ನಿರ್ಗತಿಕರಿಗೆ ಮನೆಗೆ ತೆರಳಿ ಮಾಶಾಸನ ವಿತರಣೆ


ಬಾದಾಮಿ,ಮೇ.4: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ಬಾದಾಮಿ ವಲಯದಲ್ಲಿ ಪ್ರತಿ ತಿಂಗಳು 9 ಜನರಿಗೆ ನಿರ್ಗತಿಕರಿಗೆ ರೂ.750 ರಂತೆ ಮಾಸಾಶನ ನೀಡುತ್ತಿದ್ದು, ಯೋಜನಾಧಿಕಾರಿ ಗಣೇಶ ನಾಯ್ಕ ಇವರ ಮಾರ್ಗದರ್ಶನದಲ್ಲಿ ಕೋವಿಡ್ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಸದಸ್ಯರಿಗೆ ಅನುಕೂಲವಾಗುವಂತೆ ವಲಯದ ಮೇಲ್ವಿಚಾರಕರು ಗುರು ನಾಯ್ಕ, ಫಲಾನುಭವಿಗಳಾದ ನಗರದ ಗದ್ದೆವ್ವ ಬೇಲೂರಪ್ಪನ್ನವರ, ಗಂಗವ್ವ ಮಡಿವಾಳರ, ಹನಮವ್ವ ಬಾರಕೇರ, ಕಾತುಂಬಿ ಪೀರ್ಜಾದೆ, ಬಿಬಿಜಾನ್ ಮಕಾನದಾರ, ಮಲ್ಲವ್ವ ಮಡಿವಾಳರ, ಖಾಜಾಬಿ ಕುಂದೆನಾಯಕ, ಮಮತಾ ಬಾಗಲಕೋಟ, ಭೀಮವ್ವ ಜಲ್ಲಿ ಇವರ ಮನೆಗೆ ಹೋಗಿ ಮಸಾಶನವನ್ನು ವಿತರಿಸಲಾಯಿತು.
ಕೃತಜ್ಞತೆ ಸಲ್ಲಿಕೆ; ಮಶಾಸನ ಪಡೆದ ಮಹಿಳೆಯರು ಶ್ರೀ ಧರ್ಮಸ್ಥಳ ಮಂಜುನಾಥ ಸಂಸ್ಥೆಗೆ ಕೃತಜ್ಞತೆಗಳನ್ನು ಸಲ್ಲಿಸಿದರು.