ನಿರ್ಗತಿಕರೊಂದಿಗೆ ಹೊಸವರ್ಷ ಆಚರಣೆ ಮಾಡಿದ ಹಳ್ಳಿಮನೆ ರಾಮಣ್ಣ

ಚಂದ್ರಶೇಖರ ಮದ್ಲಾಪೂರ
ಮಾನವಿ,ಜ.೦೨- ಪಟ್ಟಣದ ಪ್ರಸಿದ್ಧ ಹೋಟೆಲ್ ಹಾಗೂ ಆರೋಗ್ಯಕರ ಊಟಕ್ಕೆ ಹೆಸರುವಾಸಿಯಾದ ಹಳ್ಳಿಮನೆ ರಾಮಣ್ಣ ಎಂದೇ ಹೆಸರುವಾಸಿಯಾದ ರಾಮಣ್ಣ ಮೇಟಿ ಇವರು ಹೊಸ ವರ್ಷವನ್ನು ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದಾರೆ.
ಮೊದಲಿನಿಂದಲೂ ಹೋಟೆಲ್ ಉದ್ಯಮಿಯಾದ ಇವರು ಕಳೆದ ಕೆಲ ದಿನಗಳಿಂದ ಜನವರಿ ಆರೋಗ್ಯಕ ಶುಚಿ, ಸಿರಿ, ಧಾನ್ಯ, ಆಹಾರವನ್ನು ನೀಡಬೇಕು ಎನ್ನುವ ಉದ್ದೇಶದಿಂದ ಹಳ್ಳಿಮನೆ ಎನ್ನುವ ಹೆಸರಿನೊಂದಿಗೆ ಆರಂಭ ಮಾಡಿ, ಇಂದು ಅತ್ಯುತ್ತಮ ಹೆಸರು ಮಾಡಿರುವ ಇವರು ೨೦೨೩ ಹೊಸ ವರ್ಷದ ಅಂಗವಾಗಿ ಸರ್ಕಾರಿ ಬಸ್ಸು ನಿಲ್ದಾಣದಲ್ಲಿ ಊಟವಿಲ್ಲದೆ ನಿರ್ಗತಿಕವಾಗಿ ಬದುಕುತಿರುವ ಬಡವರ ಜೊತೆಗೆ ಆಚರಣೆ ಜೊತೆಗೆ ಅವರಿಗೆ ಊಟವನ್ನು ವಿತರಣೆ ಮಾಡಿ ತಮ್ಮ ಸಂತಸವನ್ನು ಹಂಚಿಕೊಂಡರು ಇವರ ಸೇವೆಯು ನಿತ್ಯ ನಿರಂತರವಾಗಿ ಸಾಗಲಿ ಎಂದು ಜನರ ಆಶಯವಾಗಿದೆ.
ಜನವರಿ ೧ ಸಂಜೆವಾಣಿ ಮಸ್ಕಿ ಬಳಗಾನೂರ್ ಪಟ್ಟಣ ಬಿ,ಜೆ,ಪಿಗರಿಂದ ಮೂಲ ಬಿ,ಜೆ,ಪಿ,ಗರ ಕಡೆಗಣನೆ,ಸುದ್ದಿಗೋಷ್ಠಿಯಲ್ಲಿ ಅಸಮಾಧಾನಸ್ಪೋಟ.
ವಲಸೆ ಬಿ,ಜೆ,ಪಿಗರಿಂದ ಮೂಲ ಬಿ,ಜೆ,ಪಿಗರ ಕಡೆಗಣನೆ ನಿರಂತರ ನಡೆದಿದೆ. ವರಿಷ್ಟರಿಗೆ ತಿಳಿಸಿದರೂ ತಾರತಮ್ಯ ನಿಂತಿಲ್ಲ ಹೀಗೇ ಮುಂದುವರೆದರೆ ನಾವೆಲ್ಲ ಸಭೆ ಸೇರಿ ಬೇರೆಯದೆ ನಿರ್ಧಾರ ತೆಗೆದುಕೋಳ್ಳಬೇಕಾಗುತ್ತದೆ ಎಂದು ಬಳಗಾನೂರು ಮಹಾಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ಬಿ,ಜೆ,ಪಿ,ಯುವ ಮುಖಂಡ ಬುಳ್ಳನಗೌಡ ಶಂಕ್ರಬಂಡಿ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.
ಇಂದು ಬೆಳಿಗ್ಗೆ ಬಳಗಾನೂರು ಪಟ್ಟಣದ ನಾರಾಯಣನಗರ ಕ್ಯಾಂಪ್‌ನ ಸೂರ್ಯಚಂದ್ರ ರಾವ್ ಎನ್ನುವ ಪಟ್ಟಣ ಪಂಚಾಯ್ತಿಯ ಮಾಜಿ ಸದಸ್ಯರ ಮನೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ನಾವು ತಳಮಟ್ಟದಲ್ಲಿ ಬಿ,ಜೆ,ಪಿಯನ್ನು ಕಟ್ಟಿ ಪಕ್ಷದ ಬಲವರ್ಧನೆಗೆ ಮತ್ತು ಮಾಜಿ ಶಾಸಕ ಪ್ರತಾಪಗೌಡರ ಗೆಲುವಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಆದರೆ ದುರಾದೃಷ್ಟವಶಾತ್ ಅವರಿಗೆ ಸೋಲಾಯಿತು.
