ನಿರ್ಗತಿಕರಿಗೆ ಊಟ ಹಂಚಿಕೆ

ಕೋಲಾರ ಮೇ.೨೮: ಕೊರೋನಾ ಎರಡನೇ ಅಲೆಯ ಲಾಕ್‌ಡೌನ್‌ನಿಂದ ಜನರು ಆರ್ಥಿಕವಾಗಿ ಸಂಕಷ್ಠದಲ್ಲಿ ಸಿಲುಕಿದ್ದಾರೆ. ಅನಗತ್ಯ ಓಡಾಟ ಮತ್ತು
ವಾಹನ ಸಂಚಾರ ಹಾಗೂ ವಾಣಿಜ್ಯ ಮಳಿಗೆಗಳನ್ನು ಮುಚ್ಚಿದ್ದು, ಜನರ ಸಹಾಯದಿಂದ ಬದುಕುತ್ತಿದ್ದ ನಿರ್ಗತಿಕರು ಊಟವಿಲ್ಲದೆ ಪರದಾಡುವ
ಪರಿಸ್ಥಿತಿಯನ್ನು ಗಮನಿಸಿದ ಜಯ ಕರ್ನಾಟಕ ಕೋಲಾರ ಜಿಲ್ಲಾ ಸಂಘಟನೆಯ ಪದಾಧಿಕಾರಿಗಳು ದಿನಕ್ಕೊಬ್ಬರಂತೆ ನಿರ್ಗತಿಕರಿಗೆ ಊಟದ
ವ್ಯವಸ್ಥೆ ಮಾಡಿ ಹಂಚಿಕೆ ಮಾಡಲಾಗುತ್ತಿದೆ ಎಂದು ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಕೆ.ಆರ್. ತ್ಯಾಗರಾಜ್ ತಿಳಿಸಿದರು.
ಅವರು ಕೋಲಾರ ನಗರದಲ್ಲಿರುವ ನಿರ್ಗತಿಕರು ಬೀದಿಗಳ, ಅಂಗಡಿ ಮುಂಗಟ್ಟುಗಳ ಬಳಿ ಊಟವಿಲ್ಲದೆ ಅಸಹಾಯಕರಾಗಿ ಕುಳಿತಿರುವುದನ್ನು ಗಮನಿಸಿ ಅವರಿಗೆ ಊಟದ ಪೊಟ್ಟಣಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಇದೇ ರೀತಿ ಜಿಲ್ಲೆಯಲ್ಲಿ ಇತರ ಸಂಘಟನೆಗಳು ಕೂಡ ಇಂತಹ ನಿರ್ಗತಿಕರಿಗೆ ಸಹಾಯ ಹಸ್ತ ನೀಡುವಂತಹ ಕೆಲಸವಾಗಬೇಕು ಎಂದರು.
ಈ ಸಂದಭದಲ್ಲಿ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಸಂಚಾಲಕರಾದ ಕೆ.ಎನ್.ಪ್ರಕಾಶ್, ಕೊಂಡರಾಜನಹಳ್ಳಿ ವಿ.ಜಗದೀಶ್. ಸಂಘಟನಾ ಕಾರ್ಯದರ್ಶಿ ಅಮರನಾಥಸ್ವಾಮಿ, ಆಟೋ ಘಟಕದ ತಾಲೂಕು ಅಧ್ಯಕ್ಷ ಮಂಜುನಾಥ್‌ರಾವ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ನಾರಾಯಣಸ್ವಾಮಿ, ಮಂಜುನಾಥ್ ಸಿಂಗ್ ಮತ್ತಿತರರಿದ್ದರು.