ನಿರುಪಯುಕ್ತ ಕೊಠಡಿಯನ್ನು ಉಪಯೋಗಿಸುವಂತೆ ಮಾಡಿದ ಲೋಕರೆಡ್ಡಿ

ಸಿರವಾರ,ಮಾ.೧೮- ಶಾಲೆಯ ಕೊಠಡಿ ಬಳಸಲು ಯೋಗ್ಯವಾಗಿಲ್ಲ ಎಂದು ಹಾಗೆ ಬಿಟಿದ್ದರು. ಅದು ಅಲ್ಲದೆ ಶಾಲೆಗೆ ಶೌಚಾಲಯ ಇಲ್ಲ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಶಿಕ್ಷಣ ಪ್ರೇಮಿ, ಜೆಡಿಎಸ್ ಹಿರಿಯ ಮುಖಂಡ ಜಿ.ಲೋಕರೆಡ್ಡಿ ಅವರು ಸುಮಾರು ೮೦ ಸಾವಿರದಷ್ಟು ಸ್ವಂತ ಖರ್ಚು ಮಾಡಿ ಶೌಚಾಲಯಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಈ ಕುರಿತು ಮಾತನಾಡಿದ ಜಿ.ಲೋಕರೆಡ್ಡಿ ಅವರು ಪಟ್ಟಣದ ಪಿ.ಡಬ್ಲ್ಯೂಡಿ ಉನ್ನತೀಕರಿಸಿದ ಶಾಲೆಗೆ ಶೌಚಾಲಯವಿಲ್ಲ ಎಂದು ಶಿಕ್ಷಕರು ಶಾಸಕರಾದ ರಾಜಾ ವೆಂಕಟಪ್ಪ ನಾಯಕರಿಗೆ ಹಾಗೂ ನನಗೆ ಮನವಿ ಮಾಡಿಕೊಂಡಿದರು. ಹೊಸ ಕೊಠಡಿಗೆ ಅನುದಾನದ ಕೊರತೆ ಇತ್ತು. ಈಗಿರುವ ಕೊಠಡಿ ನಿರುಪಯುಕ್ತವಾಗಿತ್ತು.
ಅದಕ್ಕೆ ಪೈಪ್, ನೀರಿನ ವ್ಯವಸ್ಥೆ ಇನ್ನಿತರ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡಿಸಿ ಅನುಕೂಲ ಮಾಡಿರುವೆ ಎಂದಿದ್ದಾರೆ. ಶಾಲೆಗಳಿಗೆ ಊಟದ ತಟ್ಟೆ, ಗ್ಲಾಸ್, ನೆನಪಿನ ಕಾಣಿಕೆ ಇನ್ನೂ ಅನೇಕ ಕೊಡುಗೆ ನೀಡುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದೆ.