ನಿರ್ಗತಿಕರಿಗೆ ಊಟದ ವ್ಯವಸ್ಥೆ:ಅಪ್ಪು ಕರೆ ಮಾಡಿ ಅಭಿನಂದನೆ

ರಾಯಚೂರು.ಮೇ.೩೧.ಕಳೆದ ೧೦೭ ದಿನಗಳಿಂದ ಲಾಕ್ ಡೌನ್ ಹಿನ್ನಲೆಯಲ್ಲಿ ಬಡವರಿಗೆ,ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದ ಸಾದಿಕ್ ಖಾನ್ ಅವರಿಗೆ ನಟ ಪುನೀತ್ ರಾಜಕುಮಾರ್ ಅವರು ದೂರವಾಣಿ ಮುಖಂತರಾ ಕರೆ ಮಾಡಿ ಅಭಿನಂದನೆ ಸಲ್ಲಿಸಿದರು.
ಕೊರೊನ ಮಹಾಮಾರಿ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗಿದ್ದು ಇದರಿಂದ ಬಡವರಿಗೆ,ನಿರ್ಗತಿಕರಿಗೆ ಆಹಾರ ವಿಲ್ಲದೆ ತೀವ್ರ ತೊಂದರೆಯಾಗಿದ್ದು ಅದರಿಂದ ಕಳೆದ ೧೦೭ ದಿನಗಳಿಂದ
ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾ ಘಟಕ ಹಾಗೂ ಅಪ್ಪು ಯೂತ್ ಬ್ರಿಗೇಡ್ ಜಿಲ್ಲಾ ಘಟಕದ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿದ್ದು ವಿಷಯ ತಿಳಿದ ಕನ್ನಡ ಚಲನಚಿತ್ರ ನಟ ಪುನೀತ್ ರಾಜಕುಮಾರ್ ಅವರು ಸಾದಿಕ್ ಖಾನ್ ಅವರಿಗೆ ದೂರವಾಣಿಯ ಮುಖಂತರಾ ಕರೆ ಮಾಡಿ ಅಭಿನಂದನೆ ಸಲ್ಲುಸಿರು.