ಆದರೆ ಮುಂಬರುವ ೨೦೨೩ ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಅವರ ಗೆಲುವಿಗಾಗಿ ಶ್ರಮಿಸುತ್ತೇವೆ. ಆದರೆ ಮಸ್ಕಿ ಮಂಡಲ ಬಿ,ಜೆ,ಪಿಯ ನಾಯಕರಿಂದ ಮೂಲ ಬಿ,ಜೆ,ಪಿಗರಿಗೆ ಅನ್ಯಾಯವಾಗುತ್ತಿದೆ ಇದು ಪಕ್ಷದ ಬಲವರ್ಧನೆಗೆ ಅಡ್ಡಿಯಾಗುತ್ತಿದೆ.
ಕಾರಣ ವರಿಷ್ಟರು ಮದ್ಯಪ್ರವೇಶಿಸಿ ಈ ಅಸಮಾಧಾನವನ್ನು ಉಪಶಮನ ಮಾಡದಿದ್ದರೆ ಪಕ್ಷಕ್ಕೆ ಹಿನ್ನಡೆಯಾಗುತ್ತದೆ. ಮತ್ತು ನಮ್ಮ ಬೆಂಬಲಿಗರ ಸಭೆ ಕರೆದು ಅವರ ಅಭಿಪ್ರಾಯ ಸಂಗ್ರಹಿಸಿ ಒಂದು ನಿರ್ಧಾರಕ್ಕೆ ಬರಲಾಗುವುದೆಂದು ಹೇಳಿದ್ದಾರೆ.
ನಂತರ ಮಾತನಾಡಿದ ಬಳಗಾನೂರು ಬಿ,ಜೆ,ಪಿ,ಗ್ರಾಮಘಟಕದ ಮಾಜಿ ಅಧ್ಯಕ್ಷ ವೀರೇಶ ಗಾಳಿಪೂಜಿ ಮಾತನಾಡಿ, ವಲಸೆ ಬಿ,ಜೆ,ಪಿಗರಿಂದ ಮೂಲ ಬಿಜೆಪಿಗರಿಗೆ ಅನ್ಯಾಯವಾಗುತ್ತಿದೆ. ಇದರಿಂದ ನಮ್ಮ ಶ್ರಮ ವ್ಯರ್ಥವಾಗುತ್ತಿದೆ. ವರಿಷ್ಟರು ಬಿ,ಜೆ,ಪಿ,ಮೋರ್ಚಾಗಳನ್ನು ರಚಿಸುವಾಗ ಬಳಗಾನೂರಿನ ಮುಖಂಡರನ್ನು ,ಕಾರ್ಯಕರ್ತರನ್ನು ಸಂಪೂರ್ಣ ಕಡೆಗಣಿಸಲಾಗಿದೆ.
ಇದು ಸಿಸ್ತಿನ ಪಕ್ಷವಾದ ಭಾರತೀಯ ಜನತಾಪಾರ್ಟಿಗೆ ಶೋಭೆ ತರುವಂತಹುದಲ್ಲವೆಂದು ಹೇಳಿದರು.
ನಂತರ ಪಟ್ಟಣ ಪಂಚಾಯ್ತಿಯ ಮಾಜಿ ಅಧ್ಯಕ್ಷೆಯ ಪತಿ ಇಸ್ಮಾಯಿಲ್ ಸಾಬ್ ಚೌದರಿ ಮಾತನಾಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿಯ ಮಾಜಿ ಸದಸ್ಯರುಗಳಾದ ಮುದುಕಪ್ಪ ಹಳ್ಳಿಗೌಡ್ರು, ಸೂರ್ಯಚಂದ್ರ ರಾವ್, ಮುಖಂಡರಾದ ಅಮರೇಶ ಕುಂಬಾರ್, ರಾಘವೇಂದ್ರ ದಾಯಿಪುಲ್ಲಿ, ಬೂದೆಪ್ಪ ಮಾಕಾಪೂರು, ಯಂಕನಗೌಡ ಗದ್ದಿ, ಶರಣೆಗೌಡ, ಪೊಲೀಸ್ ಪಾಟೀಲ್, ಹನುಮರಡ್ಡೆಪ್ಪ ಗೌಡ,ನಾಮದೇವ ಹಂಪರಗುಂದಿ,ಕಂಟೆಪ್ಪ ನಾಯಕ,ಪುಷ್ಪದತ್ ಹೂಗಾರ, ನಾಗರಾಜ ಹಂಚಿನಾಳ, ಅಮರೇಶ ಕಾರ್ಲ್ ಕುಂಟಿ, ಮಾರುತಿ, ರಡ್ಡೆಪ್ಪ, ನಾಗರಾಜ ನಾಯಕ,ಮರಿದೇವ ಪೂಜಾರಿ, ಅಯ್ಯಪ್ಪ ದಿವಟರ್,ಸೇರಿದಂತೆ ಅನೇಕ ಮುಖಂಡರಿದ್ದರು.