ನಿರ್ಗತಿಕರ ರಕ್ಷಣೆಗೆ ಧಾವಿಸಲು ಜಿಲ್ಲಾಡಳಿತಕ್ಕೆ ಆಗ್ರಹ

ಕುಣಿಗಲ್, ಜು. ೨೩- ಶ್ರೀ ಕ್ಷೇತ್ರ ಎಡೆಯೂರು ಸಮೀಪ ೧೦ ಸಿಳ್ಳೆ ಖ್ಯಾತ ಕುಟುಂಬಗಳು ವಾಸಿಸಲು ಯೋಗ್ಯ ಮನೆಗಳಿಲ್ಲದೆ ನಿರ್ಗತಿಕರಾಗಿಯೇ ಬದುಕುತ್ತಿರುವ ಈ ಜನರ ರಕ್ಷಣೆಗೆ ಜಿಲ್ಲಾಡಳಿತ ಧಾವಿಸಬೇಕು ಎಂದು ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಸಿದ್ದಲಿಂಗೆಗೌಡ ಒತ್ತಾಯಿಸಿದ್ದಾರೆ.
ತಾಲ್ಲೂಕಿನ ಪುಣ್ಯಕ್ಷೇತ್ರ ಎಡೆಯೂರು ಗ್ರಾಮದಲ್ಲಿ ಕಳೆದ ೩೦ ವರ್ಷಗಳಿಂದ ಶಿಳ್ಳೆಕ್ಯಾತ ಜನಾಂಗದ ೧೦ ಕುಟುಂಬಗಳು ಮನೆಯಿಲ್ಲದೆ ಸುಮಾರು ೩೦ ವರ್ಷದಿಂದ ಸಿಳ್ಳೆಕ್ಯಾತ ಅಲೆಮಾರಿಗಳು ಕನಿಷ್ಠ ಸುರಕ್ಷತೆ ಇಲ್ಲದೆ ವಾಸಿಸುತ್ತಿದ್ದು, ಈ ಬಗ್ಗೆ ಜಿಲ್ಲಾಡಳಿತ ತಹಶೀಲ್ದಾರ್ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಒತ್ತಾಯಿಸಿ ಕೂಡಲೇ ಈ ವರ್ಗದ ಜನರಿಗೆ ವಾಸಿಸಲು ಯೋಗ್ಯವಾದ ಮನೆಗಳನ್ನು ನಿರ್ಮಿಸಿಕೊಡುವಂತೆ ರಾಜ್ಯ ಪ್ರಧಾನ ಕಾರ್ಯದರ್ಶಿ ದರ್ಶನ್, ಎಡೆಯೂರು ಗ್ರಾಮ ಪಂಚಾಯಿತಿಯ ಪಿಡಿಓ ರವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಮಾನವ ಹಕ್ಕುಗಳ ರಕ್ಷಣೆಗೆ ಒತ್ತಾಯಿಸಿದರು.