ನಿರೀಕ್ಷೆ ಹೆಚ್ಚಿಸಿದ‌ ಕೆಜಿಎಫ್-2

ರಾಕಿಂಗ್ ಸ್ಟಾರ್ ಯಶ್ ಅಭಿನಯದಲ್ಲಿ, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ -2. ದೇಶಾದ್ಯಂತ ಸದ್ದು ಮಾಡಿದ್ದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚು ಮಾಡಿದೆ.

ಚಿತ್ರದ ಬಿಡುಗಡೆಯ ದಿನಾಂಕ ಸನಿಹವಾಗುತ್ತಿದ್ದಂತೆ ಚಿತ್ರ ಪ್ರೇಮಿಗಳ ಕಾತರ ಹೆಚ್ಚಾಗುತ್ತಿದೆ.ಈಗಾಗಲೇ ಚಿತ್ರದ ಬಿಡುಗಡೆ ದಿನಾಂಕ ಪ್ರಕಟಿಸಲಾಗಿದ್ದು ಎಲ್ಲಾ ಅಂದುಕೊಂಡಂತೆ ಆದರೆ ಜು.16 ಕ್ಕೆ ತೆರೆಗೆ ಬರಲಿದೆ.

ಕೊರೋನಾ ಸೋಂಕಿನಿಂದ ಚಿತ್ರಮಂದಿರ ಬಂದ್ ಆಗಿದ್ದು ಯಾವಾಗ ಪುನರಾರಂಭವಾಗಲಿದೆ ಎನ್ನುವುದು ಸದ್ಯಕ್ಕಿರುವ ಕುತೂಹಲ. ವೆಬ್‍ಸೈಟ್‍ನಲ್ಲಿ ಹೊಸ ಚಿತ್ರ ಬಿಡುಗಡೆಯಾಗುವುದಕ್ಕೆ ಒಂದಷ್ಟು ದಿನಗಳ ಮುಂಚೆ ಸಿನಿಮಾ ನೋಡಲು ಕಾಯುತ್ತಿದ್ದೀರಾ? ಎಂಬ ಆಯ್ಕೆಯೊಂದು ಸಿನಿಮಾದ ಪೋಸ್ಟರ್ ಜೊತೆಗೆ ಬರುತ್ತದೆ. ಅದೇರೀತಿ ಕೆಜಿಎಫ್- 2 ಚಿತ್ರದ ಬಗ್ಗೆ ಹಾಕಿದಾಗ ಈ ಚಿತ್ರವನ್ನು ನೋಡಲು ಕಾಯುತ್ತಿರುವುದಾಗಿ 3 ಲಕ್ಷಕ್ಕೂ ಹೆಚ್ಚು ಮಂದಿ ಆಸಕ್ತಿ ವ್ಯಕ್ತಪಡಿಸಿದ್ದಾರೆ

ಮೂರು ಲಕ್ಷಕ್ಕೂ ಹೆಚ್ಚು ಜನ ಸಿನಿಮಾ ನೋಡಲು ಕಾತರವಾಗಿದ್ದೇವೆ ಎಂದು ಪ್ರತಿಕ್ರಿಯಿಸಿರುವುದು ಇದೇ ಮೊದಲು. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ 2018ರಲ್ಲಿ ಬಿಡುಗಡೆಯಾಗಿದ್ದ ಕೆಜಿಎಫ್ ಸಿನಿಮಾದ ಮುಂದುವರೆದ `ಭಾಗವಾಗಿ ಕೆಜಿಎಫ್- 2 ಚಿತ್ರ ನಿರ್ಮಾಣವಾಗಿದೆ.

ಜುಲೈ 16ರಂದು ಬಿಡುಗಡೆಗೆ ದಿನಾಂಕವೂ ನಿಗದಿ ಆಗಿದೆ. ಈ ಸಿನಿಮಾದಲ್ಲಿ ಯಶ್ ಜೊತೆಗೆ ಬಾಲಿವುಡ್‍ನ ಸಂಜಯ್ ದತ್, ರವೀನಾ ಟಂಡನ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಉಳಿದಂತೆ ನಾಯಕಿಯಾಗಿ ಶ್ರೀನಿ ಶೆಟ್ಟಿ ಅವರೇ ಮುಂದುವರೆದಿದ್ದಾರೆ.

ಹಿರಿಯನಟ ಪ್ರಕಾಶ್ ರೈ ಅಲ್ಲದೆ ಇನ್ನೂ ಹಲವು ಪ್ರಮುಖ ಕಲಾವಿದರು ಇಲ್ಲಿ ನಟಿಸಿದ್ದಾರೆ. ಕೆಜಿಎಫ್ -2 ಸಿನಿಮಾದ ಟ್ರೇಲರ್ ಕಡಿಮೆ ಅವಧಿಯಲ್ಲಿ 100 ಮಿಲಿಯನ್‍ಗೂ ಹೆಚ್ಚು ಮಂದಿ ವೀಕ್ಷಿಸಿದ್ದರು.

ಎಲ್ಲಾ ಅಂದುಕೊಂತೆ ಆದರೆ ಜುಲೈ 16ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ಕೆಜಿಎಫ್ -2 ಈ ಸರಣಿಯ ಕೊನೆಯ ಸಿನಿಮಾ ಆಗಿದ್ದು, ಕೆಜಿಎಪ್ -3 ಆಗಲಿ, ಕೆಜಿಎಫ್-4 ಆಗಲಿ ಮುಂದೆ ಬರುವುದಿಲ್ಲ, ಈಕಥೆಯನ್ನು ಎರಡನೇ ಹಂತಕ್ಕೆ ಅಂತ್ಯ ಮಾಡಲಾಗುತ್ತದೆ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಸ್ಪಷ್ಟಪಡಿಸಿದ್ದಾರೆ