹೇಬಲಾಲ ಕಮಾಲನವರ ಮಾತನಾಡಿ ಸಾಧನೆಗೆ ಬಡತನ ಅಡ್ಡಿಯಲ್ಲ, ವಿದ್ಯಾರ್ಥಿಗಳು ಪ್ರಯತ್ನಪಟ್ಟರೆ ಖಂಡಿತಾ ಯಶಸ್ಸು ಲಭಿಸಲಿದೆ. ಸತತ ಪರಿಶ್ರಮ ಮತ್ತು ನಿರ್ದಿಷ್ಟ ಗುರಿ, ಸಾಧಿಸುವ ಛಲ ಇದ್ದರೆ ಯಾರೂ ಬೇಕಾದರೂ ಸ್ಪರ್ಧಾತ್ಮಕ ಪರೀಕ್ಷೆ, ಸಿ.ಎ ಪರೀಕ್ಷೆಯನ್ನು ತೆಗೆದುಕೆuಟಿಜeಜಿiಟಿeಜಳ್ಳಬಹುದಾಗಿದೆ. ನನ್ನ ಸಾಧನೆಯ ಹಿಂದೆ ನನ್ನ ತಂದೆ ತಾಯಿ ಮತ್ತು ಸಹೋದರರ ಪರಿಶ್ರಮ, ಗುರುಗಳ ಮಾರ್ಗದರ್ಶನ ಮತ್ತು ನನ್ನ ನಿರಂತರ ಅಧ್ಯಯನದ ಫಲವಿದೆ. ಶಾಸಕರು, ಗ್ರಾಮಸ್ಥರು, ನಮ್ಮ ಬಂಧುಗಳು ಇಂದು ನನ್ನ ಸಾಧನೆಯನ್ನು ಕಂಡು ಸನ್ಮಾನಿಸಿ ಶುಭ ಕೋರುತ್ತಿರುವುದು ನನಗೆ ಸಂತಸ ತಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಂದೆ ಮಹ್ಮದ ಕಮಾಲನವರ, ಶಿಕ್ಷಕರಾದ ಇಮಾಮಸಾಬ ಕಮಾಲನವರ, ಎಸ್ ಎಮ್ ಪಟೇಲ, ಹಾಗೂ ಎಸ್ ಎಲ್ ಬಾಡಗಿ, ಸಂಬಂಧಿಕರಾದ ಮಹೆಬೂಬ ಮುಕ್ಕೇರಿ, ಮಾತನಾಡಿ ಸಾಧನೆಗೆ ಶುಭ ಹಾರೈಸಿದರು,

ಈ ಸಂದರ್ಭದಲ್ಲಿ ಶಿಕ್ಷಕರಾದ ಎಸ್ ಎಲ್ ಬಾಡಗಿ, ಇಮಾಮಸಾಬ ಎಂ ಕಮಾಲನವರ, ಎಸ್ ಎಮ್ ಪಟೇಲ, ನ್ಯಾಯವಾದಿಗಳಾದ ಎಮ್ ಬಿ ಮುಜಾಹೀದ, ಇಸ್ಮಾಯಿಲ್ ಕಮಾಲನವರ, ಗ್ರಾಮದ ಹಿರಿಯರಾದ ಶಿವಪ್ಪ ಯಲಶಟ್ಟಿ, ಹಣಮಂತ ಗೊಗವಾಡ, ಬಿಲಾಲ ಪಟೇಲ, ಈರಪ್ಪ ಗೊಗವಾಡ, ಗೌಡಪ್ಪ ಬಾಡಗಿ, ಮೌಲಾ ಕಮಾಲನವರ, ಸದಾಶಿವ ನೇಮಗೌಡ, ಉಸ್ಮಾನ್ ಪಾಟೀಲ, ಹನೀಫ್ ಪಾಟೀಲ, ಮುಬಾರಕ ಕಮಾಲನವರ, ಮಹೆಬೂಬ ಕಮಾಲನವರ, ಉಮರ ಕಮಾಲನವರ, ಶೌಕತ ಕಮಾಲನವರ, ನಬಿಸಾಬ ಕಮಾಲನವರ, ಸೇರಿದಂತೆ ಹಲವರು ಉಪಸ್ಥಿತರಿದ್ದರು,