ನಿರ್ಜನ ಪ್ರದೇಶಗಳಲ್ಲಿ ಅನುಮಾನಾಸ್ಪದ ವರ್ತನೆ : 22 ಜನರು ಪೊಲೀಸ್ ವಶಕ್ಕೆ

ಶಿವಮೊಗ್ಗ, ಜೂ. 3: ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿರ್ಜನ
ಪ್ರದೇಶಗಳಲ್ಲಿ, ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಹಾಗೂ ಅಸಭ್ಯ ವರ್ತನೆಗಳಲ್ಲಿ
ತೊಡಗಿದ್ದ ಆರೋಪದ ಮೇರೆಗೆ, 22 ಜನರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಜೂ. 1 ರ
ರಾತ್ರಿ ನಡೆದಿದೆ.
ಠಾಣಾ ವ್ಯಾಪ್ತಿಯ ಕಾಶೀಪುರ, ಆಲ್ಕೋಳ, ಗಾಡಿಕೊಪ್ಪ ಸುತ್ತಮುತ್ತಲಿನ ಪ್ರದೇಶಗಳಲ್ಲಿ
ಪೊಲೀಸರು ನಡೆಸಿದ ವಿಶೇಷ ಗಸ್ತು ಕಾರ್ಯಾಚರಣೆ ವೇಳೆ ಅನುಮಾನಾಸ್ಪದವಾಗಿ
ವರ್ತಿಸುತ್ತಿದ್ದವರನ್ನು ವಶಕ್ಕೆ ಪಡೆಯಲಾಗಿದೆ.
ವಶಕ್ಕೆ ಪಡೆದವರನ್ನು ಠಾಣೆಗೆ ಕರೆತಂದು ಅವರ ಪೂರ್ವಾಪರಗಳನ್ನು ಸಂಗ್ರಹಿಸಿದ್ದಾರೆ.
22 ಲಘು ಪ್ರಕರಣ ದಾಖಲಿಸಿಕೊಂಡು ಬಿಡುಗಡೆ ಮಾಡಿದ್ದಾರೆ.
ಪ್ರೊಬೇಷನರಿ ಐಪಿಎಸ್ ಅಧಿಕಾರಿ ಬಿಂದುಮಣಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ವಿನೋಬನಗರ ಠಾಣೆ ಇನ್ಸ್’ಪೆಕ್ಟರ್ ಸಂಜೀವ್ ಕುಮಾರ್ ಮಹಾಜನ್, ಸಬ್ ಇನ್ಸ್’ಪೆಕ್ಟರ್
ಸುನೀಲ್ ಮತ್ತವರ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.