ನಿರುದ್ಯೋಗ ನಿವಾರಣೆಗೆ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ: ರಹಿಮ್ ಖಾನ್

ಸಂಜೆವಾಣಿ ವಾರ್ತೆ.
ಬೀದರ್:ಮೇ.14: ಕ್ಷೇತ್ರದಲ್ಲಿ ನಿರುದ್ಯೋಗಿ ಯುವಜನರು ಹೆಚ್ಚಾಗಿದ್ದು, ಉದ್ಯೋಗ ಸೃಷ್ಟಿಸಲು ಅನುಕುಲ ಆಗುವ ದಿಸೆಯಲ್ಲಿ ಬೀದರ್‍ನಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡುವುದಾಗಿ ಸ್ಥಳಿಯ ಶಾಸಕ ರಹಿಮ್ ಖಾನ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ನನ್ನನ್ನು ನಾಲ್ಕನೇ ಬಾರಿಗೆ ಆಯ್ಕೆಗೊಳಿಸಿರುವ ಕ್ಷೇತ್ರದ ಜನತೆಗೆ ಹೃದಯಾರೆ ಕೃತಜ್ಞತೆ ಸಲ್ಲಿಸುವೆ ಸರ್ವ ಸಮುದಾಯಗಳ ಪ್ರೀತಿ, ವಿಶ್ವಾಸವೇ ಚುನಾವಣೆಯಲ್ಲಿ ನನ್ನ ಭಾರಿ ಬಹುಮತದ ಗೆಲುವಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಕ್ಷೇತ್ರದ ಜನರಿಗೆ ಎಂದೆಂದೂ ಚಿರಋಣಿಯಾಗಿರುವೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಆಡಳಿತದ ಚುಕ್ಕಾಣಿ ಹಿಡಿಯಲಿರುವುದರಿಂದ ಅವರ ನಿರೀಕ್ಷೆಗಳ ಸಾಕಾರಕ್ಕೆ ಶಕ್ತಿ ಮೀರಿ ಪ್ರಯತ್ನಿಸುವೆ ಎಂದು ಹೇಳಿದ್ದಾರೆ.
ನಾಲ್ಕನೇ ಗೆಲುವು ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಲು ನನಗೆ ಇನ್ನಷ್ಟು ಹುಮ್ಮಸ್ಸು ನೀಡಿದೆ. ಕ್ಷೇತ್ರದಲ್ಲಿ ಈವರೆಗೆ ಮೂಲಸೌಕರ್ಯಕ್ಕೆ ಪ್ರಾತಿನಿಧ್ಯ ಕೊಟ್ಟಿದ್ದೇನೆ. ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಆಭಿವೃದ್ಧಿಗೂ ಆದ್ಯತೆ ನೀಡುವೆ ಎಂದು ಹೇಳಿದ್ದಾರೆ.
ಜನರ ಹಿತ ರಕ್ಷಣೆ ಹಾಗೂ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ಸರ್ವ ಪ್ರಯತ್ನಗಳನ್ನು ಮಾಡುವೆ ಎಂದು ರಹಿಮ್ ಖಾನ್ ತಿಳಿಸಿದ್ದಾರೆ.